Mobile Canteen Subsidy 2026 Karnataka:ಇತ್ತೀಚಿನ ದಿನಗಳಲ್ಲಿ ‘ಫುಡ್ ಟ್ರಕ್’ (Food Truck) ಅಥವಾ ಮೊಬೈಲ್ ಕ್ಯಾಂಟೀನ್(Mobile Canteen) ಗಳ ಕ್ರೇಜ್ ಯುವಜನತೆಯಲ್ಲಿ ತುಂಬಾ ಹೆಚ್ಚಾಗುತ್ತಿದೆ. ಕಡಿಮೆ ಬಂಡವಾಳ(low investment)ದಲ್ಲಿ, ನಮಗೆ ಬೇಕಾದ ಸ್ಥಳದಲ್ಲಿ ರುಚಿಯಾದ ಆಹಾರ(Delicious food)ವನ್ನು ಮಾರಿ ಉತ್ತಮ ಆದಾಯ(Good income) ಗಳಿಸಲು ಇದೊಂದು ಬೆಸ್ಟ್ ಬ್ಯುಸಿನೆಸ್ ಐಡಿಯಾ(Best Business Idea). ಆದರೆ ವಾಹನ ಖರೀದಿ()ಸಲು ಹಣವಿಲ್ಲದೆ ಒದ್ದಾಡುತ್ತಿರುವ ನಿರುದ್ಯೋಗಿಗಳಿಗೆ(Unemployment) ಕರ್ನಾಟಕ ಪ್ರವಾಸೋದ್ಯಮ ಇಲಾಖೆ (Tourism Department Karnataka) ಯು ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ.
ಆರ್ಥಿಕವಾಗಿ ಹಿಂದುಳಿದ ಯುವಕ-ಯುವತಿಯರು ಸ್ವಾವಲಂಬನೆ ಸಾಧಿಸಲು, ‘ಮೊಬೈಲ್ ಕ್ಯಾಂಟೀನ್’ (Mobile Canteen Scheme) ಆರಂಭಿಸಲು ಕರ್ನಾಟಕ ಸರ್ಕಾರ(Karnataka Government)ವೇ ಇದೀಗ ಬರೋಬ್ಬರಿ 5 ಲಕ್ಷ ರೂಪಾಯಿಗಳವರೆಗೆ ಸಹಾಯಧನ (Subsidy) ನೀಡಲು ಮುಂದಾಗಿದೆ. ಈ ಯೋಜನೆಯು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಪ್ರವರ್ತಿಸಲ್ಪಟ್ಟಿದ್ದು, ರಾಜ್ಯದಲ್ಲಿ ಆಹಾರ ಪ್ರವಾಸೋದ್ಯಮ (Food Tourism) ಬೆಳೆಸುವ ಉದ್ದೇಶವನ್ನೂ ಹೊಂದಿದೆ. ಈ ಲೇಖನದಲ್ಲಿ, ಈ ಮಹತ್ವಾಕಾಂಕ್ಷಿ ಯೋಜನೆಯ ಸಂಪೂರ್ಣ ಮಾಹಿತಿ, ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆಗಳು, ಅಗತ್ಯ ದಾಖಲೆಗಳು ಬಗ್ಗೆ ಸಂಪೂರ್ಣ ಮಾಹಿತಿ ಕೆಳಗೆ ತಿಳಿಸಿದ್ದೇವೆ
Table of Contents
ಮೊಬೈಲ್ ಕ್ಯಾಂಟೀನ್ ಯೋಜನೆ 2026 | Mobile Canteen Subsidy 2026 Karnataka

ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಆಹಾರ ಬೇಡಿಕೆಯನ್ನು ಪೂರೈಸುವುದು ಮತ್ತು ಸ್ಥಳೀಯ ಯುವಕರಿಗೆ ಉದ್ಯೋಗ(Employment for youth) ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದು ಕೇವಲ ವಾಹನ ಖರೀದಿಗೆ ಮಾತ್ರ ಸೀಮಿತವಾಗಿಲ್ಲ; ಬದಲಿಗೆ ಆಧುನಿಕ ಅಡುಗೆ ಉಪಕರಣಗಳು, ಫರ್ನಿಚರ್, ವಾಹನದ ಒಳಾಂಗಣ ಅಲಂಕಾರ, ವಿದ್ಯುತ್ ಉಪಕರಣಗಳು (ಜನರೇಟರ್/ಬ್ಯಾಟರಿ) ಮತ್ತು ಆರಂಭಿಕ ಬಂಡವಾಳ ಸೇರಿದಂತೆ ಸಂಪೂರ್ಣ ಯೋಜನಾ ವೆಚ್ಚಕ್ಕೆ ಈ ಸಹಾಯಧನ ಅನ್ವಯಿಸುತ್ತದೆ ಅಂತ ಹೇಳಬಹುದು.
