New Pension Scheme 2026:ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಈ ಒಂದು ಕಾರ್ಡ್ ನಿಮ್ಮ ಹತ್ರ ಇದ್ರೆ ಸಾಕು ಪ್ರತಿ ತಿಂಗಳು ಕೂಡ 3000 ಹಣವನ್ನು ನೀವು ಸರ್ಕಾರ ಕಡೆಯಿಂದ ಪಡೆಯಬಹುದು.
ಈ ಕಾರ್ಡ್ ಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಇರಬೇಕಾಗುವ ಅರ್ಹತೆಗಳೇನು ಈ ಕಾರ್ಡ್ ನಿಂದ ಆಗುವ ಉಪಯೋಗಗಳೇನು ಈ ಕಾರ್ಡ್ ನ ಯಾವ ರೀತಿ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಸಂಪೂರ್ಣ ಮಾಹಿತಿಯನ್ನು ತಿಳಿಯಬೇಕಾದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ ಅಂದರೆ ಮಾತ್ರ ನಿಮಗೆ ಈ ಕಾರ್ಡ್ ನ ಬಗ್ಗೆ ಮಾಹಿತಿ ಸಿಗುತ್ತದೆ.
ಪ್ರೀತಿಯ ಓದುಗರರಿಗೆ ನಿಮಗೆ ಈ ಮೂಲಕ ತಿಳಿಸುವುದೇನೆಂದರೆ ಈ ವೆಬ್ ಸೈಟ್ ನಲ್ಲಿ ಪ್ರತಿದಿನ ಹೊಸ ಸುದ್ದಿಗಳನ್ನು ಪ್ರಕಟಣೆ ಮಾಡುತ್ತೇವೆ ಮತ್ತು ಸರ್ಕಾರಿ ಯೋಜನೆಗಳ ಪ್ರತಿದಿನದ ಸುದ್ದಿ ಪ್ರಕಟಣೆ ಮಾಡುತ್ತೇವೆ.
Table of Contents
ಏನಿದು E-Shram Card? – ಅಸಂಘಟಿತ ಕಾರ್ಮಿಕರಿಗೆ ₹3000 ಪಿಂಚಣಿ ಮತ್ತು ₹2 ಲಕ್ಷ ಅಪಘಾತ ವಿಮೆ | New Pension Scheme 2026

ನಮ್ಮ ಭಾರತ ಸರ್ಕಾರವು ಅಸಂಘಟಿತ ವಲಯದಲ್ಲಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕೊಡುವ ಸಲುವಾಗಿ ಈ ಶ್ರಮ ಕಾರ್ಡ್ ಅಥವಾ ಈ ಶ್ರಮ ಯೋಜನೆ ಜಾರಿಗೆ ತಂದಿದೆ.
ಭಾರತ ಸರ್ಕಾರ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಕಾರ್ಮಿಕರಿಗೆ ವಿವಿಧ ರೀತಿಯ ಸರ್ಕಾರಿ ಯೋಜನೆಗಳ ಸೌಲಭ್ಯವನ್ನು ಕಾರ್ಮಿಕರಿಗೆ ನೀಡಲು ಈ ಪೋರ್ಟಲ್ ವ್ಯವಸ್ಥೆ ಭಾರತ ಸರ್ಕಾರ ಪ್ರಾರಂಭ ಮಾಡಿದ್ದು. ಅಸಂಘಟಿತ ವಲಯದಲ್ಲಿ ಕೆಲಸವನ್ನು ಮಾಡುವಂತ ಕೂಲಿ ಕಾರ್ಮಿಕರು E Sharm card ಈ ಶ್ರಮ ಕಾರ್ಡ್ ಅಥವಾ ಶ್ರಮಿಕ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.
ಅಸಂಘಟಿತ ವಲಯದ ಕಾರ್ಮಿಕ ಹಾಗೂ ಕಾರ್ಮಿಕರಿಗೆ 60 ವರ್ಷ ವಯಸ್ಸು ಆದ ನಂತರ ಈ ಕಾರ್ಡ್ ನ ಮೂಲಕ ಪ್ರತಿ ತಿಂಗಳು ಕೂಡ ಸರ್ಕಾರ ಕಡೆಯಿಂದ ಪಿಂಚಣಿಯನು, ₹3000 ಹಣವನ್ನು ಅವರ ಬ್ಯಾಂಕ್ ಖಾತೆ ನೇರವಾಗಿ ಹಣ ವರ್ಗಾವಣೆ ಮಾಡುತ್ತಾರೆ ಮತ್ತು ಮರಣ ವಿಮೆ(Death Insurance)ಯ ಇತರ ಸೌಲಭ್ಯಗಳನ್ನು ಪಡೆಯಬಹುದು.
