LPG Cylinder Booking Rules 2026: LPG ಗ್ಯಾಸ್ ಸಿಲಿಂಡರ್ ಬುಕಿಂಗ್ ನಿಯಮ ಬದಲಾವಣೆ | 21 ದಿನಗಳ ಬಳಿಕವೇ ಸಿಲಿಂಡರ್ ಬುಕ್ಕಿಂಗ್ – ಸರ್ಕಾರದ ಹೊಸ ಘೋಷಣೆ

Spread the love

LPG Cylinder Booking Rules 2026:ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಯುದ್ಧದ ಪರಿಣಾಮ ಈಗ ಭಾರತದ ಮನೆಮನಗಳಿಗೂ ತಲುಪಿದೆ. ಇಸ್ರೇಲ್-ಇರಾನ್ ನಡುವಿನ ಸಂಘರ್ಷ, ಅಮೆರಿಕದ ಮಧ್ಯಪ್ರವೇಶದಿಂದಾಗಿ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆ ಸರಪಳಿ ಅಸ್ತವ್ಯಸ್ತಗೊಳ್ಳುವ ಆತಂಕ ಶುರುವಾಗಿದೆ. ಈ ಬೆಳವಣಿಗೆಯ ನೇರ ಪರಿಣಾವವಾಗಿ ಭಾರತ ಸರ್ಕಾರ ಮತ್ತು ತೈಲ ಮಾರುಕಟ್ಟೆ ಕಂಪನಿಗಳು (OMC ಗಳು) ಎಲ್ಪಿಜಿ ಸಿಲಿಂಡರ್ ಬುಕಿಂಗ್(LPG Cylinder Booking) ಮತ್ತು ಪೂರೈಕೆಗೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿವೆ. ಈ ಲೇಖನದಲ್ಲಿ ಆ ಹೊಸ ನಿಯಮ(LPG Cylinder Booking new rules)ಗಳ ಸಂಪೂರ್ಣ ಮಾಹಿತಿಯನ್ನು ನಿಮಗಾಗಿ ನೀಡಲಾಗಿದೆ.

Table of Contents

ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಭಾರತದ ಗ್ಯಾಸ್ ಮೇಲೆ ಏಕೆ? LPG Cylinder Booking Rules

LPG Cylinder Booking Rules 2026: LPG ಗ್ಯಾಸ್ ಸಿಲಿಂಡರ್ ಬುಕಿಂಗ್ ನಿಯಮ ಬದಲಾವಣೆ | 21 ದಿನಗಳ ಬಳಿಕವೇ ಸಿಲಿಂಡರ್ ಬುಕ್ಕಿಂಗ್ – ಸರ್ಕಾರದ ಹೊಸ ಘೋಷಣೆ

ಮಧ್ಯಪ್ರಾಚ್ಯ ದೇಶಗಳು ಜಾಗತಿಕ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಭಾರತವು ತನ್ನ ಸುಮಾರು ಶೇಕಡಾ 90 ರಷ್ಟು ಎಲ್ಪಿಜಿ ಅಗತ್ಯವನ್ನು ಪಶ್ಚಿಮ ಏಷ್ಯಾದ ದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತಿದೆ. ಇರಾನ್ ಮೇಲಿನ ದಾಳಿ, ಹಾರ್ಮುಜ್ ಜಲಸಂಧಿ ಮುಚ್ಚುವಿಕೆಯ ಆತಂಕ ಮತ್ತು ಹೆಚ್ಚುತ್ತಿರುವ ಮಿಲಿಟರಿ ಉದ್ವಿಗ್ನತೆಯಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ. ಇದರ ನೇರ ಪರಿಣಾಮ ದೇಶೀಯ ಮಾರುಕಟ್ಟೆಯ ಮೇಲೂ ಆಗಿದೆ. ಈ ಹಿನ್ನೆಲೆಯಲ್ಲಿಯೇ ಸರ್ಕಾರ ಮತ್ತು ತೈಲ ಕಂಪನಿಗಳು ಹೊಸ ನಿಯಮಗಳನ್ನು ಜಾರಿಗೆ ತಂದಿವೆ.