Mobile Canteen Subsidy 2026 Karnataka ಯೋಜನೆಯ ಪ್ರಮುಖ ಲಾಭಗಳು
- ಅತ್ಯಧಿಕ ಸಬ್ಸಿಡಿ (High Subsidy): ಹಿಂದಿನ ಯೋಜನೆಗಳಲ್ಲಿ ₹3 ಲಕ್ಷವಿದ್ದ ಸಬ್ಸಿಡಿಯನ್ನು ಹೆಚ್ಚಿಸಿ, ಈಗ ₹5 ಲಕ್ಷದವರೆಗೆ ನೀಡಲು ತೀರ್ಮಾನಿಸಲಾಗಿದೆ.
- ವಿಸ್ತೃತ ಯೋಜನಾ ವೆಚ್ಚ (Enhanced Project Cost): ಸುಮಾರು ₹15 ಲಕ್ಷದಿಂದ ₹20 ಲಕ್ಷದವರೆಗಿನ ಯೋಜನೆಗಳಿಗೆ ಈ ಸಬ್ಸಿಡಿ ಅನ್ವಯವಾಗಲಿದೆ.
- ಸುಲಭ ಸಾಲ (Easy Loan): ಸಬ್ಸಿಡಿ ಹೊರತುಪಡಿಸಿದ ಬಾಕಿ ಮೊತ್ತಕ್ಕೆ ರಿಯಾಯಿತಿ ದರದಲ್ಲಿ ಬ್ಯಾಂಕ್ ಸಾಲ ಲಭ್ಯ. ಮುದ್ರಾ ಲೋನ್ (Mudra Loan) ವ್ಯಾಪ್ತಿಯಲ್ಲಿ ಇದು ಸಿಗಲಿದೆ.
- ವೈವಿಧ್ಯಮಯ ಆಯ್ಕೆಗಳು: ನಾರ್ತ್ ಇಂಡಿಯನ್, ಸೌತ್ ಇಂಡಿಯನ್, ಫಾಸ್ಟ್ ಫುಡ್, ಜ್ಯೂಸ್ ಸೆಂಟರ್, ಸ್ವೀಟ್ ಕಾರ್ನರ್ – ಹೀಗೆ ಯಾವುದೇ ರೀತಿಯ ಮೊಬೈಲ್ ಕ್ಯಾಂಟೀನ್ ಆರಂಭಿಸಲು ಅವಕಾಶ.
ಮೊಬೈಲ್ ಕ್ಯಾಂಟೀನ್ ಸಬ್ಸಿಡಿ 2026 – ಅರ್ಹತಾ ಮಾನದಂಡಗಳು (Eligibility Criteria)
ಈ ₹5 ಲಕ್ಷ ಸಬ್ಸಿಡಿ ಯೋಜನೆಯ ಲಾಭ ಪಡೆಯಲು ನೀವು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:
- ನಿವಾಸ (Residence): ಅರ್ಜಿದಾರರು ಕರ್ನಾಟಕ ರಾಜ್ಯದ ಶಾಶ್ವತ ನಿವಾಸಿಯಾಗಿರಬೇಕು.
- ವಯಸ್ಸು (Age): ಕನಿಷ್ಠ 21 ವರ್ಷ ಪೂರ್ಣಗೊಂಡಿರಬೇಕು ಮತ್ತು ಗರಿಷ್ಠ 50 ವರ್ಷ ಮೀರಿರಬಾರದು. (ಮಹಿಳೆಯರು ಮತ್ತು ಪರಿಶಿಷ್ಟ ವರ್ಗದವರಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುವ ಸಾಧ್ಯತೆ).