ಇ-ಶ್ರಮ್ ಕಾರ್ಡ್ (e-Shram card) ಅಲ್ಲಿ ಹೆಸರು, ವಯಸ್ಸು, ಲಿಂಗ, ಉದ್ಯೋಗ ಮತ್ತು ಕೆಲಸಗಾರನ ಕುರಿತು ಇತರ ಸಂಬಂಧಿತ ಮಾಹಿತಿ ವಿವರಗಳನ್ನು ಒಳಗೊಂಡಿದೆ ಎನ್ನಬಹುದು.
ಇ-ಶ್ರಮ ಕಾರ್ಡ್ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿದ್ದು ಅದು ಭಾರತದಲ್ಲಿನ ಸಮಗ್ರ ಅಸಂಘಟಿತ ಕಾರ್ಮಿಕ ಡೇಟಾಬೇಸನ್ನು ಒದಗಿಸುವ ಹೊಂದಿದೆ ಇ-ಶ್ರಮ್ ಪೋರ್ಟಲ್ ಕಾರ್ಮಿಕ ವರ್ಗಗಳ ಅತ್ಯಂತ ದುರ್ಬಲ ವರ್ಗದ ವಲಸೆ ಕಾರ್ಮಿಕರು ಸೇರಿದಂತೆ ಕಾರ್ಮಿಕರನ್ನು ನೊಂದಾಯಿಸಲು ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಸಮಗ್ರ ದತ್ತಾಂಶನ್ನು ಸಿದ್ಧಪಡಿಸಿದೆ.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಮೀನುಗಾರರು, ಕೃಷಿ ಕಾರ್ಮಿಕರು, ಆಶಾ ಕಾರ್ಯಕರ್ತೆ,ಮನೆಗೆಲಸ ಕಾರ್ಮಿಕರು, ಚಾಲಕರು, ಟೈಲರ್ ಗಳು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಕೇಂದ್ರ ಸರ್ಕಾರ ಗುರುತಿಸುವ ಸುಮಾರು 379 ವರ್ಗಗಳ ಕಾರ್ಮಿಕರು ಪಟ್ಟಿಯಲ್ಲಿ ಸೇರಿದಂತ ಅಸಂಘಟಿತ ಕಾರ್ಮಿಕರು ಅರ್ಜಿ ಸಲ್ಲಿಸಬಹುದು.
ಅಸಂಘಟಿತ ವಲಯದ ಕಾರ್ಮಿಕರು (Unorganized Workers) ಅಂದರೆ ಯಾರು? – E-Shram Card ಅರ್ಜಿ ಅರ್ಹತೆ
ವಸ್ತುಗಳ ಸೇವೆಗಳ ಅಥವಾ ಉತ್ಪಾದನೆಗಳನ್ನು ಮಾರಾಟ ಮಾಡುವಂತ ಸಂಸ್ಥೆಗಳ 10 ಕಾರ್ಮಿಕರಿಗಿಂತ ಕಡಿಮೆ ಉದ್ಯೋಗಿಗಳು ಹೊಂದಿರುವಂತಹ ಅಸಂಘಟಿತ ವಲಯದ ಸಂಸ್ಥೆಗಳನ್ನು ಅಸಂಘಟಿತ ವಲಯದ ಕಾರ್ಮಿಕರು ಅಂತ ಕರೆಯಲಾಗುತ್ತದೆ.
ಉದಾಹರಣೆ ಗಾಗಿ:-
- ಬೀದಿ ಬದಿಯ ವ್ಯಾಪಾರಿಳು:- ರಸ್ತೆ ಬದಿಯಲ್ಲಿ ತಮ್ಮ ಜೀವನವನ್ನು ನಡೆಸಲು ವ್ಯಾಪಾರವನ್ನು ಮಾಡುವಂತಹ ಕಾರ್ಮಿಕರು ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.
- ತರಕಾರಿ ಮಾರುವವರು:- ಮಾರುಕಟ್ಟೆ ಅಂತಹ ಜಾಗದಲ್ಲಿ ತರಕಾರಿ ಮಾರುವವರು ಅಥವಾ ಬೀದಿ ತಿರುಗಿ ತರಕಾರಿ ಮಾರುವವರು ಕೂಡ ಈ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- ಗಾರೆ ಕೆಲಸಗಾರರು:- ಗಾರೆ ಕೆಲಸಗಾರರು ಅಥವಾ ಸೆಂಟ್ರಿಂಗ್ ಮಾಡುವಂತವರು ಈ ಯೋಜನೆ E shram card ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ.
