ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆ ಆರಂಭ – ಮಾರ್ಚ್ 31 ಕೊನೆಯ ದಿನ!

Spread the love

Ration Card Correction Update Karnataka 2026: ರಾಜ್ಯದಲ್ಲಿ ನಕಲಿ ದಾಖಲೆಗಳಿಂದ ಪಡೆದ ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸುವ ಕಾರ್ಯ ಮುಂದುವರೆದಿರುವ ನಡುವೆಯೇ, ಪಡಿತರ ಚೀಟಿ ತಿದ್ದುಪಡಿ(Ration card correction)ಗೆ ಸರ್ಕಾರ ಮತ್ತೆ ಅವಕಾಶ ಕಲ್ಪಿಸಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಮಾರ್ಚ್ 31, 2026ರವರೆಗೆ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ರೇಷನ್ ಕಾರ್ಡ್ ನ ತಿದ್ದುಪಡಿಯಲ್ಲಿ ಏನೆಲ್ಲ ತಿದ್ದುಪಡಿ ಮಾಡಿಸಬಹುದು ಹಾಗೂ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಸಲು ಯಾವೆಲ್ಲ ದಾಖಲೆ ಬೇಕು ಹಾಗೂ ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಕೊನೆವರೆಗೂ ತಪ್ಪದೇ ಓದಿ ತಿಳಿದುಕೊಳ್ಳಿ.

Table of Contents

ರೇಷನ್ ಕಾರ್ಡ್‌ನಲ್ಲಿ ಮಾಡಬಹುದಾದ ಪ್ರಮುಖ ತಿದ್ದುಪಡಿಗಳು | Ration Card Correction Update Karnataka 2026

Ration Card Correction Update Karnataka 2026: ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆ ಆರಂಭ – ಮಾರ್ಚ್ 31 ಕೊನೆಯ ದಿನ! FREE

ಸರ್ಕಾರ ನೀಡಿರುವ ಮಾರ್ಗಸೂಚಿಗಳ ಪ್ರಕಾರ ರೇಷನ್ ಕಾರ್ಡ್‌ನಲ್ಲಿ ಹಲವು ರೀತಿಯ ತಿದ್ದುಪಡಿಗಳನ್ನು ಮಾಡಿಕೊಳ್ಳಲು ಅವಕಾಶ ಇದೆ. ಈ ಸೇವೆಗಳು ರಾಜ್ಯದ ಜನರಿಗೆ ದೊಡ್ಡ ನೆರವಾಗಲಿವೆ. ಪ್ರಮುಖವಾಗಿ ಕೆಳಗೆ ತಿಳಿಸಿರುವ ಬದಲಾವಣೆಗಳನ್ನು ಮಾಡಿಸಬಹುದು.

Ration Card Name Correction Karnataka – ಹೆಸರಿನ ತಪ್ಪು ಸರಿಪಡಿಸುವುದು

ಕೆಲವೊಮ್ಮೆ ರೇಷನ್ ಕಾರ್ಡ್‌ನಲ್ಲಿ ನಮೂದಿಸಿರುವ ಹೆಸರು ಮತ್ತು ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಒಂದೇ ರೀತಿಯಲ್ಲಿ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಆಧಾರ್ ಕಾರ್ಡ್‌ನಲ್ಲಿ ಇರುವ ಮಾಹಿತಿಯಂತೆ ಹೆಸರಿನ ಸ್ಪೆಲ್ಲಿಂಗ್ ಅಥವಾ ವಿವರಗಳನ್ನು ತಿದ್ದುಪಡಿಯನ್ನು ಮಾಡಿಸಬಹುದು.

