BREAKING: FID Update Karnataka 2026 – ಇಂದೇ ಅಪ್‌ಡೇಟ್ ಮಾಡಿ, ಇಲ್ಲವಾದರೆ PM-Kisan & Subsidy ಹಣ ಸ್ಟಾಪ್! ಸಂಪೂರ್ಣ ಮಾಹಿತಿ

Spread the love

FID Update Karnataka 2026:ಕರ್ನಾಟಕ ರಾಜ್ಯದ ರೈತ ಬಾಂಧವರಿಗೆ, ಕೃಷಿ ಇಲಾಖೆ(Department Agriculture)ಯಿಂದ ಒಂದು ಮಹತ್ವದ ಮತ್ತು ತುರ್ತು ಸೂಚನೆಯನ್ನು ರೈತರಿಗೆ ಪ್ರಮುಖ ಮಾಹಿತಿ ನೀಡಿದೆ. ನೀವು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವಿವಿಧ ಯೋಜನೆ(Central and State Govt schemes) ಅಡಿ ಸಿಗುವಂತ ಹಣ(money) ಹಾಗೂ ಸರ್ಕಾರದಿಂದ ಬರುವ ಸಬ್ಸಿಡಿ(Subsidy), ಸಾಲ ಮನ್ನಾ(Loan waiver), ಬೆಳೆ ವಿಮೆ(Crop insurance) ಅಥವಾ ಬೇರೆ ಯಾವುದೇ ರೈತ ಸೌಲಭ್ಯಗಳನ್ನು ಪಡೆಯಬೇಕಾದರೆ? ನಿಮ್ಮ ಹತ್ತಿರ ರೈತರ FId ಇರಬೇಕು ಅಥವಾ ನಿಮ್ಮ ರೈತರ ಗುರುತಿನ ಚೀಟಿ(Farmer ID – FID) ಸಂಪೂರ್ಣವಾಗಿ ಅಪ್ಡೇಟ್ ಆಗಿರಬೇಕು.

ರಾಜ್ಯಾದ್ಯಂತ ಸಾವಿರಾರು ರೈತರಿಗೆ ತಿಂಗಳುಗಟ್ಟಲೆ ಸಬ್ಸಿಡಿ ಹಣ(Subsidy money) ಬಂದಿಲ್ಲ, ಬೆಳೆ ಹಾನಿ ಪರಿಹಾರ(Crop damage compensation) ಬಂದಿಲ್ಲ, ಬ್ಯಾಂಕಿನಲ್ಲಿ ಲೋನ್(bank loan) ಹಾಗೂ ಅನೇಕ ಸೌಲಭ್ಯಗಳ ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಇದಕ್ಕೆ ಮುಖ್ಯ ಕಾರಣ ಅವರ FID (Farmer ID) ಅಥವಾ ರೈತರ ಗುರುತಿನ ಚೀಟಿ ಅಪ್ಡೇಟ್(FID Update) ಆಗದೇ ಇರುವುದೇ ಆಗಿದೆ. ಹೌದು, ನೀವು ನಿಮ್ಮ FID ಅನ್ನು ಸರಿಯಾಗಿ ನವೀಕರಿಸದೇ ಇದ್ದರೆ, ಮುಂದಿನ ದಿನಗಳಲ್ಲಿ ನಿಮ್ಮ ಸಬ್ಸಿಡಿ ಹಣ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನೇಕ ಸೌಲಭ್ಯ(Central and State Govt schemes)ಗಳು ಸಂಪೂರ್ಣವಾಗಿ ಸ್ಟಾಪ್(stop) ಆಗುವ ಸಾಧ್ಯತೆಗಳಿವೆ ಎಂದು ಇಲಾಖೆ ಸೂಚನೆ ನೀಡಿದೆ .