- ಗಾಡಿ ಓಡಿಸುವವರು :- ಜೀವನವನ್ನು ಸಾಗಿಸಲು ಆಟೋ ರಿಕ್ಷಾವನ್ನು ಓಡಿಸುವಂತ ವ್ಯಕ್ತಿಗಳು ಕೂಡ ಈ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.
- ಕೂಲಿ ಕಾರ್ಮಿಕರುಗಳು:- ಪ್ರತಿದಿನಲೂ ಜೀವನವನ್ನು ಸಾಗಿಸುವಂತಹ ಬಯಸುವಂತಹ ಜನರು ದಿನಗೂಲಿಗಾಗಿ ಅಥವಾ ಕೆಲಸಗಳನ್ನು ಮಾಡುತ್ತಿರುವರು ಕೂಡ ಈ ಕಾರ್ಡ್ ಗೆ ಅರ್ಜಿ ಹಾಕಿ ಕಾರ್ಡನ್ನು ಪಡೆಯಬಹುದು.
- ಕೃಷಿಯ ಕಾರ್ಮಿಕರು:– ಕೃಷಿಯನ್ನು ಅವಲಂಬಿಸಿ ಅಂತ ಕೃಷಿ ಕಾರ್ಮಿಕರು ಕೂಡ ಕಾರ್ಡ್ ಗೆ E shram card ಅರ್ಜಿಯನ್ನು ಸಲ್ಲಿಸಬಹುದು ಪಡೆಯಬಹುದು ಕಾರ್ಡ್ ನ.
- ಇತರ ವ್ಯಕ್ತಿಗಳು:- ಅಸಂಘಟಿತ ವಲಯದಂತಹ ಯಾವುದೇ ಕಾರ್ಮಿಕರು ಕೂಡ ಈ ಈಶಮ್ ಕಾರ್ಡ್ ನ E shram card ಯೋಜನೆ ಲಾಭ ಪಡೆಯಬಹುದು ಇನ್ನಷ್ಟು ಮಾಹಿತಿಯನ್ನು ನೀವು ತಿಳಿದುಕೊಡಬೇಕೆಂದರೆ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಈ ವೆಬ್ ಸೈಟ್ ನ ಲಿಂಕ್ ಕೆಳಗೆ ನೀಡಿರುತ್ತನೆ.
E-Shram Card ಪ್ರಮುಖ ವಿವರಗಳು 2026 – ₹3000 ಪಿಂಚಣಿ ಮತ್ತು ₹2 ಲಕ್ಷ ಅಪಘಾತ ವಿಮೆ
ಈ ಶ್ರಮ E shram ಕಾರ್ಡ್ ಕಾರ್ಡನ್ನು ಅಸಂಘಟಿತ ಕಾರ್ಮಿಕರ ವಲಯಗಳಿಗೆ ಉಪಯೋಗವಾಗಬೇಕು ಅಂತ ಕಾರ್ಮಿಕ ಉದ್ಯೋಗ ವಾಲಯಗಳ ಮೂಲಕ ಈ ಯೋಜನೆಯನ್ನು ಪ್ರಾರಂಭ ಮಾಡಲಾಗಿದೆ.
- ಪ್ರಾರಂಭ ಆದ ದಿನಾಂಕ:- E shram card ಇ-ಶ್ರಮ್ ಪೋಟಲನ್ನು 2021 ಅಗಸ್ಟ್ ರಲ್ಲಿ ಈ ಯೋಜನೆ ಪ್ರಾರಂಭವನ್ನು ಮಾಡಲಾಗಿದೆ
- ಉದ್ದೇಶ :- ಅಸಂಘಟಿತ ವಲಯದ ಕಾರ್ಮಿಕರಿಗೆ ಇ-ಶ್ರಮ್ ಕಾರ್ಡ್ ಇಂದ ಯೋಜನೆಯ ಮೂಲಕ ಪ್ರತಿ ತಿಂಗಳು ಕೂಡ 3000 ಪಿಂಚಣಿಯನ್ನು ನೀಡುವ ಉದ್ದೇಶ ಹೊಂದಿರುತ್ತದೆ.
- ಈ ಯೋಜನೆ ಇ-ಶ್ರಮ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ ವ್ಯಕ್ತಿ ಕಾರಣಾಂತರದಿಂದ ಮರಣ ಹೊಂದಿದ್ದಾರೆ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ ಹಣ ತನ್ನ ಪತಿ ಅಥವಾ ಪತ್ನಿಗೆ ಅಥವಾ ನಾಮಿನಿ ಗೆ ನೀಡುತ್ತಾರೆ.