Ration Card New Member Add Karnataka – ಹೊಸ ಸದಸ್ಯರ ಹೆಸರು ಸೇರಿಸುವುದು

ಕುಟುಂಬದಲ್ಲಿ ಹೊಸ ಮಗು ಜನಿಸಿದರೆ ಅಥವಾ ಮದುವೆಯಾದ ನಂತರ ಹೊಸ ಸದಸ್ಯರು ಕುಟುಂಬಕ್ಕೆ ಸೇರಿದರೆ, ಅವರ ಹೆಸರನ್ನು ರೇಷನ್ ಕಾರ್ಡ್‌ನಲ್ಲಿ ಸೇರಿಸಿಕೊಳ್ಳಬಹುದು. ಇದಕ್ಕಾಗಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ .

Ration Card Member Delete Karnataka – ಸದಸ್ಯರ ಹೆಸರು ತೆಗೆದುಹಾಕುವುದು

ಕುಟುಂಬದ ಯಾವುದೇ ಒಬ್ಬ ಸದಸ್ಯರು ಮೃತಪಟ್ಟಿದ್ದರೆ ಅಥವಾ ಬೇರೆ ಸ್ಥಳಕ್ಕೆ ಶಾಶ್ವತವಾಗಿ ವಲಸೆ ಹೋಗಿದ್ದರೆ, ಅವರ ಹೆಸರನ್ನು ರೇಷನ್ ಕಾರ್ಡ್‌ನಿಂದ ತೆಗೆದುಹಾಕುವ ವ್ಯವಸ್ಥೆಯೂ ಇದೆ.

Ration Card Address Change Karnataka – ವಿಳಾಸ ಮತ್ತು ಮೊಬೈಲ್ ಸಂಖ್ಯೆ ಬದಲಾವಣೆ

ಕೆಲ ಸಂದರ್ಭಗಳಲ್ಲಿ ಮನೆ ವಿಳಾಸ ಬದಲಾಗಬಹುದು ಅಥವಾ ಹೊಸ ಮೊಬೈಲ್ ಸಂಖ್ಯೆಯನ್ನು ರೇಷನ್ ಕಾರ್ಡ್‌ಗೆ ಲಿಂಕ್ ಮಾಡಬೇಕಾಗಬಹುದು. ಇಂತಹ ಮಾಹಿತಿಯನ್ನು ಕೂಡ ರೇಷನ್ ಕಾರ್ಡ್‌ನಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.

APL to BPL Ration Card Karnataka – ಕಾರ್ಡ್ ವರ್ಗ ಬದಲಾವಣೆ

ಕುಟುಂಬದ ಆರ್ಥಿಕ ಪರಿಸ್ಥಿತಿಯಲ್ಲಿ ಬದಲಾವಣೆ ಉಂಟಾದರೆ, APL ರೇಷನ್ ಕಾರ್ಡ್ ಹೊಂದಿರುವವರು BPL ಕಾರ್ಡ್‌ಗೆ ಬದಲಾವಣೆ ಮಾಡಲು ಸರ್ಕಾರದ ನಿಯಮಗಳ ಪ್ರಕಾರ ಅರ್ಜಿ ಸಲ್ಲಿಸಬಹುದು.

Ration Card Fair Price Shop Change Karnataka – ನ್ಯಾಯಬೆಲೆ ಅಂಗಡಿ ಬದಲಾವಣೆ

ಕೆಲವರಿಗೆ ತಮ್ಮ ನಿವಾಸದ ಹತ್ತಿರ ಇರುವ ನ್ಯಾಯಬೆಲೆ ಅಂಗಡಿ ಬದಲಾಯಿಸುವ ಅಗತ್ಯ ಇರಬಹುದು. ಇಂತಹ ಸಂದರ್ಭಗಳಲ್ಲಿ ರೇಷನ್ ಕಾರ್ಡ್ ಅನ್ನು ಮತ್ತೊಂದು ನ್ಯಾಯಬೆಲೆ ಅಂಗಡಿಗೆ ವರ್ಗಾವಣೆ ಮಾಡಿಕೊಳ್ಳುವ ಅವಕಾಶವೂ ಇದೆ.

