PM Kisan 22nd Installment Alert:ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ ಫಲಾನುಭವಿಗಳಿಗೆ ಸಂತಸದ ಸುದ್ದಿ! ಬಂದಿದೆ 21ನೇ ಕಂತಿನ ಹಣವು ಯಶಸ್ವಿಯಾಗಿ ಪಡೆದಿರುವ ದೇಶದ ಕೋಟ್ಯಂತರ ರೈತರುಗಳು ಈಗ 22ನೇ ಕಂತಿನ ₹2000 ಹಣ(PM Kisan 22nd Installment)ಯಾವಾಗ ಬರುತ್ತೆ ಅಂತ ಕಾಯುತ್ತಿದ್ದಾರೆ. ಈಗ ಹೋಳಿ ಹಬ್ಬಕ್ಕೆ ರೈತರ ಬ್ಯಾಂಕ್ ಖಾತೆಗೆ 22ನೇ ಕಂತಿನ 2,000 ಹಣ ಜಮಾ ಮಾಡಿ ಸಿಹಿ ಸರ್ಪ್ರೈಸ್ ಕೊಡೋಕೆ ಕೇಂದ್ರ ಸರ್ಕಾರ ಸಕಲ ಸಿದ್ಧತೆ ಆಗಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(Pradhan Mantri Kisan Samman Nidhi scheme) (ಪಿಎಂ-ಕಿಸಾನ್) ಯೋಜನೆಯ ರೈತರ ಬ್ಯಾಂಕ್ ಖಾತೆಗೆ ₹2000 ಜಮಾ ಆಗಲು ಈ ಕೆಲಸ ಮಾಡದಿದ್ರೆ ಹಣ(amount) ಬರೋದು ಸಾಧ್ಯತೆ ಇಲ್ಲ! ಯಾವ ಕೆಲಸ ಮಾಡಬೇಕು ಹಾಗೂ ಫಲಾನುಭವಿಗಳ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ನಿಮ್ಮ ಬ್ಯಾಂಕಲ್ಲಿ ಹಣ ಜಮಾ ಆಗುತ್ತೆ, ಹೇಗೆ ಚೆಕ್ ಮಾಡಬೇಕು ಅಂತ ಸಂಪೂರ್ಣ ಮಾಹಿತಿ ಈ ಕೆಳಗೆ ತಿಳಿಸಿದ್ದೇವೆ.
Table of Contents
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ 22ನೇ ಕಂತಿನ ಹಣ ಫೆಬ್ರವರಿ ಕೊನೆಯ ವಾರದಲ್ಲಿ ಹಣ ಬಿಡುಗಡೆ ಮಾಡುವ ಸಾಧ್ಯತೆ?

ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) 22ನೇ ಕಂತಿನ ಹಣ ಅಧಿಕೃತವಾಗಿ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡದಿಲ್ಲದಿದ್ದರೂ. ಹಿಂದೆ ಕಳೆದ ವರ್ಷ ಕಂತಿನ ಹಣ ಬಿಡುಗಡೆ ಆಗಿರುವ ದಿನಾಂಕ ನೋಡಿದರೆ ಈ ಫೆಬ್ರವರಿ ತಿಂಗಳ ಅಂತ್ಯದೊಳಗೆ ಬಿಡುಗಡೆಯಾಗುವ ಸಾಧ್ಯತೆ ತುಂಬಾ ಇದೆ
ಈ ಹಿಂದೆ 17ನೇ ಕಂತನ್ನ ಫೆಬ್ರವರಿ 26 ರಿಂದ 28ರ ನಡುವೆ ಹಣ ವರ್ಗಣೆಯಾಗಿತ್ತು. ಈ ಹಿಂದೆ ವರ್ಷ ನೋಡಿದರೆ ಈ ವರ್ಷವೂ ಕೂಡ ಫೆಬ್ರವರಿ 26 ರಿಂದ 28ರ 2026 ನಡುವೆ ಪಿಎಂ-ಕಿಸಾನ್ ಎಲ್ಲಾ ಫಲಾನುಭವಿಗಳ ಖಾತೆಗೆ ಹಣವು ಬಿಡುಗಡೆ ಸಾಧ್ಯತೆ ಇದೆ. ಆದ್ರೆ ಅಧಿಕೃತ ಘೋಷಣೆ ಮಾತ್ರ ಬರಲಿ ಕಾದು ನೋಡ್ಬೇಕು.
