PM Awas Scheme 2026: ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯಧನ & ಗೃಹ ಸಾಲ – ಈಗಲೇ ಅರ್ಜಿ ಸಲ್ಲಿಸಿ!

Spread the love

PM Awas Scheme 2026 & PMAY Loan Apply 2026:ಸ್ವಂತ ಮನೆ(own house) ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ನಮ್ಮದೇ ಆದ ಒಂದು ಜಾಗ, ನಮ್ಮದೇ ನಿಯಮ, ನಮ್ಮದೇ ಸ್ವರ್ಗ. ಆದ್ರೆ ಈಗಿನ ಕಾಲದಲ್ಲಿ ಜಾಗದ ಬೆಲೆ, ಕಟ್ಟಡ ಸಾಮಾನುಗಳ ದರ, ಅದರ ಮೇಲೆ ಬ್ಯಾಂಕ್ ಸಾಲದ ಬಡ್ಡಿ ಇದೆಲ್ಲ ನೋಡಿದ್ರೆ ಸಾಮಾನ್ಯ ಮನುಷ್ಯನಿಗೆ ಸ್ವಂತ ಮನೆ ಕಟ್ಟಬೇಕು ಅನ್ನೋದು ದೂರದ ಕನಸಿನ ಮಾತು ಆಗಿದೆ

ಆದ್ರೆ ಇನ್ನ ಟೆನ್ಶನ್ ಬೇಡ ಬಿಡಿ. ಕೇಂದ್ರ ಸರ್ಕಾರ ತಂದಿರೋ ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಅನ್ನೋ ಸ್ಕೀಮ್ ಇದೆ. ಇದ್ರಲ್ಲಿ CLSS (Credit Linked Subsidy Scheme) ಅನ್ನೋ ಸಬ್ಸಿಡಿ ಸೌಲಭ್ಯ ಇದೆ. ಇದು ನಿಮ್ಮ ಕನಸನ್ನು ನನಸಾಗಿಸೋದಕ್ಕೆ ಹೆಲ್ಪ್ ಮಾಡುತ್ತೆ. 2026ರ ವರೆಗೂ ಈ ಯೋಜನೆ ಇದೆ, ಅಂದ್ರೆ ಇನ್ನೂ ಟೈಮ್ ಇದೆ, ಆದ್ರೆ ಬೇಗ ಅಪ್ಲೈ ಮಾಡಿದ್ರೆ ಒಳ್ಳೆಯದು.

ನೀವು ಗೃಹ ಸಾಲ(Home loan) ತಗೊಂಡ್ರೆ, ಅದರ ಬಡ್ಡಿಯಲ್ಲಿ 2.67 ಲಕ್ಷ ರೂಪಾಯಿ ವರೆಗೆ ಸಬ್ಸಿಡಿ(Subsidy) ಸಿಗುತ್ತೆ. ಸರ್ಕಾರ ನಿಮ್ಮ ಸಾಲದ ಬಡ್ಡಿಯ ಒಂದು ಭಾಗವನ್ನು ತಾನೇ ಭರಿಸಿ ಬಿಡುತ್ತೆ. ಈ ಯೋಜನೆಗೆ ಅರ್ಜಿ(Application) ಸಲ್ಲಿಸುವುದು ಹೇಗೆ ಯಾವೆಲ್ಲ ದಾಖಲಾತಿಗಳು ಬೇಕು ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಲಾಗಿದೆ

ಪ್ರಧಾನ ಮಂತ್ರಿ ಆವಾಸ್ ಯೋಜನೆ & CLSS ಎಂದರೇನು? | PM Awas Scheme 2026

PM Awas Scheme 2026: ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯಧನ & ಗೃಹ ಸಾಲ – ಈಗಲೇ ಅರ್ಜಿ ಸಲ್ಲಿಸಿ!

PMAY ಅಂದ್ರೆ “ಎಲ್ಲರಿಗೂ ಮನೆ” (Housing for All) ಅನ್ನೋ ಮೋದಿ ಸರ್ಕಾರದ ಡ್ರೀಮ್ ಪ್ರಾಜೆಕ್ಟ್. ನಗರ ಪ್ರದೇಶಗಳಲ್ಲಿ ಮನೆ ಇಲ್ಲದವರಿಗೆ, ಅದರಲ್ಲೂ ಮಿಡಲ್ ಕ್ಲಾಸ್ ಮತ್ತು ಕಡಿಮೆ ಆದಾಯದವರಿಗೆ ಮನೆ ಕೊಡಿಸಬೇಕು ಅನ್ನೋದು ಇದರ ಉದ್ದೇಶ.