- ಅಪಘಾತದಲ್ಲಿ ಒಂದು ವೇಳೆ ಅಂಗವೈ ಉಂಟಾದರೆ ಅಂತಹ ವ್ಯಕ್ತಿಗಳಿಗೆ 1 ಲಕ್ಷ ರೂಪಾಯಿ ಸರ್ಕಾರ ಕಡೆಯಿಂದ ಪರಿಹಾರ ನೀಡುತ್ತಾರೆ
ಇ-ಶ್ರಮ್ ಕಾರ್ಡ್ ಉಪಯೋಗಗಳು (E-Shram Card Benefits) – ₹3000 ಪಿಂಚಣಿ ಮತ್ತು ₹2 ಲಕ್ಷ ಅಪಘಾತ ವಿಮೆ
ಇ-ಶ್ರಮ್ ಕಾರ್ಡ್ (E shram card) ಪಡೆದಂತ ಕಾರ್ಮಿಕರಿಗೆ 60 ವರ್ಷಗಳ ಮುಗಿದ ನಂತರ ಅಂದರೆ ತಮ್ಮ ವೃದ್ದಾದ್ಯದಲ್ಲಿ ಪ್ರತಿ ತಿಂಗಳು ₹3000 ಹಣ(₹3000 every month)ವನ್ನು ಸರ್ಕಾರ ಕಡೆಯಿಂದ ಪಿಂಚಣಿ(Pension) ರೂಪದಲ್ಲಿ ಪಡೆಯಬಹುದು.
ಈ-ಶ್ರಮ್ (e-Shram) ಕಾರ್ಡ್ ಹೊಂದಿದ ಕಾರ್ಮಿಕರು 2 ಲಕ್ಷ ವರೆಗೆ ಮರಣ ವಿಮೆ ಪಡೆಯಬಹುದಾಗಿದೆ.ಅನರೀಕ್ಷಿತ ಘಟನೆ ಯಾವುದೇ ಯಿಂದ ಅಥವಾ ಅಪಘಾತ ಅಥವಾ ಈಶ್ರಮ ಕಾಡು ಹೊಂದಿದ ವ್ಯಕ್ತಿಯು ಮರಣ ಒಂದಿದರೆ ಮರಣ ಹೊಂದಿದ ವ್ಯಕ್ತಿಯ ಕುಟುಂಬದ ಪತ್ನಿಗೆ ಅಥವಾ ತಾಯಿಗೆ 2 ಲಕ್ಷ ಹಣ ಮರಣ ವಿಮೆಯನ್ನು ಸರ್ಕಾರ ಕಡೆಯಿಂದ ನೀಡುತ್ತಾರೆ.
ಅಂಗ ವೈಕಲ್ಯ ಉಂಟಾದರೆ ಅಪಘಾತದಲ್ಲಿ ಅಂತ ಕಾರ್ಮಿಕರಿಗೆ ಈ-ಶ್ರಮ್ (e-Shram) ಕಾರ್ಡ್ ನ ಕಾರ್ಮಿಕರಿಗೆ ಈ ಕಾರ್ಡ್ ಹೊಂದಿದವರಿಗೆ 1 ಲಕ್ಷ ರೂಪಾಯಿ ಹಣ ಅಪಘಾತ ವಿಮೆ(Accident insurance of Rs 1 lakh) ನೀಡುತ್ತಾರೆ.
12 ಅಂಕಿಯ ಒಂದು ಯೂನಿಕ್ ನಂಬರನ್ನು ಈ ಶ್ರಮ ಕಾಡು ಹೊಂದಿದ ಕಾರ್ಮಿಕರಿಗೆ ಭಾರತದಾದ್ಯಂತ ನೀಡಲಾಗುತ್ತದೆ.
ಇ-ಶ್ರಮ್ ಕಾರ್ಡ್ ಪಡೆಯಲು ಬೇಕಾದ ಅರ್ಹತೆಗಳು – E-Shram Card Eligibility 2026
- ಈ E Sharm ಕಾರ್ಡ್ ಕಾಡನ್ನು ಪಡೆಯಲು ಯಾವುದೇ ಅಸಂಘಟಿತ ವಲಯದ ಕಾರ್ಮಿಕರಾಗಿದ್ದರೆ ಅಥವಾ ವಲಯದಲ್ಲಿ ಕೆಲಸ ಮಾಡುವಂತಹ ಆ ವ್ಯಕ್ತಿ ಈ ಶ್ರಮ ಕಾರ್ಡ್ ಪಡೆಬಹುದು.
- ಈ ಶ್ರಮ ಕಾರ್ಡ್ ಅರ್ಜಿ ಸಲ್ಲಿಸೋಕೆ ಬಯಸುವಂತಹ ಉದ್ಯೋಗಿಗಳಿಗೆ ಕನಿಷ್ಠ 18 ವರ್ಷ ದಿಂದ 59 ವರ್ಷಗಳ ಒಳಗಿನ ಕಾರ್ಮಿಕ ಆಗಿರಬೇಕಾಗುತ್ತದೆ
- ಈ ಶ್ರಮ E shram card ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸುವ ಬಯಸುವಂತಹ ವ್ಯಕ್ತಿ ತಮ್ಮ ಆಧಾರ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಇರಬೇಕಾಗುತ್ತದೆ.