Karnataka Ration Card Correction Documents – ರೇಷನ್ ಕಾರ್ಡ್ ತಿದ್ದುಪಡಿಗೆ ಬೇಕಾಗುವ ದಾಖಲೆಗಳು

ರೇಷನ್ ಕಾರ್ಡ್ ತಿದ್ದುಪಡಿ ಅಥವಾ ಹೊಸ ಸದಸ್ಯರ ಹೆಸರು ಸೇರಿಸಲು ಕೆಳಗಿನ ದಾಖಲೆಗಳು ಸಾಮಾನ್ಯವಾಗಿ ಅಗತ್ಯವಾಗುತ್ತವೆ.

  • ಹಳೆಯ ರೇಷನ್ ಕಾರ್ಡ್ ಪ್ರತಿಗಳು
  • ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಪ್ರತಿಗಳು ಬೇಕು
  • ಜಾತಿ ಹಾಗೂ ಆದಾಯ ಪ್ರಮಾಣ ಪತ್ರ (BPL ಕಾರ್ಡ್‌ಗೆ ಅರ್ಜಿ ಸಲ್ಲಿಸುವವರಿಗೆ)
  • ಮಗುವಿನ ಹೆಸರು ಸೇರಿಸಲು ಜನನ ಪ್ರಮಾಣ ಪತ್ರ ಬೇಕು
  • ಮೃತ ಸದಸ್ಯರ ಹೆಸರು ತೆಗೆದುಹಾಕಲು ಮರಣ ಪ್ರಮಾಣ ಪತ್ರ ಬೇಕು
  • ಕುಟುಂಬದ ಮುಖ್ಯಸ್ಥರ ಪಾಸ್‌ಪೋರ್ಟ್ ಗಾತ್ರದ ಫೋಟೋ ಬೇಕು
  • ಆಧಾರ್‌ಗೆ ಲಿಂಕ್ ಆಗಿರುವ ಸಕ್ರಿಯ ಮೊಬೈಲ್ ನಂಬರ್ ಬೇಕು

Ration Card Correction Online Karnataka – ಆನ್ಲೈನ್ ಮೂಲಕ ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿ ಸಲ್ಲಿಸುವ ವಿಧಾನ

  • ಮೊದಲು ಅಧಿಕೃತ ವೆಬ್ಸೈಟ್ https://ahara.kar.nic.in ಗೆ ಭೇಟಿ ನೀಡಿ
  • ಮುಖ್ಯ ಪುಟದಲ್ಲಿ ‘ಇ-ಸೇವೆಗಳು’ ಅಥವಾ ‘e-Services’ ಮೇಲೆ ಕ್ಲಿಕ್ ಮಾಡಿಕೊಳ್ಳಿ
  • ನಂತರ ‘ತಿದ್ದುಪಡಿ ಅಥವಾ ಹೊಸ ಸೇರ್ಪಡೆಗೆ ವಿನಂತಿ‘ ಆಯ್ಕೆಮಾಡಿ
  • ನಂತರ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗಿ
  • ನಂತರ ಫಾರ್ಮ್ ಭರ್ತಿ: ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ,ತಿದ್ದುಪಡಿ ಅಗತ್ಯವಿರುವ ಮಾಹಿತಿಯನ್ನು ಆಯ್ಕೆಮಾಡಿ,ಸಂಬಂಧಪಟ್ಟ ಮಾಹಿತಿಯನ್ನು ಭರ್ತಿ ಮಾಡಿ
  • ನಂತರ ಅಗತ್ಯ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್ಲೋಡ್ ಮಾಡಿ (PDF/JPG – ಗರಿಷ್ಠ 2 MB)
  • ನಂತರ ನಮೂದಿಸಿದ ಮಾಹಿತಿಯನ್ನು ಪರಿಶೀಲಿಸಿ
  • ನಂತರ ಫಾರ್ಮ್ ಅನ್ನು ಸಬ್ಮಿಟ್ ಮಾಡಿ
  • ಅರ್ಜಿ ಸಲ್ಲಿಕೆಯಾದ ನಂತರ ಬರುವ ಸ್ವೀಕೃತಿ ಸಂಖ್ಯೆಯನ್ನು (Acknowledgement Number) ನೋಟ್ ಮಾಡಿಕೊಳ್ಳಿ ಅಥವಾ ಪ್ರಿಂಟ್ ತೆಗೆದುಕೊಳ್ಳಿ