ಈ ಲೇಖನದಲ್ಲಿ, FID ಅಂದರೆ ಏನು? FID ಅಪ್ಡೇಟ್ ಏಕೆ ಮುಖ್ಯ, FID Update ಹೇಗೆ ಮಾಡುವುದು, FID ಅಪ್ಡೇಟ್ ಆಗದೇ ಇದ್ದರೆ ಏನಾಗುತ್ತದೆ? ಮತ್ತು ಇದರಿಂದ ನಿಮಗೆ ಆಗುವ ಲಾಭಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.

Table of Contents

FID ಅಂದರೆ ಏನು? ಅದು ಏಕೆ ಇಷ್ಟೊಂದು ಮುಖ್ಯ? What is Farmer ID (FID)?

BREAKING: FID Update Karnataka 2026 – ಇಂದೇ ಅಪ್‌ಡೇಟ್ ಮಾಡಿ, ಇಲ್ಲವಾದರೆ PM-Kisan & Subsidy ಹಣ ಸ್ಟಾಪ್! ಸಂಪೂರ್ಣ ಮಾಹಿತಿ

FID ಅಂದರೆ ಫಾರ್ಮರ್ ಐಡಿ (Farmer ID) . ಇದು ಕರ್ನಾಟಕ ಸರ್ಕಾರದ ಕೃಷಿ ಇಲಾಖೆ(Government of Karnataka Agriculture Department)ಯು ಪ್ರತಿ ರೈತರಿಗೂ ನೀಡುವ ಒಂದು ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ. ಸರ್ಕಾರಿ ಯೋಜನೆಗಳ ಲಾಭವನ್ನು ಪಾರದರ್ಶಕವಾಗಿ ಮತ್ತು ನೇರವಾಗಿ ರೈತರ ಖಾತೆಗೆ ತಲುಪಿಸುವುದು ಇದರ ಮೂಲ ಉದ್ದೇಶವಾಗಿದೆ.

ಮೊದಲೆಲ್ಲಾ ಸಬ್ಸಿಡಿ ಪಡೆಯಲು ಬೇರೆ ಬೇರೆ ದಾಖಲೆಗಳು ಬೇಕಾಗಿದ್ದವು. ಆದರೆ ಈಗ, FID ನಿಮ್ಮ ಡಿಜಿಟಲ್ ಗುರುತಿನ ಚೀಟಿಯಾಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಭೂಮಿಯ ವಿವರ, ಬೆಳೆಯ ಮಾಹಿತಿ, ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಕಾರ್ಡ್ ಎಲ್ಲವೂ ಈ ಒಂದೇ ID ಯೊಂದಿಗೆ ಲಿಂಕ್ ಆಗಿರುತ್ತದೆ.

FID ಅಪ್ಡೇಟ್ ಆಗದೇ ಇದ್ದರೆ ಏನಾಗುತ್ತದೆ? (What Happens If FID Not Updated?)

ಸಬ್ಸಿಡಿ ಹಣ ಸ್ಟಾಪ್(Subsidy money stop): ನೀವು ರಸಗೊಬ್ಬರ, ಬೀಜ ಅಥವಾ ಯಾವುದೇ ಕೃಷಿ ಉಪಕರಣ ಮೇಲೆ ಪಡೆಯುತ್ತಿದ್ದ ಸಬ್ಸಿಡಿ(Subsidy) ನೇರವಾಗಿ ನಿಂತು ಹೋಗುತ್ತದೆ.

ಬೆಳೆ ವಿಮೆ ಸಮಸ್ಯೆ: ಬೆಳೆ ವಿಮೆ ಕ್ಲೈಮ್(Crop insurance claim) ಮಾಡಲು FID ಕಡ್ಡಾಯವಾಗಿದೆ. ಅದಿಲ್ಲದಿದ್ದರೆ ವಿಮೆ ಹಕ್ಕು ಸಾಬೀತು ಪಡಿಸಿಕೊಳ್ಳಲು ಆಗುವುದಿಲ್ಲ.