- ಈ ಷರತ್ತುಗಳನ್ನು ಪೂರೈಸಿದ ಕಾರ್ಮಿಕರು ಸುಲಭವಾಗಿ ಈ ಯೋಜನೆಗೆ ನೋಂದಣಿ ಮಾಡಬಹುದು.
ಇ-ಶ್ರಮ್ ಕಾರ್ಡ್ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು – E-Shram Card Required Documents 2026
- ಆಧಾರ್ ಕಾರ್ಡ್ (Aadhar card):- ಭಾರತದಲ್ಲಿ ವಾಸ ಮಾಡುವಂತಹ ಪ್ರತಿಯೊಬ್ಬ ವ್ಯಕ್ತಿಯು ಕೂಡ ತಮ್ಮ ಗುರುತಿಗಾಗಿ ಆಧಾರ್ ಕಾರ್ಡ್ ಮಾಡಿಸಿರುತ್ತಾರೆ ಹಾಗಾಗಿ ಈ ಶ್ರಮ ಕಾಡಿಗೆ ಅರ್ಜಿ ಹಾಕಲು ಆಧಾರ್ ಕಾರ್ಡಿನ ಒಂದು ಜೆರಾಕ್ಸ್ ಬೇಕು
- ಮೊಬೈಲ್ ನಂಬರ್(mobile number):- ಈ ಶ್ರಮ ಕಾರ್ಡ್ ಗೆ ಅರ್ಜಿ ಹಾಕಲು ಬಯಸುವಂಥ ವ್ಯಕ್ತ ಒಂದು ಮೊಬೈಲ್ ನಂಬರ್ ಇರ್ಬೆಕು ಮತ್ತು ನಿಮ್ಮ ಈ ಮೊಬೈಲ್ ನಂಬರ್ ತಮ್ಮ ಆಧಾರ್ ಕಾರ್ಡ್ ಒಂದಿಗೆ ಲಿಂಕ್ ಆಗಿರಬೇಕು.
- ಬ್ಯಾಂಕ್ ಖಾತೆ(bank account):- ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಬಯಸುವಂತಹ ವ್ಯಕ್ತಿಗಳು ಬ್ಯಾಂಕ್ ಖಾತೆಯನ್ನು ಕಡ್ಡಾಯವಾಗಿ ಹೊಂದಿರಬೇಕು ಮತ್ತು ಈ ಬ್ಯಾಂಕ್ ಖಾತೆಯ ಜೆರಾಕ್ಸ್ ಕೊಡಬೇಕು
- ರೇಷನ್ ಕಾರ್ಡ್(Ration card):- ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಬಯಸುವಂತಹ ವ್ಯಕ್ತಿ ರೇಷನ್ ಕಾರ್ಡ್ ಹೊಂದಿರಬೇಕು
- ಕಾರ್ಮಿಕ ಜಾಬ್ ಕಾರ್ಡ್ (ಇದ್ದರೆ)
ಇ ಶ್ರಮ್ ಕಾರ್ಡ್ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ 2026 – E-Shram Card apply Step by Step Process Online & Offline Guide
ಈ ಶ್ರಮ ಕಾರ್ಡ್ ಗೆ ಅರ್ಜಿ ಹಾಕಲು ಬಯಸುವಂತಹ ವ್ಯಕ್ತಿಗಳು ಅಸಂಘಟಿತ ವಲಯದ ಕಾರ್ಮಿಕ ಆಗಿದ್ದರೆ.
ಈ ಕೆಳಗೆ ನೀಡಿದ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಈ ಯೋಜನೆಗೆ ಅರ್ಜಿ ಸಲ್ಲಿಸಲು ಎರಡು ರೀತಿಯ ವಿಧಾನಗಳಿವೆ ಅವುಗಳನ್ನು ಈ ಮಾಹಿತಿ ನೀಡಿದ್ದೇವೆ.