21 ದಿನಗಳ ಹೊಸ ಬುಕಿಂಗ್ ನಿಯಮ ಏನು? LPG Cylinder Booking Rules 2026

ತೈಲ ಮಾರುಕಟ್ಟೆ ಕಂಪನಿಗಳು ತೆಗೆದುಕೊಂಡಿರುವ ಪ್ರಮುಖ ನಿರ್ಧಾರದ ಪ್ರಕಾರ, ಈಗ ಗೃಹಬಳಕೆಯ ಅನಿಲ ಗ್ರಾಹಕರು ಒಂದು ಸಿಲಿಂಡರ್ ಖರೀದಿಸಿದ ಬಳಿಕ ಮತ್ತೊಂದು ಸಿಲಿಂಡರ್ ಬುಕ್ ಮಾಡಲು ಕನಿಷ್ಠ 21 ದಿನಗಳು ಕಾಯಬೇಕಾಗುತ್ತದೆ. ಅಂದರೆ, ನಿಮ್ಮ ಮನೆಗೆ ಸಿಲಿಂಡರ್ ಡೆಲಿವರಿ ಆದ ದಿನಾಂಕದಿಂದ 21 ದಿನಗಳ ನಂತರವೇ ನೀವು ಮುಂದಿನ ಸಿಲಿಂಡರ್ ಅನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ.

ಏಕೆ 21 ದಿನಗಳ ನಿಯಮ ಜಾರಿ? Cylinder Booking 21-day rule

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧದ ಭೀತಿಯಿಂದಾಗಿ ಜನರಲ್ಲಿ ‘ಪ್ಯಾನಿಕ್ ಬುಕಿಂಗ್‘ ಪ್ರಮಾಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಅನಿಲ ಪೂರೈಕೆಯ ಬಗ್ಗೆ ಆತಂಕಗೊಂಡ ಜನರು ಮುಂಚಿತವಾಗಿಯೇ ಸಿಲಿಂಡರ್‌ಗಳನ್ನು ಬುಕ್ ಮಾಡಲು ಆರಂಭಿಸಿದ್ದರು. ಇದರಿಂದ ಎಲ್ಪಿಜಿಗೆ ಹಠಾತ್ ಬೇಡಿಕೆ ಸೃಷ್ಟಿಯಾಗಿ ವಿತರಣಾ ವ್ಯವಸ್ಥೆಯ ಮೇಲೆ ತೀವ್ರ ಒತ್ತಡ ಉಂಟಾಗಿತ್ತು. ಈ ಒತ್ತಡವನ್ನು ಕಡಿಮೆ ಮಾಡಲು ಮತ್ತು ಪೂರೈಕೆ ಸರಪಳಿಯನ್ನು ಸುಗಮಗೊಳಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಮತ್ತು ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್) ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿವೆ. ಉದಾಹರಣೆಗೆ, ಕೋಲ್ಕತ್ತಾದಲ್ಲಿ ಒಂದೇ ದಿನದಲ್ಲಿ 1.5 ಲಕ್ಷ ಬುಕಿಂಗ್ ಆಗಿದ್ದರೆ, ಸಾಮಾನ್ಯವಾಗಿ 1 ಲಕ್ಷ ಬುಕಿಂಗ್ ಮಾತ್ರ ಇರುತ್ತಿತ್ತು. ಈ ಹೆಚ್ಚುವರಿ ಬುಕಿಂಗ್ ನಿಯಂತ್ರಿಸಲು 21 ದಿನಗಳ ನಿಯಮ ತರಲಾಗಿದೆ.