ಪಿಎಂ ಕಿಸಾನ್ ಯೋಜನೆ ಈ ಕೆಲಸ ಮಾಡದಿದ್ದರೆ 22ನೇ ಕಂತಿನ ಹಣ ಬರೋದು ಅನುಮಾನ! Pradhan Mantri Kisan Samman Nidhi scheme
ಅನೇಕ ರೈತರು ಅರ್ಹರಾಗಿದ್ದರೂ ಸಣ್ಣಪುಟ್ಟ ತಾಂತ್ರಿಕ ಕಾರಣಗಳಿಂದ ಹಣದಿಂದ ವಂಚಿತರಾಗುತ್ತಾರೆ. ನೀವು ಪಿಎಂ ಕಿಸಾನ್ ಯೋಜನೆ 22ನೇ ಕಂತಿನ ಹಣವನ್ನು ನೇರವಾಗಿ ಪಡೆಯಬೇಕಾದ್ರೆ ಈ ಕೆಳಗಿನ ಮೂರು ಕೆಲಸಗಳನ್ನು ಕಡ್ಡಾಯವಾಗಿ ಮಾಡಿಕೊಳ್ಳಿ. ಇವು ಅಪೂರ್ಣವಾಗಿದ್ದರೆ ನಿಮ್ಮ ಖಾತೆಗೆ ಹಣ ಬರೋದು ಡಿಲೇ ಆಗಬಹುದು ಇಲ್ಲಾ ಸಂಪೂರ್ಣವಾಗಿ ರಿಜೆಕ್ಟ್ ಆಗಬಹುದು.
ಈ ಮೂರು ಕೆಲಸ ಮಾಡಿದ್ರೆ ಮಾತ್ರ ಹಣ ಬರುತ್ತೆ! PM Kisan 22nd Installment Alert
- ಇ-ಕೆವೈಸಿ (e-KYC) ಕಡ್ಡಾಯ: ನಿಮ್ಮ ಪಿಎಂ ಕಿಸಾನ್ ಖಾತೆಗೆ ಇ-ಕೆವೈಸಿ ಪೂರ್ಣಗೊಂಡಿರಲೇಬೇಕು. ಇನ್ನೂ ಮಾಡದೇ ಇದ್ದರೆ ತಕ್ಷಣವೇ ಮಾಡಿಸಿಕೊಳ್ಳಿ. ನಿಮ್ಮೂರಿನ ಸಿಎಸ್ಸಿ (CSC) ಸೆಂಟರ್ ಅಥವಾ ಗ್ರಾಮ ಒನ್ ಕೇಂದ್ರದಲ್ಲಿ ಸುಲಭವಾಗಿ ಮಾಡಿಸಬಹುದು. ಆನ್‌ಲೈನ್ ನಲ್ಲೂ ಮಾಡೋ ಆಪ್ಷನ್ ಇದೆ.
- ಆಧಾರ್ ಲಿಂಕ್ ಮರೆಯಬೇಡಿ: ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಕಡ್ಡಾಯವಾಗಿ ಲಿಂಕ್ ಆಗಿರಬೇಕು. ಹಾಗಿಲ್ಲ ಅಂದ್ರೆ ಹಣ ಟ್ರಾನ್ಸ್ಫರ್ ಆಗೋದಕ್ಕೆ ತೊಂದರೆಯಾಗುತ್ತೆ. ನಿಮ್ಮ ಬ್ಯಾಂಕ್ ಗೆ ಹೋಗಿ ಅಥವಾ ಮೊಬೈಲ್ ಬ್ಯಾಂಕಿಂಗ್ ಆಪ್ ಮೂಲಕ ಇದನ್ನು ಖಾತ್ರಿಮಾಡಿಕೊಳ್ಳಿ.