ಅಧಿಕೃತ ವೆಬ್ಸೈಟ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
ವಿಧಾನ 1: ಆನ್‌ಲೈನ್ ಮೂಲಕ ಇ-ಶ್ರಮ್ ಕಾರ್ಡ್ ಅರ್ಜಿ ಸಲ್ಲಿಸುವ ವಿಧಾನ (ನೀವೇ ಮಾಡಿಕೊಳ್ಳುವುದು)
- ನಾವು ಮೇಲೆ ಕೊಟ್ಟಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿದ ನಂತರ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುತ್ತೀರಿ ನಂತರ ನಿಮ್ಮ ಆಧಾರ್ ಕಾರ್ಡ್ ಒಂದಿಗೆ ಲಿಂಕ್ ಆಗಿರುವ ಇರುವ ಮೊಬೈಲ್ ನಂಬರ್ ಮತ್ತು ಆಧಾರ್ ಕಾರ್ಡ್ ಅನ್ನು ನಂಬರ್ ಹಾಕಿ.
- ಪಕ್ಕದಲ್ಲಿ ಒಂದು ಕ್ಯಾಪ್ಚರ್ ಕೋಡ್ ಕೇಳುತ್ತದೆ ಆ ಕೋಡ್ ಅನ್ನು ಖಾಲಿ ಇರುವ ಜಾಗದಲ್ಲಿ ಹಾಕಿ ನಂತರ ಸಬ್ ಬಿಟ್ ಕೊಡಿ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ
- ನಂತರ ಆ ಒಟಿಪಿಯನ್ನು ಖಾಲಿ ಇರುವ ಜಾಗದಲ್ಲಿ ಹಾಕಿ ಸಬ್ಮಿಟ್ ಮಾಡಿ.
- ಮತ್ತೊಂದು ಪುಟ ನಿಮಗೆ ಓಪನ್ ಆಗುತ್ತೆ ಅದರಲ್ಲಿ ನಿಮಗೆ ವೈಯಕ್ತಿ ವಿಷಯ ನೀವು ಇರುವ ಸ್ಥಳ ಇತ್ಯಾದಿ ಮಾಹಿತಿಗಳನ್ನು ಹಾಕಿ ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
- ನೀವು ಮಾಡುವಂತ ಕೆಲಸದ ಬಗ್ಗೆ ಕೆಳಗಡೆ ಮಾಹಿತಿ ಕೇಳುತ್ತದೆ ಅಲ್ಲಿ ನೀವು ಮಾಡುವಂತ ಕೆಲಸಗಳನ್ನು ಹಾಕಿ
- ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಕೇಳುತ್ತೆ. ಬ್ಯಾಂಕ್ ಖಾತೆಯ ನಂಬರ್ ಮತ್ತು ಐಎಫ್‌ಎಸ್‌ಸಿ ಕೋಡ್ ನಂಬರ್ ಎಲ್ಲಾ ಹಾಕಿ
- ನಂತರ ಮಾಹಿತಿಯಲ್ಲ ಸರಿಯಾಗಿ ಇದೆಯಾ ಇಲ್ಲವಾ ಎಂದು ನೋಡಿಕೊಳ್ಳಿ ಎಲ್ಲಾ ಮಾಹಿತಿ ಸರಿಯಾಗಿದ್ದರೆ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ನಂತರ ಈ ಶ್ರಮ ಅರ್ಜಿಯನ್ನು ಹಾಕಿದ ಒಂದು ಪುಟ ಓಪನ್ ಆಗುತ್ತದೆ ಅಲ್ಲಿ ನೀವು ಅರ್ಜಿ ಹಾಕಿದ್ದು ಯಶಸ್ವಿ ಆಗಿದೆ ಎಂದು ಬರುತ್ತದೆ. ಅಲ್ಲಿಗೆ ನಿಮ್ಮ ಅರ್ಜಿ ಹಾಕಿದ್ದು ಮುಗಿಯುತ್ತೆ.
ವಿಧಾನ 2: ಆಫ್‌ಲೈನ್ ಮೂಲಕ ಈ ಶ್ರಮ ಕಾರ್ಡ್ ಅರ್ಜಿ ಸಲ್ಲಿಸುವ ವಿಧಾನ
ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಲು ವ್ಯಕ್ತಿ ಈ ಕೆಳಗಡೆ ನೀಡಲಾದ ಆನ್ಲೈನ್ ಸೆಂಟರ್ಗಳ ಮೂಲಕ ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಲು ಎಲ್ಲಾ ದಾಖಲಾತಿಯನ್ನು ತೆಗೆದುಕೊಂಡು ಹೋಗಿ.