ಸಿಲಿಂಡರ್ ಬೆಲೆಯಲ್ಲಿ ಏರಿಕೆ | cylinder prices Increase

ಯುದ್ಧದ ಪರಿಣಾಮ ಸಿಲಿಂಡರ್ ಬೆಲೆಯ ಮೇಲೂ ಆಗಿದೆ. ರಾಜಧಾನಿ ದೆಹಲಿಯಲ್ಲಿ ದೇಶೀಯ ಎಲ್ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 60 ರೂ. ಗಳಷ್ಟು ಹೆಚ್ಚಿಸಲಾಗಿದೆ. ಈ ಹೆಚ್ಚಳದೊಂದಿಗೆ, 14.2 ಕೆಜಿಯ ದೇಶೀಯ ಎಲ್ಪಿಜಿ ಸಿಲಿಂಡರ್ ಬೆಲೆ 853 ರೂ. ನಿಂದ 913 ರೂ. ಗೆ ಏರಿಕೆಯಾಗಿದೆ. ಕರ್ನಾಟಕದಲ್ಲೂ ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 900 ರೂ. ಗಡಿ ದಾಟಿದೆ.

ಸಂಸ್ಕರಣಾಗಾರಗಳಿಗೆ ಕೇಂದ್ರದ ಕಟ್ಟುನಿಟ್ಟಿನ ಸೂಚನೆಗಳು

ಯುದ್ಧದ ಪರಿಣಾಮದಿಂದ ದೇಶದಲ್ಲಿ ಎಲ್ಪಿಜಿ ಕೊರತೆಯಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರವು ಎಲ್ಲಾ ಸಂಸ್ಕರಣಾಗಾರಗಳಿಗೆ (ರಿಫೈನರಿಗಳಿಗೆ) ಕೆಲವು ಕಡ್ಡಾಯ ಆದೇಶಗಳನ್ನು ಹೊರಡಿಸಿದೆ.

1.ಪ್ರೊಪೇನ್ ಮತ್ತು ಬ್ಯುಟೇನ್ ಮೀಸಲು ಅಡುಗೆ ಅನಿಲಕ್ಕೆ ಮಾತ್ರ

ಸಂಸ್ಕರಣಾಗಾರಗಳಲ್ಲಿ ಉತ್ಪಾದನೆಯಾಗುವ ಪ್ರೊಪೇನ್ ಮತ್ತು ಬ್ಯುಟೇನ್ ಅನಿಲಗಳ ನಿಕ್ಷೇಪಗಳನ್ನು ಇನ್ನು ಮುಂದೆ ಯಾವುದೇ ಕೈಗಾರಿಕಾ ಉದ್ದೇಶಗಳಿಗೆ ಬಳಸಬಾರದು. ಈ ಎರಡೂ ಅನಿಲಗಳನ್ನು ಸಂಪೂರ್ಣವಾಗಿ ಎಲ್ಪಿಜಿ (ಅಡುಗೆ ಅನಿಲ) ತಯಾರಿಕೆಗೆ ಮಾತ್ರ ಹಂಚಿಕೆ ಮಾಡಬೇಕೆಂದು ಆದೇಶಿಸಲಾಗಿದೆ. ಸಾಮಾನ್ಯವಾಗಿ ಕಂಪನಿಗಳು ಇವುಗಳನ್ನು ಇತರ ಪೆಟ್ರೋಕೆಮಿಕಲ್ ಉತ್ಪನ್ನಗಳಿಗೆ ತಿರುಗಿಸುತ್ತಿದ್ದವು.

2. ಸರ್ಕಾರಿ ಕಂಪನಿಗಳಿಗೆ ಮಾತ್ರ ಪೂರೈಕೆ

ಉತ್ಪಾದಿಸಲಾದ ಅನಿಲವನ್ನು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ (PSU ಗಳು) ಮಾತ್ರ ಪೂರೈಸಬೇಕು. ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ (HPCL), ಭಾರತ್ ಪೆಟ್ರೋಲಿಯಂ (BPCL) ನಂತಹ ಸರ್ಕಾರಿ ಸ್ವಾಮ್ಯದ ಕಂಪನಿಗಳು ಮಾತ್ರ ಈ ಮೀಸಲು ಅನಿಲವನ್ನು ಪಡೆಯಬೇಕು. ಖಾಸಗಿ ವಲಯದ ಕಂಪನಿಗಳಿಗೆ ಈ ಅನಿಲವನ್ನು ಮಾರಾಟ ಮಾಡುವುದರ ಮೇಲೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.