- ಶಿಕ್ಷಣ (Education): ಕನಿಷ್ಠ 10ನೇ ತರಗತಿ (ಎಸ್.ಎಸ್.ಎಲ್.ಸಿ) ಪಾಸಾಗಿರಬೇಕು. ಹೋಟೆಲ್ ಮ್ಯಾನೇಜ್ಮೆಂಟ್ ಅಥವಾ ಆಹಾರ ತಯಾರಿಕೆಯಲ್ಲಿ ಡಿಪ್ಲೊಮಾ/ಸರ್ಟಿಫಿಕೇಟ್ ಹೊಂದಿದ್ದಲ್ಲಿ ಹೆಚ್ಚಿನ ಆದ್ಯತೆ ಸಿಗಲಿದೆ.
- ಆದಾಯ ಮಿತಿ (Income Limit): ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ₹5 ಲಕ್ಷದೊಳಗಿರಬೇಕು
- ತರಬೇತಿ (Training): ಸರ್ಕಾರ ಮಾನ್ಯತೆ ನೀಡಿರುವ ಸಂಸ್ಥೆಯಿಂದ ಕನಿಷ್ಠ 15 ದಿನಗಳ ಆಹಾರ ನಿರ್ವಹಣೆ ಮತ್ತು ವ್ಯವಹಾರ ಕುರಿತು ತರಬೇತಿ ಪಡೆದಿರಬೇಕು. ತರಬೇತಿ ಪಡೆಯದಿದ್ದಲ್ಲಿ, ಅರ್ಜಿ ಸಲ್ಲಿಸಿದ ನಂತರ ತರಬೇತಿ ಪಡೆಯಲು ಅವಕಾಶವಿರುತ್ತದೆ.
- ಪರವಾನಗಿ (License): ಸ್ಥಳೀಯ ಸಂಸ್ಥೆ (ಬಿಬಿಎಂಪಿ/ಪುರಸಭೆ) ಮತ್ತು ಆರೋಗ್ಯ ಇಲಾಖೆಯಿಂದ ಬೀದಿ ಬದಿ ವ್ಯಾಪಾರ ಪ್ರಮಾಣಪತ್ರ ಅಥವಾ ಅಂಗಡಿ ಪರವಾನಗಿ ಪಡೆಯಲು ಸಿದ್ಧರಿರಬೇಕು.
- ಮಾನ್ಯ ಚಾಲನಾ ಪರವಾನಗಿ: ಡ್ರೈವಿಂಗ್ ಲೈಸೆನ್ಸ್(Valid driving license)
Mobile Canteen Subsidy 2026 Karnataka: ಎಷ್ಟು ಸಬ್ಸಿಡಿ ಸಿಗುತ್ತೆ? ಉಚಿತ ತರಬೇತಿ ಇದೆಯಾ?
ಎಸ್ಸಿಎಸ್ಪಿ (SCSP) ಮತ್ತು ಟಿಎಸ್ಪಿ (TSP) ಯೋಜನೆಯಡಿ 4 ಚಕ್ರದ ವಾಹನ (ಮೊಬೈಲ್ ಕ್ಯಾಂಟೀನ್) ಖರೀದಿಸಲು ಘಟಕದ ಒಟ್ಟು ವೆಚ್ಚದ 70% ರಷ್ಟು ಅಥವಾ ಗರಿಷ್ಠ ₹5 ಲಕ್ಷದವರೆಗೆ ಸಬ್ಸಿಡಿ ಸಿಗಲಿದೆ.
ಉಚಿತ ತರಬೇತಿ (Free Training): ಆಯ್ಕೆಯಾದ ಅಭ್ಯರ್ಥಿಗಳಿಗೆ ಉದ್ಯಮವನ್ನು ಯಶಸ್ವಿಯಾಗಿ ನಡೆಸಲು 1 ತಿಂಗಳ ಕಾಲ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಉಚಿತ ತರಬೇತಿಯನ್ನು ನೀಡಲಾಗುತ್ತದೆ. ತರಬೇತಿಯಲ್ಲಿ ಆಹಾರ ತಯಾರಿಕೆ, ಗುಣಮಟ್ಟ ನಿಯಂತ್ರಣ, ಗ್ರಾಹಕ ಸೇವೆ, ಲೆಕ್ಕಪತ್ರ ನಿರ್ವಹಣೆ ಮತ್ತು ಮಾರುಕಟ್ಟೆ ತಂತ್ರಗಳ ಕುರಿತು ಕಲಿಸಲಾಗುತ್ತದೆ.