Ration Card Correction Offline Karnataka – ಆಫ್ಲೈನ್ ಮೂಲಕ ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿ ಸಲ್ಲಿಸುವ ವಿಧಾನ

ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ(Correction) ಮಾಡಿಸಲು ನಿಮ್ಮ ಹತ್ತಿರ ಇರುವಂತಹ ಬೆಂಗಳೂರು ಒನ್ ಕೇಂದ್ರಗಳು ಅಥವಾ ಗ್ರಾಮ ಒನ್ ಕೇಂದ್ರಗಳು ಅಥವಾ ಕರ್ನಾಟಕ ಒನ್ ಕೇಂದ್ರಗಳು ಅಥವಾ ಸೈಬರ್ ಸೆಂಟರ್‌ಗಳು ಅಥವಾ ತಾಲೂಕು/ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈ ತಿಳಿಸಿರುವ ಕಚೇರಿಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಹೋಗಿ ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿ ಸಲ್ಲಿಸಬಹುದು

Ration Card Application Status Karnataka 2026 – ರೇಷನ್ ಕಾರ್ಡ್ ಅರ್ಜಿ ಸ್ಥಿತಿ ಪರಿಶೀಲಿಸುವುದು ಹೇಗೆ?

ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿ ಸಲ್ಲಿಸಿದ ಬಳಿಕ ಅದರ ರೇಷನ್ ಕಾರ್ಡ್ ತಿದ್ದುಪಡಿ ಆಗಿದೆಯಾ ಅಂತ ಸ್ಥಿತಿಯನ್ನು ಈ ಕೆಳಗೆ ತಿಳಿಸಿರುವ ವಿಧಾನಗಳಲ್ಲಿ ಪರಿಶೀಲಿಸಬಹುದು:

  • ಮೊದಲು ಅಹಾರ ಪೋರ್ಟಲ್ https://ahara.kar.nic.in ಗೆ ಭೇಟಿ ನೀಡಿ
  • ನಂತರ ‘ಅರ್ಜಿ ಸ್ಥಿತಿ ಪರಿಶೀಲನೆ’ (Track Application Status) ಆಯ್ಕೆಮಾಡಿ ಸ್ವೀಕೃತಿ ಸಂಖ್ಯೆ ನಮೂದಿಸಿ
  • ನಂತರ ನಿಮ್ಮ ಅರ್ಜಿ ಸ್ಥಿತಿ ಕಾಣುತ್ತೆ ಅಪ್ಡೇಟ್ ಆಗಿದಿಯಾ ಇಲ್ಲವಾ ಅಂತ ಹಾಗೆ ನಿಮ್ಮ ಅರ್ಜಿ ಯಾವ ಅಧಿಕಾರಿಯ ಹತ್ತಿರ ಇದೆ ಅಂತ ಕಾಣುತ್ತೆ

ಆಫ್ಲೈನ್ ಮೂಲಕ ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿ ಸ್ಥಿತಿ ಚೆಕ್(Ration Card Correction Application Status Check) ಮಾಡಲು : ಅರ್ಜಿ ಸಲ್ಲಿಸಿದ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ ಸ್ವೀಕೃತಿ ಪತ್ರ ತೋರಿಸಿ ಅವರು ಚೆಕ್ ಮಾಡಿ ಮಾಹಿತಿ ನೀಡುತ್ತಾರೆ