3. ಕೈಗಾರಿಕೆಗಿಂತ ದೇಶೀಯ ಅಗತ್ಯಗಳಿಗೆ ಆದ್ಯತೆ

ದೇಶೀಯ ಅಗತ್ಯಗಳಿಗೆ ಆದ್ಯತೆ ನೀಡಿ, ಕೈಗಾರಿಕಾ ವಲಯಕ್ಕೆ ಪೂರೈಕೆಯನ್ನು ಕಡಿಮೆ ಮಾಡಲು ಸಂಸ್ಕರಣಾಗಾರಗಳಿಗೆ ಸೂಚಿಸಲಾಗಿದೆ. ಪ್ರತಿ ಹನಿ ಇಂಧನವನ್ನು ಅಡುಗೆ ಅನಿಲ ಉತ್ಪಾದನೆಗೆ ಮಾತ್ರ ಬಳಸಬೇಕೆಂದು ಸಚಿವಾಲಯ ಒತ್ತಾಯಿಸಿದೆ.

ಭಾರತದಲ್ಲಿ ಎಷ್ಟು ಗ್ಯಾಸ್ ಕನೆಕ್ಷನ್ ಇವೆ?

ದೇಶದಲ್ಲಿ ಪ್ರಸ್ತುತ 33 ಕೋಟಿಗೂ ಹೆಚ್ಚು ಅನಿಲ ಸಂಪರ್ಕಗಳಿವೆ. ಇವುಗಳಲ್ಲಿ 10 ಕೋಟಿಗೂ ಹೆಚ್ಚು ಜನರು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (PMUY) ಫಲಾನುಭವಿಗಳಾಗಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯ ಗ್ರಾಹಕರಿಗೆ ನಿರಂತರ ಅನಿಲ ಪೂರೈಕೆ ಮಾಡುವುದು ಸರ್ಕಾರದ ಆದ್ಯತೆಯ ಜವಾಬ್ದಾರಿಯಾಗಿದೆ.

ನಿಯಮ ಉಲ್ಲಂಘಿಸಿದರೆ ಶಿಕ್ಷೆ ಏನು?

  • ಸರ್ಕಾರದ ಈ ನಿಯಮಗಳನ್ನು ಉಲ್ಲಂಘಿಸುವ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
  • ಅಗತ್ಯ ಸರಕುಗಳ ಕಾಯ್ದೆ, 1955 ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಬಹುದಾಗಿದೆ.
  • ಪೆಟ್ರೋಲಿಯಂ ಉತ್ಪನ್ನಗಳ ನಿಯಮಗಳ ಪ್ರಕಾರ ಭಾರಿ ದಂಡ ವಿಧಿಸಲಾಗುವುದು.
  • ಕಂಪನಿಗಳು ತಮ್ಮ ಸ್ವಂತ ಲಾಭಕ್ಕಾಗಿ ಅನಿಲ ದಾಸ್ತಾನುಗಳನ್ನು ಬೇರೆಡೆಗೆ ತಿರುಗಿಸದಂತೆ ಅಧಿಕಾರಿಗಳು ಮೇಲ್ವಿಚಾರಣೆ ಮಾಡಲಿದ್ದಾರೆ.