₹5 ಲಕ್ಷ ಸಬ್ಸಿಡಿಗೆ ಅರ್ಜಿ ಹಾಕಲು ಬೇಕಾದ ದಾಖಲೆಗಳು ಯಾವುವು?
ಅರ್ಜಿ ಸಲ್ಲಿಸುವ ಮೊದಲು ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿರಿಸಿಕೊಳ್ಳಿ:
- ಗುರುತಿನ ಪುರಾವೆ: ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ (ಯಾವುದಾದರೂ ಒಂದು).
- ವಿಳಾಸ ಪುರಾವೆ: ರೇಷನ್ ಕಾರ್ಡ್, ವಿದ್ಯುತ್ ಬಿಲ್, ಆಧಾರ್ ಕಾರ್ಡ್.
- ವಯಸ್ಸು ಮತ್ತು ಶಿಕ್ಷಣ: ಎಸ್.ಎಸ್.ಎಲ್.ಸಿ ಅಂಕಪಟ್ಟಿ ಅಥವಾ ಕಾಲೇಜು ಪ್ರಮಾಣಪತ್ರ.
- ಆದಾಯ ಪ್ರಮಾಣಪತ್ರ: (Income Certificate) ಗ್ರಾಮ ಒನ್ ಅಥವಾ ತಹಸೀಲ್ದಾರ್ ಕಚೇರಿಯಿಂದ ನೀಡಲಾದ ಇತ್ತೀಚಿನ ಪ್ರಮಾಣಪತ್ರ.
- ಜಾತಿ ಪ್ರಮಾಣಪತ್ರ: (Caste Certificate) ಅನ್ವಯಿಸಿದಲ್ಲಿ ಮಾತ್ರ.
- ಬ್ಯಾಂಕ್ ಖಾತೆ ಪುಸ್ತಕ: (Bank Passbook) ಫಲಾನುಭವಿಯ ಹೆಸರಿನಲ್ಲಿರುವ ಬ್ಯಾಂಕ್ ಖಾತೆಯ ವಿವರ.
- ತರಬೇತಿ ಪ್ರಮಾಣಪತ್ರ: (Training Certificate) ಆಹಾರ ತಯಾರಿಕೆ/ಹೋಟೆಲ್ ಮ್ಯಾನೇಜ್ಮೆಂಟ್ ತರಬೇತಿ ಪಡೆದಿದ್ದಲ್ಲಿ ಆ ಪ್ರಮಾಣಪತ್ರ.
- ಪಾಸ್ಪೋರ್ಟ್ ಗಾತ್ರದ ಫೋಟೋಗಳು: 4-5
- ವ್ಯಾಪಾರ ಪರವಾನಗಿ ಪ್ರತಿ: (ಈಗಾಗಲೇ ವ್ಯಾಪಾರ ಮಾಡುತ್ತಿದ್ದಲ್ಲಿ) ಅಥವಾ ಪಡೆಯುವುದಾಗಿ ಘೋಷಣಾ ಪತ್ರ.
- ಯೋಜನಾ ವರದಿ (Project Report): ನೀವು ಯಾವ ರೀತಿಯ ಮೊಬೈಲ್ ಕ್ಯಾಂಟೀನ್ ತೆರೆಯಲಿದ್ದೀರಿ, ಅಂದಾಜು ವೆಚ್ಚ, ನಿರೀಕ್ಷಿತ ಲಾಭ ಇತ್ಯಾದಿಗಳನ್ನು ಒಳಗೊಂಡ ಸಂಕ್ಷಿಪ್ತ ವರದಿ (ಬ್ಯಾಂಕ್ ಮತ್ತು DICಗೆ ಸಹಾಯಕವಾಗುತ್ತದೆ).