ಸಾಲ ಮನ್ನಾ ತೊಂದರೆ: ಸರ್ಕಾರ ಯಾವುದೇ ಸಾಲ ಮನ್ನಾ ಯೋಜನೆ(Loan waiver scheme) ಘೋಷಿಸಿದರೆ, ಅದರ ಪ್ರಯೋಜನ ಪಡೆಯಲು ನಿಮ್ಮ FID ಪಡೆದಿರಲೇಬೇಕು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN): ಈ ಯೋಜನೆಯ 6000 ರೂಪಾಯಿ ವಾರ್ಷಿಕ ಸಹಾಯಧನವು ನಿಮ್ಮ FID ಜೊತೆಗೆ ಲಿಂಕ್ ಆಗಿದೆ. ಅಪ್ಡೇಟ್(update) ಆಗದಿದ್ದರೆ ಹಣ(money) ಬರುವುದೇ ನಿಂತು ಹೋಗುತ್ತದೆ.

ಯಾರೆಲ್ಲಾ ತಮ್ಮ FID ಅಪ್ಡೇಟ್ ಮಾಡಿಸಿಕೊಳ್ಳಬೇಕು?

ಕೆಳಗಿನ ಯಾವುದಾದರೂ ಒಂದು ವರ್ಗಕ್ಕೆ ನೀವು ಸೇರುತ್ತಿದ್ದರೆ, ನೀವು ತಕ್ಷಣ ನಿಮ್ಮ FID ಅಪ್ಡೇಟ್ ಅನ್ನು ಮಾಡಿಸಿಕೊಳ್ಳಲೇಬೇಕು:

  1. ಹೊಸ ರೈತರು: ಇತ್ತೀಚೆಗೆ ಕೃಷಿ ಆರಂಭಿಸಿದವರು.
    ಭೂಮಿ ಖರೀದಿ/ಮಾರಾಟ ಮಾಡಿದವರು: ನಿಮ್ಮ ಭೂಮಿಯ ವಿವರ ಬದಲಾಗಿದ್ದರೆ ನಿಮ್ಮ FID ಅಪ್ಡೇಟ್ ಅನ್ನು ಮಾಡಿಸಿಕೊಳ್ಳಲೇಬೇಕು.
  2. ಬ್ಯಾಂಕ್ ಖಾತೆ ಬದಲಿಸಿದವರು: ಸಬ್ಸಿಡಿ ಹಣ ಬರುವ ಖಾತೆ ಬೇರೆಯಾಗಿದ್ದರೆ ನಿಮ್ಮ FID ಅಪ್ಡೇಟ್ ಅನ್ನು ಮಾಡಿಸಿಕೊಳ್ಳಲೇಬೇಕು.
  3. ಮೊಬೈಲ್ ನಂಬರ್ ಬದಲಿಸಿದವರು: OTP ಸೇರಿದಂತೆ ಎಲ್ಲಾ ಸೂಚನೆಗಳು ನಿಮ್ಮ ನೋಂದಾಯಿತ ಮೊಬೈಲ್ ಗೆ ಬರುತ್ತವೆ ನಿಮ್ಮ FID ಅಪ್ಡೇಟ್ ಅನ್ನು ಮಾಡಿಸಿಕೊಳ್ಳಲೇಬೇಕು.
  4. ಹೆಸರು ಅಥವಾ ವಿಳಾಸದಲ್ಲಿ ತಪ್ಪಿರುವವರು: ದಾಖಲೆಗಳಲ್ಲಿ ಹೆಸರು, ತಂದೆಯ ಹೆಸರು ಅಥವಾ ವಿಳಾಸದಲ್ಲಿ ತಪ್ಪಿದ್ದರೆ ನಿಮ್ಮ FID ಅಪ್ಡೇಟ್ ಅನ್ನು ಮಾಡಿಸಿಕೊಳ್ಳಲೇಬೇಕು.