- ಲ್ಯಾಂಡ್ ಸೀಡಿಂಗ್ (Land Seeding) ಆಗಿರಲೇಬೇಕು: ಇದು ತುಂಬಾ ಇಂಪಾರ್ಟೆಂಟ್. ನಿಮ್ಮ ಜಮೀನಿನ ದಾಖಲೆಗಳು (ಭೂಮಿ ರೆಕಾರ್ಡ್) ಸರ್ಕಾರದ ಪೋರ್ಟಲ್ ನಲ್ಲಿ ಅಪ್ಡೇಟ್ ಆಗಿರಬೇಕು ಮತ್ತು ಅದು ನಿಮ್ಮ ಆಧಾರ್ ನಂಬರ್ ಜೊತೆ ಸೀಡ್ ಆಗಿರಬೇಕು.
ಈ ಮೂರೂ ಪ್ರಕ್ರಿಯೆಗಳು ಅಪೂರ್ಣವಾಗಿದ್ದರೆ, ತಕ್ಷಣವೇ ಹತ್ತಿರದ ಸಿಎಸ್ ಸಿ (CSC) ಕೇಂದ್ರ, ಗ್ರಾಮ ಒನ್ ಕೇಂದ್ರ ಅಥವಾ ನಿಮ್ಮ ಬ್ಯಾಂಕ್ ಗೆ ಭೇಟಿ ನೀಡಿ ಸರಿಪಡಿಸಿಕೊಳ್ಳಿ. ಇವುಗಳನ್ನು ಮುಗಿಸಿದ್ರೆ ಮಾತ್ರ ಹಣ ನೇರವಾಗಿ ನಿಮ್ಮ ಖಾತೆ ಸೇರುತ್ತೆ.
ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡೋದು ಹೇಗೆ? pm kisan beneficiary list check
ನನ್ನ ಹೆಸರು ಲಿಸ್ಟ್ ನಲ್ಲಿದೆಯಾ? ಅನ್ನೋ ಸಂಶಯ ನಿಮಗಿದ್ದರೆ, ಈ ಸುಲಭ ಈ ಕೆಳಗಿನ ಹಂತಗಳನ್ನು ಅನುಸರಿಸಿ ನಿಮ್ಮ ಊರಿನ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೋ ಇಲ್ಲವೋ ಅಂತ ನೋಡಬಹುದು.
- ಮೊದಲು ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡಿ: pmkisan.gov.in
- ವೆಬ್ಸೈಟ್ ಓಪನ್ ಆದ್ಮೇಲೆ ಹೋಮ್ ಪೇಜ್ ನಲ್ಲಿ ‘Farmer Corner‘ ಅನ್ನೋ ಸೆಕ್ಷನ್ ಕಾಣುತ್ತೆ. ಅಲ್ಲಿ ‘Beneficiary List‘ ಆಯ್ಕೆ ಮಾಡಿಕೊಳ್ಳಿ.
- ಈಗ ನಿಮ್ಮ ರಾಜ್ಯ (ಕರ್ನಾಟಕ), ಜಿಲ್ಲೆ, (ತಾಲೂಕು), ಮತ್ತು ಕೊನೆಗೆ ನಿಮ್ಮ ಗ್ರಾಮದ ಹೆಸರು ಸರಿಯಾಗಿ ಆಯ್ಕೆ ಮಾಡಿ.
- ನಂತರ ‘Get Report‘ ಅಥವಾ ‘Search’ ಬಟನ್ ಮೇಲೆ ಕ್ಲಿಕ್ ಮಾಡಿ.