Important Tips for Ration Card Correction Karnataka 2026 – ರೇಷನ್ ಕಾರ್ಡ್ ತಿದ್ದುಪಡಿಗೆ ಪ್ರಮುಖ ಸೂಚನೆಗಳು

  • ಅರ್ಜಿ ಸ್ವೀಕೃತಿ ಸಂಖ್ಯೆ ಕಡ್ಡಾಯ: ಆನ್‌ಲೈನ್ ಅರ್ಜಿ ಸಲ್ಲಿಸಿದ ತಕ್ಷಣ ಬರುವ ಸ್ವೀಕೃತಿ ಪತ್ರವನ್ನು (Acknowledgement) ಪ್ರಿಂಟ್ ತೆಗೆದುಕೊಂಡು ಇಟ್ಟುಕೊಳ್ಳಿ. ಇದರ ಮೂಲಕ ನಿಮ್ಮ ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.
  • ಸರ್ವರ್ ಸಮಸ್ಯೆಗೆ ಪರಿಹಾರ: ಆನ್‌ಲೈನ್‌ನಲ್ಲಿ ಸರ್ವರ್ ಸಮಸ್ಯೆ ಎದುರಾದರೆ, ಬೆಳಗ್ಗೆ 6-9 ಅಥವಾ ರಾತ್ರಿ 8 ಗಂಟೆಯ ನಂತರ ಅರ್ಜಿ ಸಲ್ಲಿಸುವುದು ಉತ್ತಮ. ಈ ಸಮಯದಲ್ಲಿ ಟ್ರಾಫಿಕ್ ಕಡಿಮೆ ಇರುತ್ತದೆ.
  • ತಿದ್ದುಪಡಿಯಾದ ಕಾರ್ಡ್ ಸಿಗುವ ಅವಧಿ: ಸಾಮಾನ್ಯ ಅವಧಿ: 15-30 ದಿನಗಳು / ತುರ್ತು ಸಂದರ್ಭ (7-10 ದಿನಗಳು)
  • ಹೊಸ ರೇಷನ್ ಕಾರ್ಡ್(New Ration card application) ಗೆ ಅವಕಾಶ ಇಲ್ಲ: ಈ ಸುತ್ತಿನಲ್ಲಿ ಹೊಸ ರೇಷನ್ ಕಾರ್ಡ್ ಪಡೆಯಲು ಅವಕಾಶ ಕಲ್ಪಿಸಿಲ್ಲ. ಕೇವಲ ಅಸ್ತಿತ್ವದಲ್ಲಿರುವ ಕಾರ್ಡ್‌ಗಳ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆ ಮಾತ್ರ.

Fake BPL Ration Card Karnataka 2026 – ನಕಲಿ ದಾಖಲೆ ನೀಡಿದರೆ ಏನಾಗುತ್ತದೆ?

ರಾಜ್ಯದಲ್ಲಿ ಸದ್ಯ ನಕಲಿ ದಾಖಲೆ ಸೃಷ್ಟಿಸಿ ಪಡೆದ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುವ ಕಾರ್ಯ ಭರದಿಂದ ಸಾಗಿದೆ. ತಪ್ಪು ಮಾಹಿತಿ ನೀಡಿ ಅಥವಾ ನಕಲಿ ದಾಖಲೆ ಸಲ್ಲಿಸಿ ತಿದ್ದುಪಡಿ ಮಾಡಿಸಲು ಯತ್ನಿಸಿದರೆ:

  • ನಿಮ್ಮ ರೇಷನ್ ಕಾರ್ಡ್ ತಕ್ಷಣ ರದ್ದು
  • ಮುಂದಿನ 3-5 ವರ್ಷಗಳವರೆಗೆ ಹೊಸ ಕಾರ್ಡ್ ಪಡೆಯಲು ಅನರ್ಹ
  • ಕಾನೂನು ಕ್ರಮ (ದಂಡ/ಜೈಲು ಶಿಕ್ಷೆ ಸಾಧ್ಯತೆ)

ಆದ್ದರಿಂದ ಸತ್ಯ ಮತ್ತು ನಿಖರ ಮಾಹಿತಿ ನೀಡುವುದು ಕಡ್ಡಾಯ.