Back To Home Pageಇಲ್ಲಿ ಕ್ಲಿಕ್ ಮಾಡಿ

FID Update Karnataka 2026 | ಕಡ್ಡಾಯವಾಗಿ ಅಪ್‌ಡೇಟ್ ಮಾಡಬೇಕಾದ 4 ಮುಖ್ಯ ವಿಷಯಗಳು (Mandatory Updates)

ನಿಮ್ಮ ಬಳಿ FID (Farmer ID) ಇದ್ದರೆ ಮಾತ್ರ ಸಾಕಾಗುವುದಿಲ್ಲ. ಸರ್ಕಾರದ ಯೋಜನೆಗಳ ಲಾಭ(Benefit of Government Schemes) ಪಡೆಯಲು, ನಿಮ್ಮ FID ಸಂಪೂರ್ಣ ಮತ್ತು ದೃಢೀಕೃತ ಆಗಿರಬೇಕು. ಕೃಷಿ ಇಲಾಖೆಯ ಹೊಸ ನಿಯಮ(New rule of the Agriculture Department)ಗಳ ಪ್ರಕಾರ, ಕೆಳಗಿನ 4 ಪ್ರಮುಖ ಅಂಶಗಳು ನಿಮ್ಮ FID ನಲ್ಲಿ ಕಡ್ಡಾಯವಾಗಿ ಇರಲೇಬೇಕು. ಇವುಗಳಲ್ಲಿ ಯಾವುದಾದರೂ ಒಂದು ಕೊರತೆ ಇದ್ದರೆ, ನಿಮ್ಮ ಸಬ್ಸಿಡಿ ಹಣ ಸ್ಟಾಪ್ ಆಗುವುದು ಖಚಿತ.

1.ಆಧಾರ್ ಲಿಂಕ್ ಮೊಬೈಲ್ (Aadhaar Linked Mobile Number)

  • ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್(Link to Aadhaar card) ಆಗಿರುವ ಸಕ್ರಿಯ ಮೊಬೈಲ್ ಸಂಖ್ಯೆ ಇದು ಅತ್ಯಂತ ಮುಖ್ಯ.
  • FRUITS ಪೋರ್ಟಲ್‌ನಲ್ಲಿ ಲಾಗಿನ್ ಆಗಲು, e-KYC ಮಾಡಲು ಮತ್ತು ಸಬ್ಸಿಡಿ ಸ್ಟೇಟಸ್ ತಿಳಿಯಲು OTP ನಿಮ್ಮ ಈ ಮೊಬೈಲ್‌ಗೆ ಮಾತ್ರ ಬರುತ್ತದೆ.
  • ನಿಮ್ಮ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನಿಮ್ಮ ಬಳಕೆಯಲ್ಲಿಯೇ ಇದೆಯಾ? ಇಲ್ಲದಿದ್ದರೆ, ತಕ್ಷಣ ನಿಮ್ಮ ಹತ್ತಿರದ ಆಧಾರ್ ಕೇಂದ್ರ ಅಥವಾ ಬ್ಯಾಂಕ್‌ಗೆ ಹೋಗಿ ಮೊಬೈಲ್ ನಂಬರ್ ಅಪ್ಡೇಟ್ ಮಾಡಿಸಿ.

2.ಇ-ಕೆವೈಸಿ ದೃಢೀಕರಣ (e-KYC Verification)