CLSS ಅಂದ್ರೆ ಈ ಯೋಜನೆಯ ಸೂಪರ್ ಹಿಟ್ ಪಾರ್ಟ್. ಇದರಲ್ಲಿ ನೀವು ಬ್ಯಾಂಕಿಂದ ಸಾಲ ತಗೊಂಡ್ರೆ, ಬಡ್ಡಿಯ ಮೇಲೆ ಸಬ್ಸಿಡಿ ನೇರವಾಗಿ ನಿಮ್ಮ ಲೋನ್ ಅಕೌಂಟಿಗೆ ಜಮಾ ಆಗುತ್ತೆ. ಇದ್ರಿಂದ ನಿಮ್ಮ EMI ಕಡಿಮೆ ಆಗುತ್ತೆ, ಮತ್ತು ಲಕ್ಷಾಂತರ ರೂಪಾಯಿ ಉಳಿತಾಯ ಆಗುತ್ತೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ & CLSS ಯಾರೆಲ್ಲಾ ಅರ್ಹರು? (Eligibility Criteria)

ಇದು ನಿಮ್ಮ ವಾರ್ಷಿಕ ಆದಾಯದ ಮೇಲೆ ನಿಂತಿದೆ. ಮೂರು ಕ್ಯಾಟಗರಿ ಇದೆ:

1.EWS (ಆರ್ಥಿಕವಾಗಿ ದುರ್ಬಲ ವರ್ಗ):
ಕುಟುಂಬದ ವಾರ್ಷಿಕ ಆದಾಯ ₹3 ಲಕ್ಷದ ಒಳಗೆ ಇರಬೇಕು
ಸಿಗೋ ಸಬ್ಸಿಡಿ: 6.5% ಬಡ್ಡಿ ಸಬ್ಸಿಡಿ, ಗರಿಷ್ಠ ₹2.67 ಲಕ್ಷ

2.LIG (ಕಡಿಮೆ ಆದಾಯ ಗುಂಪು):
ಕುಟುಂಬದ ವಾರ್ಷಿಕ ಆದಾಯ ₹3 ಲಕ್ಷದಿಂದ ₹6 ಲಕ್ಷದ ವರೆಗೆ
ಸಿಗೋ ಸಬ್ಸಿಡಿ: 6.5% ಬಡ್ಡಿ ಸಬ್ಸಿಡಿ, ಗರಿಷ್ಠ ₹2.67 ಲಕ್ಷ

3.MIG (ಮಧ್ಯಮ ಆದಾಯ ಗುಂಪು):
ಇದನ್ನ ಎರಡು ಭಾಗ ಮಾಡಿದ್ದಾರೆ:
MIG-I: ₹6 ಲಕ್ಷದಿಂದ ₹12 ಲಕ್ಷ ಆದಾಯ (4% ಸಬ್ಸಿಡಿ)
MIG-II: ₹12 ಲಕ್ಷದಿಂದ ₹18 ಲಕ್ಷ ಆದಾಯ (3% ಸಬ್ಸಿಡಿ)

ಯಾವುದಕ್ಕೆಲ್ಲ ಈ ಸಾಲ ಬಳಸಬಹುದು?

ನೀವು ಈ ಸಾಲವನ್ನು:

  • ನಿಮ್ಮ ಸ್ವಂತ ಜಾಗದಲ್ಲಿ ಮನೆ ಕಟ್ಟಲು
  • ಹೊಸ ಮನೆ ಖರೀದಿ
  • ಈಗ ಇರೋ ಮನೆಯನ್ನ ವಿಸ್ತರಿಸಲು ಅಥವಾ ರಿಪೇರಿ ಮಾಡಲು ಉಪಯೋಗಿಸಬಹುದು.

ಒಂದು ಮುಖ್ಯ ನಿಯಮ: ನಿಮ್ಮ ಹೆಸರಲ್ಲಿ ಅಥವಾ ನಿಮ್ಮ ಕುಟುಂಬದ ಯಾರದ್ದಾದ್ರೂ ಹೆಸರಲ್ಲಿ ಈಗಾಗಲೇ ಪಕ್ಕಾ ಮನೆ (pucca house) ಇರಬಾರದು.

PM Awas Yojana ಮಹಿಳಾ ಮಾಲೀಕತ್ವ ಕಡ್ಡಾಯ?