- ಚಾಲನಾ ಪರವಾನಗಿ: ಡ್ರೈವಿಂಗ್ ಲೈಸೆನ್ಸ್ (Driving license)
Mobile Canteen Subsidy 2026 Karnataka: ಅರ್ಜಿ ಸಲ್ಲಿಸುವ ವಿಧಾನ (Online & Offline Step-by-Step Application Process)
ಎರಡು ವಿಧಾನದಲ್ಲಿ ನೀವು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
ಮೊಬೈಲ್ ಕ್ಯಾಂಟೀನ್ ಸಬ್ಸಿಡಿ 2026 – ಆನ್ಲೈನ್ ಅರ್ಜಿ ವಿಧಾನ 1: Step-by-Step Guide
- ಮೊದಲು Seva Sindhu ಪೋರ್ಟಲ್ಗೆ ಭೇಟಿ ನೀಡಿ ಆಧಾರ್ (Aadhaar) ಬಳಸಿ ನೋಂದಣಿ (Registration) ಮಾಡಿ
- ನಂತರ ಮುಖಪುಟದ ಸರ್ಚ್ ನಲ್ಲಿ “ಆಹಾರ ವಾಹಿನಿ” ಅಥವಾ “Mobile Canteen Subsidy” ಹುಡುಕಿ
- ನಂತರ ಅರ್ಜಿ ಫಾರಂ (Application Form) ಭರ್ತಿ ಮಾಡಿ
- ನಂತರ ಅಲ್ಲಿ ಕೇಳುವ ಅಗತ್ಯ ದಾಖಲೆಗಳನ್ನು ಅಪ್ಲೋಡ್ (Upload Documents) ಮಾಡಿ
- ನಂತರ ಅರ್ಜಿ ಸಬ್ಮಿಟ್ ಮಾಡಿ ನಂತರ ಸ್ವೀಕೃತಿ ಪತ್ರ (Acknowledgement) ಡೌನ್ಲೋಡ್ ಮಾಡಿ
ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಲು ತಿಳಿಯಲಿಲ್ಲ ಅಂದರೆ ನಿಮ್ಮ ಹತ್ತಿರದ ಗ್ರಾಮ ಒನ್ (Grama One) ಅಥವಾ ಕರ್ನಾಟಕ ಒನ್ (Karnataka One) ಕೇಂದ್ರಗಳಲ್ಲೂ ಹೋಗಿ ಅರ್ಜಿ ಸಲ್ಲಿಸಬಹುದು.
ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವು: ಮಾರ್ಚ್ 6-03-2026 – ತಡಮಾಡದೆ ಈಗಲೇ ಅರ್ಜಿ ಸಲ್ಲಿಸುವುದು ಉತ್ತಮ.
ಮೊಬೈಲ್ ಕ್ಯಾಂಟೀನ್ ಸಬ್ಸಿಡಿ 2026 – ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? (Offline Application Process)
- ನಿಮ್ಮ ಜಿಲ್ಲೆಯಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಕಚೇರಿಗೆ ಭೇಟಿ ನೀಡಿ
- ಅಲ್ಲಿ ಮೊಬೈಲ್ ಕ್ಯಾಂಟೀನ್ ಯೋಜನೆಯ ಅರ್ಜಿ ನಮೂನೆಯನ್ನು ಪಡೆದುಕೊಳ್ಳಿ.
- ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಎಲ್ಲ ಅಗತ್ಯ ದಾಖಲೆಗಳ ಜೆರಾಕ್ಸ್ ನಕಲುಗಳನ್ನು ಲಗತ್ತಿಸಿ.
- ಭರ್ತಿ ಮಾಡಿದ ಅರ್ಜಿಯನ್ನು ಸಂಬಂಧಪಟ್ಟ ಅಧಿಕಾರಿಗೆ ಸಲ್ಲಿಸಿ ಮತ್ತು ಸ್ವೀಕೃತಿ ಪಡೆಯಿರಿ.
ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವು: ಮಾರ್ಚ್ 6-03-2026 – ತಡಮಾಡದೆ ಈಗಲೇ ಅರ್ಜಿ ಸಲ್ಲಿಸುವುದು ಉತ್ತಮ.