  • ನೀವು ನಿಜವಾಗಿಯೂ ಆ ವ್ಯಕ್ತಿಯೇ ಎಂದು ಸಾಬೀತುಪಡಿಸುವ ಪ್ರಕ್ರಿಯೆ. ಇದು ಬಯೋಮೆಟ್ರಿಕ್ (ಅಂಗೈ ಗುರುತು / ಕಣ್ಣು ಪಾಪೆ) ಮೂಲಕ ಅಥವಾ OTP ಮೂಲಕ ಆಗುತ್ತೆ.
  • ನಕಲಿ ರೈತರನ್ನು ತಡೆಗಟ್ಟಲು ಮತ್ತು ಸಬ್ಸಿಡಿ ನೇರವಾಗಿ ನಿಜವಾದ ರೈತರಿಗೆ ತಲುಪಿಸಲು ಸರ್ಕಾರ e-KYC ಅನ್ನು ಕಡ್ಡಾಯಗೊಳಿಸಿದೆ.
  • ನೀವು FRUITS ಪೋರ್ಟಲ್‌ಗೆ ಲಾಗಿನ್ ಆಗಿ, ‘e-KYC‘ ಆಪ್ಷನ್ ಆಯ್ಕೆ ಮಾಡಿ. ನಿಮ್ಮ ಆಧಾರ್ ಲಿಂಕ್ ಮೊಬೈಲ್‌ಗೆ OTP ಬರುತ್ತದೆ. ಅದನ್ನು ನಮೂದಿಸಿದರೆ ಕೆವೈಸಿ ಆಗುತ್ತದೆ. (RSK ಕಚೇರಿಯಲ್ಲಿ ಬಯೋಮೆಟ್ರಿಕ್ ಮೂಲಕವೂ ನೀವು ಮಾಡಿಸಬಹುದು).
  • ಸರ್ಕಾರದ ಯೋಜನೆಗಳ ಲಾಭ ಪಡೆಯಲು ನಿಮ್ಮ ಮಾಹಿತಿಯನ್ನು ಬಳಸಿಕೊಳ್ಳಲು ನೀವು ನೀಡುವ ಅಧಿಕೃತ ಒಪ್ಪಿಗೆ (Consent).
  • ಮಾಹಿತಿ ಹಕ್ಕು ಮತ್ತು ಗೌಪ್ಯತೆಯ ಕಾನೂನಿನ ಅಡಿಯಲ್ಲಿ, ನಿಮ್ಮ ಅನುಮತಿ ಇಲ್ಲದೆ ಸರ್ಕಾರ ನಿಮ್ಮ ವೈಯಕ್ತಿಕ ಮಾಹಿತಿಯನ್ನು (ಆಧಾರ್, ಬ್ಯಾಂಕ್ ವಿವರ) ಬಳಸಿಕೊಳ್ಳುವಂತಿಲ್ಲ. ನಿಮ್ಮ ಸಮ್ಮತಿಯನ್ನು ದಾಖಲಿಸಿದ ನಂತರವೇ ಸಬ್ಸಿಡಿ ಪ್ರಕ್ರಿಯೆಯು ಮುಂದುವರಿಯುತ್ತದೆ.
  • FRUITS ಪೋರ್ಟಲ್‌ನಲ್ಲಿ ಲಾಗಿನ್ ಆದ ನಂತರ, ‘Farmer Consent‘ ಅಥವಾ ‘ಒಪ್ಪಿಗೆ’ ಎಂಬ ಆಯ್ಕೆ ಇರುತ್ತದೆ. ಅದನ್ನು ಓದಿ, ‘ನಾನು ಒಪ್ಪುತ್ತೇನೆ’ (I Agree) ಎಂದು ಕ್ಲಿಕ್ ಮಾಡಿಕೊಳ್ಳಿ.

4.ಜಮೀನು ವಿವರ ದೃಢೀಕರಣ (Land Declaration)

  • ನಿಮ್ಮ FID ನಲ್ಲಿ ನಿಮ್ಮ ಹೆಸರಿನಲ್ಲಿರುವ ಭೂಮಿಯ ಸಂಪೂರ್ಣ ಮತ್ತು ನಿಖರ ಮಾಹಿತಿ ಇರಬೇಕಗುತ್ತೆ .
  • ನೀವು ರೈತ ಎಂಬುದಕ್ಕೆ ಮೂಲ ಆಧಾರ ನಿಮ್ಮ ಜಮೀನು. ಯಾವ ಜಮೀನಿಗೆ ಸಬ್ಸಿಡಿ(Subsidy for land) ಬೇಕು ಎಂಬುದನ್ನು ಇದು ನಿರ್ಧರಿಸುತ್ತದೆ.