EWS ಮತ್ತು LIG ಕ್ಯಾಟಗರಿಯಲ್ಲಿ ಅರ್ಜಿ ಹಾಕುವವರಿಗೆ ಮಹಿಳಾ ಸಹ-ಮಾಲೀಕತ್ವ ಕಡ್ಡಾಯ ಮಾಡಿದ್ದಾರೆ. ಅಂದ್ರೆ ಮನೆ ನಿಮ್ಮ ಹೆಂಡ್ತಿ ಹೆಸರಲ್ಲಿ ಇರಬೇಕು, ಅಥವಾ ಜಂಟಿಯಾಗಿ (joint) ಇಬ್ಬರ ಹೆಸರಲ್ಲಿ ಇರಬೇಕು. ಮಹಿಳೆಯರಿಗೆ ಮಾನ್ಯತೆ ಕೊಡೋದು ಇದರ ಉದ್ದೇಶ. ಮನೆಯಲ್ಲಿ ವಯಸ್ಕ ಮಹಿಳೆಯೇ ಇಲ್ಲ ಅಂದ್ರೆ ಮಾತ್ರ ವಿನಾಯಿತಿ.

Back To Home Pageಇಲ್ಲಿ ಕ್ಲಿಕ್ ಮಾಡಿ

ಪ್ರಧಾನ ಮಂತ್ರಿ ಆವಾಸ್ ಯೋಜನೆ CLSS ಅರ್ಜಿ ಸಲ್ಲಿಸಿದರೆ ಎಷ್ಟು ಸಾಲ ಸಿಗುತ್ತೆ? ಟೆನ್ಯೂರ್ ಎಷ್ಟು?

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಕ್ಲಸ್ ಗೆ ಅರ್ಜಿಸಲಿದರೆ ನೀವು ಗರಿಷ್ಠ 20 ವರ್ಷಗಳ ವರೆಗೆ ಸಾಲ ಪಡೆಯಬಹುದು. ಆದ್ರೆ ಸಬ್ಸಿಡಿ ಲೆಕ್ಕ ಹಾಕೋದು ನಿಗದಿತ ಸಾಲದ ಮೊತ್ತಕ್ಕೆ ಮಾತ್ರ. ನೀವು ಇನ್ನೂ ಜಾಸ್ತಿ ಸಾಲ ತಗೊಂಡ್ರೆ, ಮಿಕ್ಕಿದ್ದಕ್ಕೆ ಮಾರುಕಟ್ಟೆಯ ಬಡ್ಡಿದರ (normal interest rate) ಅನ್ವಯ ಆಗುತ್ತೆ.

ಪಿಎಂ ಅವಾಸ್ ಯೋಜನೆ 2026 ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು (Documents Required)

  • ಆಧಾರ್ ಕಾರ್ಡ್
  • ಆದಾಯ ಪುರಾವೆ (ಸ್ಯಾಲರಿ ಸ್ಲಿಪ್ ಅಥವಾ ITR)
  • ನಿಮ್ಮ ಹೆಸರಲ್ಲಿ ಮನೆ ಇಲ್ಲ ಅಂತ ಸ್ವಯಂ ಘೋಷಣೆ (self-declaration)
  • ಬ್ಯಾಂಕ್ ಸ್ಟೇಟ್ಮೆಂಟ್
  • ಪಾಸ್ಪೋರ್ಟ್ ಸೈಜ್ ಫೋಟೋ
  • ಅಡ್ರೆಸ್ ಪ್ರೂಫ್

ಯಾವ ಯಾವ ಬ್ಯಾಂಕುಗಳು ಈ ಸೌಲಭ್ಯ ಕೊಡುತ್ತೆ?

ಈ ಯೋಜನೆಯಡಿ ಸಾಲ ಕೊಡೋ ಮುಖ್ಯ ಬ್ಯಾಂಕುಗಳು ಮತ್ತು NBFCಗಳು:

  1. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
  2. ಎಚ್ಡಿಎಫ್ಸಿ ಬ್ಯಾಂಕ್
  3. ಐಸಿಐಸಿಐ ಬ್ಯಾಂಕ್
  4. ಎಲ್ಐಸಿ ಹೌಸಿಂಗ್ ಫೈನಾನ್ಸ್
  5. ಕೆನರಾ ಬ್ಯಾಂಕ್
  6. ಬ್ಯಾಂಕ್ ಆಫ್ ಬರೋಡಾ
  7. ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಇನ್ನೂ ಅನೇಕ ಅನುಮೋದಿತ ಹಣಕಾಸು ಸಂಸ್ಥೆಗಳು

Pradhan Mantri Awas Yojana CLSS ಹೇಗೆ ಅರ್ಜಿ ಸಲ್ಲಿಸುವುದು ಹೇಗೆ?