ಸಾಮಾನ್ಯ ಜನರಿಗೆ ಸರ್ಕಾರದ ಭರವಸೆ

ಕೇಂದ್ರ ಸರ್ಕಾರವು ಈ ನಿರ್ಧಾರದ ಮೂಲಕ ಸಾಮಾನ್ಯ ಜನರಿಗೆ ಒಂದು ಸ್ಪಷ್ಟ ಭರವಸೆ ನೀಡಿದೆ. ಅಂತರರಾಷ್ಟ್ರೀಯ ಯುದ್ಧದ ಪರಿಸ್ಥಿತಿಯು ನಮ್ಮ ಅಡುಗೆಮನೆಗಳ ಮೇಲೆ ಪರಿಣಾಮ ಬೀರದಂತೆ ತಡೆಯುವುದೇ ಸರ್ಕಾರದ ಮೂಲ ಉದ್ದೇಶವಾಗಿದೆ. ಎಲ್ಲಾ ಸಂಸ್ಕರಣಾಗಾರಗಳು ತಮ್ಮ ಪೂರ್ಣ ಸಾಮರ್ಥ್ಯದಲ್ಲಿ ಅಡುಗೆ ಅನಿಲವನ್ನು ಉತ್ಪಾದಿಸಿದರೆ, ದೇಶದಲ್ಲಿ ಯಾವುದೇ ಕೊರತೆ ಉಂಟಾಗುವುದಿಲ್ಲ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ. ಜನರು ಆತಂಕಪಡುವ ಅಗತ್ಯವಿಲ್ಲ ಮತ್ತು ಅನಿಲ ಪೂರೈಕೆಯು ಎಂದಿನಂತೆ ಸುಗಮವಾಗಿ ಮುಂದುವರಿಯುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಗ್ರಾಹಕರು ಈಗ ಏನು ಮಾಡಬೇಕು?

ಹೊಸ ನಿಯಮ ಮತ್ತು ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಗ್ರಾಹಕರು ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ:

  • ಪ್ಯಾನಿಕ್ ಬುಕಿಂಗ್ ಬೇಡ: ಯಾವುದೇ ಆತಂಕಕ್ಕೆ ಒಳಗಾಗಿ ಅನಗತ್ಯವಾಗಿ ಸಿಲಿಂಡರ್ ಬುಕ್ ಮಾಡಬೇಡಿ. 21 ದಿನಗಳ ನಿಯಮದಿಂದಾಗಿ ಮೊದಲೇ ಬುಕ್ ಮಾಡಿದರೂ ಪ್ರಯೋಜನವಿಲ್ಲ.
  • ಸ್ಟಾಕ್ ಪರಿಶೀಲಿಸಿ: ನಿಮ್ಮ ಬಳಿ ಇರುವ ಗ್ಯಾಸ್ ಸ್ಟಾಕ್ ಅನ್ನು ಸರಿಯಾಗಿ ಅಂದಾಜು ಮಾಡಿ. ಸಂಪೂರ್ಣ ಖಾಲಿಯಾದ ಮೇಲೆಯೇ ಬುಕಿಂಗ್ ಮಾಡಿ.
  • ಮಿತಿ ಬಳಕೆ: ಅಡುಗೆ ಅನಿಲವನ್ನು ಮಿತವಾಗಿ ಬಳಸುವ ಅಭ್ಯಾಸ ರೂಢಿಸಿಕೊಳ್ಳಿ. ಪ್ರೆಶರ್ ಕುಕ್ಕರ್ ಬಳಕೆ, ಸಣ್ಣ ಉರಿಯಲ್ಲಿ ಅಡುಗೆ ಮಾಡುವುದರಿಂದ ಅನಿಲ ಉಳಿತಾಯವಾಗುತ್ತದೆ.
  • ಕೆವೈಸಿ ಅಪ್ಡೇಟ್: ನಿಮ್ಮ ಗ್ಯಾಸ್ ಕನೆಕ್ಷನ್‌ಗೆ ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.

Back To Home Pageಇಲ್ಲಿ ಕ್ಲಿಕ್ ಮಾಡಿ

Conclusion

ಮಧ್ಯಪ್ರಾಚ್ಯದ ಯುದ್ಧದ ಪರಿಣಾಮ ಭಾರತದ ಗ್ಯಾಸ್ ಸೇವೆಯ ಮೇಲೂ ಆಗಿದೆ. 21 ದಿನಗಳ ಬುಕಿಂಗ್ ನಿಯಮ ಜಾರಿಯಾಗಿದೆ. ಸಿಲಿಂಡರ್ ಬೆಲೆಯಲ್ಲಿ 60 ರೂ. ಏರಿಕೆಯಾಗಿದೆ. ಕೊರತೆ ನೀಗಿಸಲು ಸಂಸ್ಕರಣಾಗಾರಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.