FID Update ಮಾಡಿಸಿಕೊಳ್ಳುವುದು ಹೇಗೆ? (How to Update FID kannada?)

ನಿಮ್ಮ FID ಅಪ್ಡೇಟ್ ಮಾಡಿಸಿಕೊಳ್ಳುವುದು ತುಂಬಾ ಸುಲಭ. ನೀವು ಎರಡು ರೀತಿಯಲ್ಲಿ ಇದನ್ನು ಮಾಡಬಹುದು: ಆನ್ಲೈನ್ ಮತ್ತು ಆಫ್ಲೈನ್ FID Update ಹೇಗೆ ಮಾಡುವುದು → link to step-by-step guide

ವಿಧಾನ 1: ಆನ್ಲೈನ್ ಮೂಲಕ FID Update ಮಾಡಿಕೊಳ್ಳುವುದು ಹೇಗೆ? (ನೀವೇ ಮನೆಯಲ್ಲಿ ಮಾಡಬಹುದು)

  • ಹಂತ 1: ಮೊದಲು ಅಧಿಕೃತ ವೆಬ್ಸೈಟ್ “https://fruits.karnataka.gov.in” ಗೆ ಭೇಟಿ ನೀಡಬೇಕು.
  • ಹಂತ 2: ಮುಖಪುಟದಲ್ಲಿ “ರೈತರಿಗಾಗಿ” ಅಥವಾ “For Farmers” ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ಹಂತ 3: ಈಗ “ರೈತರ ಪ್ರೊಫೈಲ್ ನವೀಕರಣ” (Farmer Profile Update) ಆಯ್ಕೆಯನ್ನು ಮಾಡಿಕೊಳ್ಳಿ.
  • ಹಂತ 4: ನಿಮ್ಮ ರೈತರ ಗುರುತಿನ ಚೀಟಿ ಸಂಖ್ಯೆ (FID Number) ಅಥವಾ ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಅನ್ನು ನಮೂದಿಸಿ. ನಿಮಗೆ FID ಸಂಖ್ಯೆ ಗೊತ್ತಿಲ್ಲದಿದ್ದರೆ, ನಿಮ್ಮ ಹಿಂದೆ ಪಡೆದ ಯಾವುದೇ ಸಬ್ಸಿಡಿ ರಶೀದಿ ಅಥವಾ ರೈತ ಸಮಾಧಾನ್ ಯೋಜನೆಯ ದಾಖಲೆಯಲ್ಲಿ ಅದನ್ನು ನೋಡಬಹುದು.
  • ಹಂತ 5: ನಿಮ್ಮ ಮೊಬೈಲ್ ಗೆ ಬಂದ OTP ಹಾಕಿ ಲಾಗಿನ್ ಆಗಿ.
  • ಹಂತ 6: ಈಗ ನಿಮ್ಮ ಎಲ್ಲಾ ಮಾಹಿತಿ ತೆರೆದುಕೊಳ್ಳುತ್ತದೆ. ನಿಮ್ಮ ವೈಯಕ್ತಿಕ ಮಾಹಿತಿ (ಹೆಸರು, ವಿಳಾಸ), ಭೂಮಿಯ ವಿವರ (ಸರ್ವೇ ನಂಬರ್, ವಿಸ್ತೀರ್ಣ), ಬ್ಯಾಂಕ್ ಖಾತೆ ಎಲ್ಲಾ ವಿವರ ಎಲ್ಲವನ್ನು ಪರಿಶೀಲಿಸಿಕೊಳ್ಳಿ.
  • ಹಂತ 7: ಯಾವುದೇ ತಪ್ಪು ಅಥವಾ ಬದಲಾವಣೆ ಇದ್ದರೆ, ಅದನ್ನು ಸರಿಪಡಿಸಿಕೊಳ್ಳಿ.
  • ಹಂತ 8: ಅಂತಿಮವಾಗಿ “ನವೀಕರಿಸು” (Update) ಬಟನ್ ಒತ್ತಿ. ನಿಮ್ಮ ಅರ್ಜಿ ಸಂಬಂಧಪಟ್ಟ ರಾಜಸ್ವ ನಿರೀಕ್ಷಕರಿಗೆ (RI) ಪರಿಶೀಲನೆಗಾಗಿ ಹೋಗುತ್ತದೆ.