ಅಪ್ಲೈ ಮಾಡಲು ಪ್ರೋಸೆಸ್ ತುಂಬಾನೇ ಸಿಂಪಲ್:

  • ಮೊದಲು PMAY ಅನುಮೋದಿತ ಬ್ಯಾಂಕುಗಳಿಗೆ ಹೋಗಿ (SBI, HDFC, ICICI, LIC Housing Finance, Canara Bank, PNB, ಇತ್ಯಾದಿ).
  • ಗೃಹ ಸಾಲಕ್ಕೆ (Home Loan) ಅಪ್ಲೈ ಮಾಡಿ.
  • ಬ್ಯಾಂಕ್ ನಿಮ್ಮ ಅರ್ಹತೆ ಪರಿಶೀಲಿಸಿ, ಮಾಹಿತಿಯನ್ನು ಕೇಂದ್ರ ನೋಡಲ್ ಏಜೆನ್ಸಿಗೆ ಕಳಿಸುತ್ತೆ.
  • ಅಪ್ರೂವಲ್ ಸಿಕ್ಕ ಕೂಡಲೇ ಸಬ್ಸಿಡಿ ಮೊತ್ತ ನೇರವಾಗಿ ನಿಮ್ಮ ಸಾಲದ ಖಾತೆಗೆ ಜಮಾ ಆಗುತ್ತೆ

PM Awas Yojana ಗೆ ಅರ್ಜಿ ಹೇಗೆ ಹಾಕುವುದು?

PMAY ಗೆ online ಮೂಲಕ ಸುಲಭವಾಗಿ apply ಮಾಡಬಹುದು. Steps ಹೀಗಿವೆ:

  • ಅಧಿಕೃತ PMAY portal ಗೆ visit ಮಾಡಿ
  • Urban ಅಥವಾ Gramin option ಆಯ್ಕೆಮಾಡಿ
  • Aadhaar ಮತ್ತು personal details ತುಂಬಿ
  • ಅಗತ್ಯ documents upload ಮಾಡಿ
  • Submit application ಮಾಡಿ ಮತ್ತು reference number save ಮಾಡಿ
  • ಅರ್ಜಿಯ status ಪರಿಶೀಲಿಸಲು Aadhaar ಅಥವಾ application number ಬಳಸಿ check ಮಾಡಬಹುದು.

Conclusion

PMAY CLSS ಯೋಜನೆ ಕೇವಲ ಸಾಲ ಕೊಡೋ ಸ್ಕೀಮ್ ಅಲ್ಲ, ಅದೊಂದು ಸಾಮಾಜಿಕ ಭದ್ರತೆಯ ಕನಸು. ಸರ್ಕಾರ ನಿಜವಾಗಿಯೂ ಸಾಮಾನ್ಯ ಜನರ ಮನೆ ಕನಸನ್ನು ನನಸಾಗಿಸೋಕೆ ತುಂಬಾನೇ ಸಿಂಪಲ್ಲಾಗಿ ಮತ್ತು ಅನುಕೂಲವಾಗಿ ಈ ಯೋಜನೆ ತಂದಿದೆ.

ನೀವು ಸ್ವಂತ ಮನೆ ಕಟ್ಟಬೇಕು ಅಂತ ಕನಸು ಕಾಣ್ತಿದ್ದೀರಾ? ಆದ್ರೆ ಬಜೆಟ್ ಮತ್ತು ಬಡ್ಡಿಯ ಭಯದಲ್ಲಿ ಹಿಂದೇಟು ಹಾಕ್ತಿದ್ದೀರಾ? ಇನ್ನು ಯೋಚನೆ ಬೇಡ. ತಕ್ಷಣವೇ ನಿಮ್ಮ ನಿಯರೆಸ್ಟ್ ಬ್ಯಾಂಕಿಗೆ ಹೋಗಿ, ಈ ಯೋಜನೆ ಬಗ್ಗೆ ವಿಚಾರಿಸಿ, ಅರ್ಹತೆ ಇದ್ರೆ ಅಪ್ಲೈ ಮಾಡಿ. 2026ರ ವರೆಗೆ ಈ ಅವಕಾಶ ಇದೆ, ಆದ್ರೆ ಬೇಗ ಮಾಡಿದಷ್ಟೂ ಬೇಗ ಅರ್ಜಿ ನಿಮ್ಮ ಸ್ವಂತ ಮಾಡಿಕೊಳ್ಳಿ