- ಬೆಂಗಳೂರು ಒನ್:- ಬೆಂಗಳೂರಿನ ಪ್ರದೇಶದಲ್ಲಿ ವಾಸ ಮಾಡುವಂತ ಜನರು ಈ ಆನ್ಲೈನ್ ಪೋರ್ಟ್ನಲ್ಲಿ ಮೂಲಕ ಈ ಶ್ರಮ ಕಾರ್ಡ್ ಗೆ ಅರ್ಜಿಯನ್ನು ಹಾಕಬಹುದು
- CSC ಕೇಂದ್ರ:- ಭಾರತದಲ್ಲಿ ಕಾಮನ್ ಸರ್ವಿಸ್ ಸೆಂಟರ್ ಆನ್ಲೈನ್ ಪೋರ್ಟಲ್ ಗಳು ಈ ಶ್ರಮ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಹುದು
- ಗ್ರಾಮ ಒನ್:- ಕರ್ನಾಟಕ ಸರ್ಕಾರ ಕಡೆಯಿಂದ ಆದ್ಯತೆ ಪಡೆದ ಒಂದು ಆನ್ಲೈನ್ ಸೆಂಟರ್ ಆಗಿದ್ದು ಈ ಆನ್ಲೈನ್ ಪೋರ್ಟಲ್ ನಲ್ಲಿ ಈ ಶ್ರಮ ಕಾರ್ಡ್ ಗೆ ಅರ್ಜಿಯನ್ನು ಹಾಕಬಹುದು
- ಕರ್ನಾಟಕ ಒನ್:- ಅರ್ಜಿ ಹಾಕಲು ಬಯಸುವಂತಹ ವ್ಯಕ್ತಿಗಳು ಕರ್ನಾಟಕ ಒನ್ ಮೂಲಕ ಈ ಶ್ರಮ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಹುದು
ಈ ಕೇಂದ್ರಗಳಿಗೆ ಭೇಟಿ ನೀಡಿ ನೀವು ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು ನಂತರ ಈ ಶ್ರಮ ಕಾರ್ಡ್ ಪಡೆಯಬಹುದು.
ಇ-ಶ್ರಮ್ ಕಾರ್ಡ್ ಡೌನ್ಲೋಡ್ ವಿಧಾನ – How to Download E-Shram Card Online Step by Step Guide 2026
ನೀವು ಈಗಾಗಲೇ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಿದರೆ ಅಧಿಕೃತ ವೆಬ್ ಸೈಟ್ ನ ಮೂಲಕ ಈ ಶ್ರಮ ಕಾಡನ್ನು ಡೌನ್ಲೋಡ್ ಅನ್ನು ಮಾಡಬಹುದು ಅಥವಾ ನಿಮ್ಮ ಹತ್ತಿರದ ಆನ್ಲೈನ್ ಸೈಬರ್ ಸೆಂಟರ್ ಗಳ ಮೂಲಕ ಈ ಕಾರ್ಡನ್ನು ಡೌನ್ಲೋಡ್ ಮಾಡಿಸಿ ಪಡೆಯಬಹುದು.
E shram card ಈ ಶ್ರಮ ಕಾರ್ಡ್ ನ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ದೊರೆತಿದೆ ಎಂದು ನಾವು ಭಾವಿಸುತ್ತೇನೆ ಹಾಗಾಗಿ ಈ ಮಾಹಿತಿ ಇಷ್ಟವಾದರೆ ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಈ ಮಾಹಿತಿಯನ್ನು ಶೇರ್ ಮಾಡಿಕೊಳ್ಳಿ ಹಾಗೂ ಕನ್ನಡಿಗರಿಗೆ ಸಪೋರ್ಟ್ ನೀಡಿ.
ತೀರ್ಮಾನ (Conclusion)
ಈ ಯೋಜನೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸುವ ಸುವರ್ಣಾವಕಾಶ. ಅಪಘಾತದಿಂದ ರಕ್ಷಣೆ, ವೃದ್ಧಾಪ್ಯದಲ್ಲಿ ಪಿಂಚಣಿ – ಇದು ನಿಮ್ಮ ಜೀವನವನ್ನು ಸುರಕ್ಷಿತಗೊಳಿಸುತ್ತದೆ. ದಯವಿಟ್ಟು ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ನಿಮ್ಮ ಸ್ನೇಹಿತರು, ಸಂಬಂಧಿಕರು, ನೆರೆಹೊರೆಯವರಿಗೂ ಈ ಮಾಹಿತಿ ತಲುಪಿಸಿ. ಎಲ್ಲರೂ ಸೇರಿ ನೋಂದಣಿ ಮಾಡಿಸಿಕೊಳ್ಳಿ.
Back To Home Page: ಇಲ್ಲಿ ಕ್ಲಿಕ್ ಮಾಡಿ
ಗಮನಿಸಿ: ಕರ್ನಾಟಕ ಫ್ಲ್ಯಾಶ್‌ನಲ್ಲಿ ಪ್ರಕಟವಾಗುವ ಎಲ್ಲಾ ಮಾಹಿತಿ ಸಂಪೂರ್ಣವಾಗಿ ನಿಖರ ಮತ್ತು ಅಧಿಕೃತವಾಗಿರುತ್ತದೆ. ಯಾವುದೇ ಅನಧಿಕೃತ ಅಥವಾ ತಪ್ಪು ಮಾಹಿತಿಯನ್ನು ಪ್ರಕಟಿಸುವುದಿಲ್ಲ.