- ನಂತರ ಕ್ಲಿಕ್ ಮಾಡಿದ ಕೂಡಲೇ ನಿಮ್ಮ ಭಾಗದ ಎಲ್ಲಾ ಫಲಾನುಭವಿ ರೈತರ ಸಂಪೂರ್ಣ ಪಟ್ಟಿ(pm kisan beneficiary list) ಪಿಡಿಎಫ್ ಬರುತ್ತೆ .
- ಈ ಪಿಡಿಎಫ್ ಫೈಲ್ ನಲ್ಲಿ ನಿಮ್ಮ ಹೆಸರು, ತಂದೆ/ಗಂಡನ ಹೆಸರು, ಆಧಾರ್ ನಂಬರ್ ಸಹಿತ ಪಟ್ಟಿ ಇರುತ್ತೆ. ಅದನ್ನ ನೋಡಿ ಕನ್ಫರ್ಮ್ ಮಾಡಿಕೊಳ್ಳಿ.
ಪಿಎಂ ಕಿಸಾನ್ ನಿಮ್ಮ ಪಾವತಿ ಸ್ಥಿತಿ (Checking Payment Status) ತಿಳಿಯಿರಿ
ಪಿಎಂ ಕಿಸಾನ್ ಪೋರ್ಟಲ್ ನಲ್ಲಿ ‘Know Your Status‘ ಅನ್ನೋ ಸೆಕ್ಷನ್ ಇದೆ. ಅಲ್ಲಿ ನಿಮ್ಮ ನೋಂದಣಿ ಸಂಖ್ಯೆ (ರಿಜಿಸ್ಟ್ರೇಶನ್ ಐಡಿ) ಅಥವಾ ಮೊಬೈಲ್ ಸಂಖ್ಯೆ ಹಾಕಿ ಸರ್ಚ್ ಮಾಡಿದ್ರೆ ನಿಮಗೆ ಎಷ್ಟು ಕಂತು ಬಂದಿದೆ, ಯಾವ ಕಂತು ಬಾಕಿ ಇದೆ, 22ನೇ ಕಂತಿನ ಸ್ಟೇಟಸ್ ಏನು ಅನ್ನೋದೆಲ್ಲಾ ಕ್ಲಿಯರ್ ಆಗಿ ತಿಳಿಯುತ್ತೆ.
Pradhan Mantri Kisan Samman Nidhi Payment Status ಹೇಗೆ ಚೆಕ್ ಮಾಡೋದು?
- ಮೊದಲು ಪಿಎಂ ಕಿಸಾನ್ ವೆಬ್ಸೈಟ್ pmkisan.gov.in ಓಪನ್ ಮಾಡಿ.
- ನಂತರ ‘Farmers Corner‘ ಅಡಿಯಲ್ಲಿ ‘Know Your Status‘ ಆಯ್ಕೆಮಾಡಿ.
- ನಂತರ ನಿಮ್ಮ ಆಧಾರ್ ನಂಬರ್, ಮೊಬೈಲ್ ನಂಬರ್ ಅಥವಾ ಅಕೌಂಟ್ ನಂಬರ್ ನಮೂದಿಸಿ.
- ನಂತರ ‘Get Status‘ ಬಟನ್ ಒತ್ತಿದ ಕೂಡಲೇ ನಿಮ್ಮ ಮಾಹಿತಿ ಮುಂದೆ ಕಾಣಿಸುತ್ತದೆ. ಅದರಲ್ಲಿ 22ನೇ ಕಂತಿನ ಪೇಮೆಂಟ್ ಸ್ಥಿತಿವನ್ನೂ ನೋಡಬಹುದು.
Back To Home Page: ಇಲ್ಲಿ ಕ್ಲಿಕ್ ಮಾಡಿ
Conclusion
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ 22ನೇ ಕಂತು ರೈತರಿಗೆ ದೊಡ್ಡ ವರದಾನವಾಗಲಿದೆ. ಹೋಳಿ ಹಬ್ಬದ ಸಂಭ್ರಮದ ಜೊತೆಗೆ ₹2,000 ಹಣ ರೈತರ ಬ್ಯಾಂಕ್ ಖಾತೆ ಸೇರೋದ್ರಿಂದ ಅನ್ನದಾತರಿಗೆ ಇದು ಡಬಲ್ ಸಂತಸ ತರಲಿದೆ.