ಪ್ರೊಪೇನ್-ಬ್ಯುಟೇನ್ ಅನಿಲವನ್ನು ಕೈಗಾರಿಕೆಗೆ ತಿರುಗಿಸದೆ ಅಡುಗೆ ಅನಿಲಕ್ಕೆ ಮಾತ್ರ ಬಳಸಬೇಕು. ಖಾಸಗಿ ಕಂಪನಿಗಳಿಗೆ ಮಾರಾಟ ನಿಷೇಧಿಸಲಾಗಿದೆ. ಜನರು ಆತಂಕಪಡಬೇಕಾಗಿಲ್ಲ, ಪೂರೈಕೆ ಸುಗಮವಾಗಿದೆ ಎಂದು ಸರ್ಕಾರ ಭರವಸೆ ನೀಡಿದೆ.

ಗಮನಿಸಿ: ಕರ್ನಾಟಕ ಫ್ಲ್ಯಾಶ್‌ನಲ್ಲಿ ಪ್ರಕಟವಾಗುವ ಎಲ್ಲಾ ಮಾಹಿತಿ ಸಂಪೂರ್ಣವಾಗಿ ನಿಖರ ಮತ್ತು ಅಧಿಕೃತವಾಗಿರುತ್ತದೆ. ಯಾವುದೇ ಅನಧಿಕೃತ ಅಥವಾ ತಪ್ಪು ಮಾಹಿತಿಯನ್ನು ಪ್ರಕಟಿಸುವುದಿಲ್ಲ.

FAQ- LPG ಸಿಲಿಂಡರ್ ಬುಕ್ಕಿಂಗ್ ಮೇಲೆ ಹೊಸ ನಿಯಮ

LPG ಸಿಲಿಂಡರ್ ಬುಕ್ಕಿಂಗ್ ಮೇಲೆ ಹೊಸ ನಿಯಮ ಏನು?

ಹೊಸ ನಿಯಮದ ಪ್ರಕಾರ, ಒಂದು LPG ಸಿಲಿಂಡರ್ ಡೆಲಿವರಿ ಆದ ಬಳಿಕ ಮುಂದಿನ ಸಿಲಿಂಡರ್ ಬುಕ್ ಮಾಡಲು ಕನಿಷ್ಠ 21 ದಿನಗಳು ಕಾಯಬೇಕು. ಈ ನಿಯಮವನ್ನು ತೈಲ ಮಾರುಕಟ್ಟೆ ಕಂಪನಿಗಳು ಜಾರಿಗೆ ತಂದಿವೆ.

21 ದಿನಗಳ ನಿಯಮವನ್ನು ಏಕೆ ಜಾರಿಗೆ ತಂದಿದ್ದಾರೆ?

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಭೀತಿಯಿಂದ ಜನರು ಹೆಚ್ಚಿನ ಪ್ರಮಾಣದಲ್ಲಿ ಪ್ಯಾನಿಕ್ ಬುಕ್ಕಿಂಗ್ ಮಾಡುತ್ತಿರುವುದರಿಂದ LPG ಪೂರೈಕೆ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚಾಗಿದೆ. ಇದನ್ನು ನಿಯಂತ್ರಿಸಲು ಈ ನಿಯಮ ಜಾರಿಗೆ ತರಲಾಗಿದೆ.

LPG ಸಿಲಿಂಡರ್ ಬೆಲೆ ಎಷ್ಟು ಹೆಚ್ಚಾಗಿದೆ?

ಇತ್ತೀಚಿನ ಮಾಹಿತಿಯ ಪ್ರಕಾರ 14.2 ಕೆಜಿ LPG ಸಿಲಿಂಡರ್ ಬೆಲೆಯಲ್ಲಿ ಸುಮಾರು ₹60 ಹೆಚ್ಚಳವಾಗಿದೆ. ದೆಹಲಿಯಲ್ಲಿ ಸಿಲಿಂಡರ್ ಬೆಲೆ ₹853 ರಿಂದ ₹913ಕ್ಕೆ ಏರಿಕೆಯಾಗಿದೆ.

Leave a Comment