FAQ
ಇ ಶ್ರಮ್ ಕಾರ್ಡ್ ಸ್ಟೇಟಸ್ ಚೆಕ್ ಮಾಡೋದು ಹೇಗೆ?
ನಿಮ್ಮ UAN ನಂಬರ್ ಇದ್ದರೆ https://eshram.gov.in/ ವೆಬ್ಸೈಟ್ಗೆ ಹೋಗಿ. “Track Your Application Status” ಆಪ್ಶನ್ ಇರುತ್ತೆ. ಅಲ್ಲಿ UAN ಮತ್ತು ಮೊಬೈಲ್ ನಂಬರ್ ಹಾಕಿ ಸ್ಟೇಟಸ್ ನೋಡಬಹುದು.
ಇ ಶ್ರಮ್ ಕಾರ್ಡ್ ಡೌನ್ಲೋಡ್ ಮಾಡೋದು ಹೇಗೆ?
ಅದೇ ವೆಬ್ಸೈಟ್ನಲ್ಲಿ “Download e-Shram Card” ಆಪ್ಶನ್ ಇದೆ. ಅಲ್ಲಿ UAN ಹಾಕಿದ್ರೆ ಕಾರ್ಡ್ ಪಿಡಿಎಫ್ ರೂಪದಲ್ಲಿ ಸಿಗುತ್ತದೆ.
ನಾನು ಬೆಂಗಳೂರಿನಲ್ಲಿ ಕೂಲಿ ಮಾಡುತ್ತೇನೆ. ನನಗೆ ಈ ಯೋಜನೆ ಸಿಗುತ್ತಾ?
ಖಂಡಿತ ಸಿಗುತ್ತದೆ. ನೀವು ದಿನಗೂಲಿ ಕಾರ್ಮಿಕರಾಗಿದ್ದೀರಿ. ನಿಮ್ಮ ಮಾಸಿಕ ಆದಾಯ ₹15,000 ಕ್ಕಿಂತ ಕಡಿಮೆ ಇದ್ದರೆ ನೀವು ಅರ್ಹರು. ತಕ್ಷಣ ನೋಂದಾಯಿಸಿಕೊಳ್ಳಿ.
ನನಗೆ ಈಗ 50 ವರ್ಷ. ನಾನು ಪಿಂಚಣಿ ಯೋಜನೆಗೆ ಸೇರಬಹುದಾ?
ಇಲ್ಲ, 40 ವರ್ಷ ದಾಟಿದವರು ಈ ಪಿಂಚಣಿ ಯೋಜನೆಗೆ ಸೇರಲು ಸಾಧ್ಯವಿಲ್ಲ. ಆದರೆ ನೀವು ಇ ಶ್ರಮ್ ಕಾರ್ಡ್ ಮಾತ್ರ ಮಾಡಿಸಿಕೊಳ್ಳಬಹುದು. ಆ ಮೂಲಕ ಅಪಘಾತ ವಿಮೆ ಸೌಲಭ್ಯ ಪಡೆಯಬಹುದು.
ನಾನು ಮನೆ ಕೆಲಸ ಮಾಡುತ್ತೇನೆ ನನಗೆ ಈ ಕಾರ್ಡ್ ಸಿಗುತ್ತಾ?
ಸಿಗುತ್ತದೆ. ಗೃಹ ಕಾರ್ಮಿಕರು (domestic workers) ಸಹ ಈ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ. ನಿಮ್ಮ ಹತ್ತಿರದ CSC ಸೆಂಟರ್ಗೆ ಹೋಗಿ ನೋಂದಾಯಿಸಿಕೊಳ್ಳಿ.
ಈ ಯೋಜನೆ ಸರ್ಕಾರಿ ನೌಕರರಿಗೂ ಸಿಗುತ್ತಾ?
ಇಲ್ಲ, ಇದು ಸಂಪೂರ್ಣವಾಗಿ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಮಾತ್ರ. ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಸ್ಥಾಯಿ ಉದ್ಯೋಗ ಇರುವವರಿಗೆ ಈ ಯೋಜನೆ ಅನ್ವಯಿಸುವುದಿಲ್ಲ.
Nithya is a Government Schemes and Education and News writer at Karnatakaflash.com with 3+ years of experience covering Karnataka and Central government welfare programs, SSP scholarship, ration card, and education updates. She verifies all information from official government sources to provide accurate, clear, and trusted updates for citizens.