Back To Home Pageಇಲ್ಲಿ ಕ್ಲಿಕ್ ಮಾಡಿ

Conclusion – Karnataka Ration Card Update 2026

ನಕಲಿ ಕಾರ್ಡ್‌ಗಳನ್ನು ರದ್ದುಪಡಿಸುವ ಜೊತೆಜೊತೆಗೇ ನಿಜವಾದ ಅರ್ಹ ಫಲಾನುಭವಿಗಳಿಗೆ ತಮ್ಮ ಮಾಹಿತಿ ಅಪ್ಡೇಟ್ ಮಾಡಿಕೊಳ್ಳಲು ಸರ್ಕಾರ ಈ ಅವಕಾಶ ಕಲ್ಪಿಸಿದೆ. ಮಾರ್ಚ್ 31, 2026 ರ ನಂತರ ಈ ಪೋರ್ಟಲ್ ನಿಷ್ಕ್ರಿಯವಾಗಲಿದ್ದು, ಮುಂದಿನ ಸುತ್ತಿನ ತಿದ್ದುಪಡಿಗಾಗಿ ತಿಂಗಳುಗಟ್ಟಲೆ ಕಾಯಬೇಕಾಗುತ್ತದೆ.

ಇನ್ನು ತಡಮಾಡಬೇಡಿ. ಇಂದೇ ನಿಮ್ಮ ದಾಖಲೆಗಳನ್ನು ಸಿದ್ಧಪಡಿಸಿಕೊಂಡು, ಆನ್‌ಲೈನ್ ಮೂಲಕ ಅಥವಾ ಹತ್ತಿರದ ಕರ್ನಾಟಕ ಒನ್/ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಿ. ನಿಮ್ಮ ಕುಟುಂಬದ ಸರ್ಕಾರಿ ದಾಖಲೆ ನಿಖರವಾಗಿರಲಿ, ಸರ್ಕಾರದ ಎಲ್ಲಾ ಯೋಜನೆಗಳ ಲಾಭ ಪಡೆಯಿರಿ.

ಗಮನಿಸಿ: ಕರ್ನಾಟಕ ಫ್ಲ್ಯಾಶ್‌ನಲ್ಲಿ ಪ್ರಕಟವಾಗುವ ಎಲ್ಲಾ ಮಾಹಿತಿ ಸಂಪೂರ್ಣವಾಗಿ ನಿಖರ ಮತ್ತು ಅಧಿಕೃತವಾಗಿರುತ್ತದೆ. ಯಾವುದೇ ಅನಧಿಕೃತ ಅಥವಾ ತಪ್ಪು ಮಾಹಿತಿಯನ್ನು ಪ್ರಕಟಿಸುವುದಿಲ್ಲ.

FAQ – Karnataka ration card correction online 2026

6 ವರ್ಷದ ಮೇಲ್ಪಟ್ಟ ಮಗುವಿಗೆ ಜಾತಿ ಪ್ರಮಾಣಪತ್ರ ಸೇರಿಸುವುದು ಹೇಗೆ?

ನೀವು ಆನ್‌ಲೈನ್ ಅರ್ಜಿಯಲ್ಲಿ “ಸದಸ್ಯರ ಜಾತಿ/ಆದಾಯ ಅಪ್ಡೇಟ್” ಆಯ್ಕೆ ಆರಿಸಿ, ಮಗುವಿನ ಜಾತಿ ಪ್ರಮಾಣಪತ್ರ ಮತ್ತು ಆದಾಯ ಪ್ರಮಾಣಪತ್ರ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು.