ಗಮನಿಸಿ: ಕರ್ನಾಟಕ ಫ್ಲ್ಯಾಶ್‌ನಲ್ಲಿ ಪ್ರಕಟವಾಗುವ ಎಲ್ಲಾ ಮಾಹಿತಿ ಸಂಪೂರ್ಣವಾಗಿ ನಿಖರ ಮತ್ತು ಅಧಿಕೃತವಾಗಿರುತ್ತದೆ. ಯಾವುದೇ ಅನಧಿಕೃತ ಅಥವಾ ತಪ್ಪು ಮಾಹಿತಿಯನ್ನು ಪ್ರಕಟಿಸುವುದಿಲ್ಲ.

FAQ- PM Awas Yojana ಪಿಎಂ ಆವಾಸ್ ಯೋಜನೆ

CLSS ಅಂದ್ರೆ ಏನು?

CLSS ಅಂದ್ರೆ Credit Linked Subsidy Scheme. ಇದು PMAY ಯೋಜನೆಯ ಒಂದು ಭಾಗ. ಇದರಲ್ಲಿ ನೀವು ಬ್ಯಾಂಕಿಂದ ಗೃಹ ಸಾಲ ತಗೊಂಡ್ರೆ, ಆ ಸಾಲದ ಬಡ್ಡಿಯ ಮೇಲೆ ಸರ್ಕಾರ ಸಬ್ಸಿಡಿ ಕೊಡುತ್ತೆ. ಈ ಸಬ್ಸಿಡಿ ನೇರವಾಗಿ ನಿಮ್ಮ ಲೋನ್ ಅಕೌಂಟಿಗೆ ಜಮಾ ಆಗುತ್ತೆ. ಇದ್ರಿಂದ ನಿಮ್ಮ EMI ಕಡಿಮೆ ಆಗುತ್ತೆ ಮತ್ತು ಲಕ್ಷಾಂತರ ರೂಪಾಯಿ ಉಳಿತಾಯ ಆಗುತ್ತೆ .

PMAY ಯೋಜನೆ 2026ರಲ್ಲೂ ಇದೆಯಾ?

ಹೌದು, PMAY ಯೋಜನೆ 2026ರಲ್ಲೂ ಇದೆ. ಸೆಪ್ಟೆಂಬರ್ 1, 2024ರಿಂದ PMAY-U 2.0 ಅಂತ ಹೊಸ ವರ್ಷನ್ ಶುರು ಆಗಿದೆ. ಈ ಯೋಜನೆ 2029ರ ವರೆಗೆ ಮುಂದುವರಿಯಲಿದೆ . ಹಳೇ CLSS ಸ್ಕೀಮ್ ಬದಲಿಗೆ ಹೊಸ ಇಂಟರೆಸ್ಟ್ ರೇಟ್ ಸಬ್ಸಿಡಿ ಸ್ಕೀಮ್ ಬಂದಿದೆ .

ಸಬ್ಸಿಡಿ ನೇರವಾಗಿ ನನ್ನ ಖಾತೆಗೆ ಬರ್ತಾ? ಅಥವಾ ಬ್ಯಾಂಕಿಗೆ?

ಸಬ್ಸಿಡಿ ನೇರವಾಗಿ ನಿಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗೆ ಬರಲ್ಲ. ಅದು ನೇರವಾಗಿ ನಿಮ್ಮ ಗೃಹ ಸಾಲದ ಖಾತೆಗೆ (loan account) ಜಮಾ ಆಗುತ್ತೆ. ಹಳೇ CLSS ಸ್ಕೀಮ್ನಲ್ಲಿ ಒಂದೇ ಬಾರಿಗೆ ಮುಂಗಡವಾಗಿ (upfront) ಜಮಾ ಆಗ್ತಿತ್ತು. ಹೊಸ PMAY 2.0 ಸ್ಕೀಮ್ನಲ್ಲಿ 5 ಸಮಾನ ಕಂತುಗಳಲ್ಲಿ (equal installments) ಜಮಾ ಆಗುತ್ತೆ .

Leave a Comment