Back To Home Page: ಇಲ್ಲಿ ಕ್ಲಿಕ್ ಮಾಡಿ
ತೀರ್ಮಾನ (Conclusion)
ಕರ್ನಾಟಕ ಸರ್ಕಾರದ ಈ ನೂತನ ಮೊಬೈಲ್ ಕ್ಯಾಂಟೀನ್ ಯೋಜನೆಯು ಸಾವಿರಾರು ನಿರುದ್ಯೋಗಿ ಯುವಕರ(Unemployment) ಬದುಕಿನಲ್ಲಿ ಬೆಳಕು ತರಲಿದೆ. ₹5 ಲಕ್ಷದವರೆಗಿನ ಸಬ್ಸಿಡಿಯು ಒಂದು ದೊಡ್ಡ ಬಂಡವಾಳವಾಗಿದ್ದು, ಸ್ವಯಂ ಉದ್ಯಮಿಯಾಗುವ ಕನಸನ್ನು ನನಸಾಗಿಸುವ ಶಕ್ತಿ ಹೊಂದಿದೆ. ಆದ್ದರಿಂದ, ತಡ ಮಾಡದೆ, ಅರ್ಹತೆಗಳನ್ನು ಪರೀಕ್ಷಿಸಿಕೊಂಡು, ದಾಖಲೆಗಳನ್ನು ಸಿದ್ಧಪಡಿಸಿ, ಈ ಸುವರ್ಣಾವಕಾಶದ ಸದುಪಯೋಗ ಪಡೆದುಕೊಳ್ಳಿ.
ಹೆಚ್ಚಿನ ಮಾಹಿತಿ ಮತ್ತು ನವೀಕರಣಗಳಿಗಾಗಿ ನಿಮ್ಮ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಕಚರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು
ಗಮನಿಸಿ: ಕರ್ನಾಟಕ ಫ್ಲ್ಯಾಶ್ನಲ್ಲಿ ಪ್ರಕಟವಾಗುವ ಎಲ್ಲಾ ಮಾಹಿತಿ ಸಂಪೂರ್ಣವಾಗಿ ನಿಖರ ಮತ್ತು ಅಧಿಕೃತವಾಗಿರುತ್ತದೆ. ಯಾವುದೇ ಅನಧಿಕೃತ ಅಥವಾ ತಪ್ಪು ಮಾಹಿತಿಯನ್ನು ಪ್ರಕಟಿಸುವುದಿಲ್ಲ.
Mobile Canteen Subsidy 2026 Karnataka – FAQ
ಅರ್ಜಿ ಸಲ್ಲಿಸಿದ ನಂತರ ಹೇಗೆ ಸ್ಟೇಟಸ್ ಚೆಕ್ ಮಾಡುವುದು?
Seva Sindhu ಪೋರ್ಟಲ್ನಲ್ಲಿ Application Status ವಿಭಾಗದಲ್ಲಿ ನಿಮ್ಮ ಅರ್ಜಿ ಸಂಖ್ಯೆ ಬಳಸಿ ಸ್ಥಿತಿ ಪರಿಶೀಲಿಸಬಹುದು.
Project Report ಕಡ್ಡಾಯವೇ?
ಹೌದು. ನೀವು ಯಾವ ರೀತಿಯ ಮೊಬೈಲ್ ಕ್ಯಾಂಟೀನ್ ಆರಂಭಿಸುತ್ತೀರಿ, ಅಂದಾಜು ವೆಚ್ಚ ಮತ್ತು ಲಾಭ ವಿವರಗಳನ್ನು ಒಳಗೊಂಡ ಸಂಕ್ಷಿಪ್ತ Project Report ಸಲ್ಲಿಸುವುದು ಅಗತ್ಯ.
Mobile Canteen Subsidy 2026 Karnataka last date ಯಾವುದು?
ಸರ್ಕಾರದ ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವು: ಮಾರ್ಚ್ 6-03-2026 – ತಡಮಾಡದೆ ಈಗಲೇ ಅರ್ಜಿ ಸಲ್ಲಿಸುವುದು ಉತ್ತಮ
Nithya is a Government Schemes and Education and News writer at Karnatakaflash.com with 3+ years of experience covering Karnataka and Central government welfare programs, SSP scholarship, ration card, and education updates. She verifies all information from official government sources to provide accurate, clear, and trusted updates for citizens.