ನನ್ನ ಮಗಳ ಮದುವೆಯಾಗಿದೆ. ಆಕೆಯ ಹೆಸರನ್ನು ನಮ್ಮ ರೇಷನ್ ಕಾರ್ಡ್‌ನಿಂದ ತೆಗೆಯುವುದು ಹೇಗೆ?

“ಸದಸ್ಯರ ಹೆಸರು ತೆಗೆದುಹಾಕುವುದು” ಆಯ್ಕೆ ಆರಿಸಿ, ಮಗಳ ಮದುವೆ ಪ್ರಮಾಣಪತ್ರ ಮತ್ತು ಗಂಡನ ರೇಷನ್ ಕಾರ್ಡ್ ಪ್ರತಿ (ಇದ್ದಲ್ಲಿ) ಲಗತ್ತಿಸಿ ಅರ್ಜಿ ಸಲ್ಲಿಸಿ. ಇದು “ಹೆಸರು ತೆಗೆಯುವುದು” ವಿಭಾಗಕ್ಕೆ ಸೇರುತ್ತದೆ.

ಮೊಬೈಲ್ ಸಂಖ್ಯೆ ಬದಲಾಗಿದೆ. ಅರ್ಜಿ ಸಲ್ಲಿಸಲು ಸಮಸ್ಯೆಯಾಗುತ್ತಿದೆ. ಏನು ಮಾಡಬೇಕು?

ನೀವು ನೇರವಾಗಿ ಸಮೀಪದ ಕರ್ನಾಟಕ ಒನ್ ಕೇಂದ್ರ ಅಥವಾ ಆಹಾರ ಇಲಾಖೆ ಕಚೇರಿಗೆ ಭೇಟಿ ನೀಡಿ, ಹೊಸ ಮೊಬೈಲ್ ಸಂಖ್ಯೆ ಜೋಡಣೆಗೆ ಪ್ರತ್ಯೇಕ ಅರ್ಜಿ ಸಲ್ಲಿಸಿ. ನಂತರ ತಿದ್ದುಪಡಿ ಮಾಡಿಸಬಹುದು.

ನನ್ನ ತಂದೆ ತೀರಿಕೊಂಡಿದ್ದಾರೆ. ಅವರ ಹೆಸರು ತೆಗೆದು ನನ್ನ ಹೆಸರನ್ನು ಮುಖ್ಯಸ್ಥರಾಗಿ ಮಾಡುವುದು ಹೇಗೆ?

ಇದು “ಕುಟುಂಬದ ಮುಖ್ಯಸ್ಥರ ಬದಲಾವಣೆ” ವಿಭಾಗಕ್ಕೆ ಸೇರುತ್ತದೆ. ಮರಣ ಪ್ರಮಾಣಪತ್ರ, ನಿಮ್ಮ ಆಧಾರ್ ಮತ್ತು ಇತರ ಸದಸ್ಯರ ಆಧಾರ್ ಜೊತೆ ಅರ್ಜಿ ಸಲ್ಲಿಸಿ.

ತಿದ್ದುಪಡಿ ಅರ್ಜಿ ಸಲ್ಲಿಸಿದ ಮೇಲೆ ಚೆಕ್ ಮಾಡುವುದು ಹೇಗೆ?

ಅದೇ ವೆಬ್‌ಸೈಟ್ https://ahara.kar.nic.in ನಲ್ಲಿ “ಅರ್ಜಿ ಸ್ಥಿತಿ ಪರಿಶೀಲಿಸಿ” (Application Status) ಆಯ್ಕೆ ಕ್ಲಿಕ್ ಮಾಡಿ, ನಿಮ್ಮ ಸ್ವೀಕೃತಿ ಸಂಖ್ಯೆ ನಮೂದಿಸಿ ವೀಕ್ಷಿಸಬಹುದು.

Leave a Comment