ಸದ್ಯಕ್ಕೆ ಅಧಿಕೃತ ಘೋಷಣೆಯಾಗಬೇಕಿದೆ. ಆದರೆ ನಿಮ್ಮ ಕೆಲಸವನ್ನ ಈಗಲೇ ಮುಗಿಸಿಬಿಡಿ. ನಿಮ್ಮ ಇ-ಕೆವೈಸಿ, ಆಧಾರ್ ಲಿಂಕ್ ಮತ್ತು ಲ್ಯಾಂಡ್ ಸೀಡಿಂಗ್ ಪೂರ್ಣಗೊಂಡಿವೆಯೇ ಎಂದು ಖಾತ್ರಿಮಾಡಿಕೊಳ್ಳಿ. ಏನಾದ್ರೂ ತೊಂದರೆ ಇದ್ದರೆ ತಕ್ಷಣ ಹತ್ತಿರದ ಸಿಎಸ್ ಸಿ (CSC) ಸೆಂಟರ್ ಅಥವಾ ಗ್ರಾಮ ಒನ್ ಕಚೇರಿಗೆ ಹೋಗಿ ಸರಿಪಡಿಸಿಕೊಳ್ಳಿ.
ಗಮನಿಸಿ: ಕರ್ನಾಟಕ ಫ್ಲ್ಯಾಶ್‌ನಲ್ಲಿ ಪ್ರಕಟವಾಗುವ ಎಲ್ಲಾ ಮಾಹಿತಿ ಸಂಪೂರ್ಣವಾಗಿ ನಿಖರ ಮತ್ತು ಅಧಿಕೃತವಾಗಿರುತ್ತದೆ. ಯಾವುದೇ ಅನಧಿಕೃತ ಅಥವಾ ತಪ್ಪು ಮಾಹಿತಿಯನ್ನು ಪ್ರಕಟಿಸುವುದಿಲ್ಲ.
PM Kisan 22nd Installment Alert- Amount & Release Date and Beneficiary List Out Today FAQ
22ನೇ installment ಮೊತ್ತ ಎಷ್ಟು?
₹2,000. ವರ್ಷಕ್ಕೆ ₹6,000 ವಾರ್ಷಿಕ ಸಹಾಯವನ್ನು ಮೂರು installments ನಲ್ಲಿ ನೀಡಲಾಗುತ್ತದೆ.
Installment account ಗೆ ತಡ ಆಗುವ ಕಾರಣವೇನು?
e-KYC update ಆಗಿಲ್ಲ
Aadhaar mismatch
Bank account / IFSC errors
Banking holidays
ನನಗೆ 22ನೇ ಕಂತಿನ ಹಣ ಖಾತೆಗೆ ಬರಬೇಕಾದ್ರೆ ಏನೆಲ್ಲಾ ಮಾಡಬೇಕು?
ಕೆಳಗಿನ ಮೂರು ಕೆಲಸಗಳು ಕಡ್ಡಾಯವಾಗಿ ಆಗಿರಲೇಇ-ಕೆವೈಸಿ (e-KYC) ಪೂರ್ಣಗೊಂಡಿರಬೇಕು.
ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು.
ನಿಮ್ಮ ಜಮೀನಿನ ದಾಖಲೆಗಳು ಪೋರ್ಟಲ್‌ನಲ್ಲಿ ಅಪ್‌ಡೇಟ್ ಆಗಿ (ಲ್ಯಾಂಡ್ ಸೀಡಿಂಗ್) ಆಗಿರಬೇಕು.ಬೇಕು
Nithya is a Government Schemes and Education and News writer at Karnatakaflash.com with 3+ years of experience covering Karnataka and Central government welfare programs, SSP scholarship, ration card, and education updates. She verifies all information from official government sources to provide accurate, clear, and trusted updates for citizens.