ವಿಧಾನ 2: ನೇರವಾಗಿ ಕಚೇರಿಗೆ ಹೋಗಿ FID Update ಮಾಡಿಸಿಕೊಳ್ಳುವುದು ಹೇಗೆ? (ಆಫ್ಲೈನ್)

ನಿಮ್ಮ ಮೊಬೈಲ್ ಮೂಲಕ FID Update ಮಾಡಿಕೊಳ್ಳಲು ಕಷ್ಟ ಆಗುತ್ತಿದ್ದರೆ ಅಥವಾ ಗೊತ್ತಾಗಿಲ್ಲ ಅನ್ನಿಸುವ ರೈತರು ನೇರವಾಗಿ ತಮ್ಮ ಹೋಬಳಿಯ ಕೃಷಿ ಅಧಿಕಾರಿಗಳ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರ (Raita Samparka Kendra) ಗೆ ಭೇಟಿ ನೀಡಿ ನಿಮ್ಮ ಎಫ್ ಐಡಿ ಅಪ್ಡೇಟ್ ಮಾಡಿಸಿಕೊಳ್ಳಬಹುದು.

FID Update ಬೇಕಾಗುವ ದಾಖಲೆಗಳು:

  • ಆಧಾರ್ ಕಾರ್ಡ್ (ಫೋಟೋಕಾಪಿ ಸಹಿತ)
  • ಬ್ಯಾಂಕ್ ಪಾಸ್ಬುಕ್ (ಫೋಟೋಕಾಪಿ)
  • ಇತ್ತೀಚಿನ ಭೂಮಿಯ ಪಹಣಿ (Record of Rights, RTC)
  • ನಿಮ್ಮ ಹಿಂದಿನ FID ಕಾರ್ಡ್ ಇದ್ದರೆ ಅದು
  • ಮೊಬೈಲ್ ನಂಬರ್

ಕಚೇರಿಯಲ್ಲಿರುವ ಕರಣಿಕರು ಅಥವಾ RSK ಅಧಿಕಾರಿಗಳು ನಿಮಗೆ ಉಚಿತವಾಗಿ FID ಅಪ್ಡೇಟ್(Free FID update) ಮಾಡಲು ಸಹಾಯ ಮಾಡುತ್ತಾರೆ.

Conclusion

ನಿಮ್ಮ ಆಧಾರ್ ಲಿಂಕ್ ಮೊಬೈಲ್, e-KYC, ರೈತರ ಒಪ್ಪಿಗೆ (Consent), ಮತ್ತು ಜಮೀನಿನ ಸರ್ವೇ ನಂಬರ್ ಈ ನಾಲ್ಕು ಅಂಶಗಳು ನಿಮ್ಮ FID ನಲ್ಲಿ ಸರಿಯಾಗಿವೆಯೇ ಎಂಬುದನ್ನು ಈಗಲೇ ಖಚಿತಪಡಿಸಿಕೊಳ್ಳಿ. ಈ ನಾಲ್ಕರಲ್ಲಿ ಒಂದು ಕೊರತೆಯಾದರೂ, PM-ಕಿಸಾನ್ ಆಗಲಿ, ಬೆಳೆ ವಿಮೆಯಾಗಲಿ, ರಸಗೊಬ್ಬರ ಸಬ್ಸಿಡಿಯಾಗಲಿ – ಯಾವುದೇ ಸರ್ಕಾರಿ ಯೋಜನೆಯ ಲಾಭ ನಿಮಗೆ ಸಿಗದೆ ಹೋಗಬಹುದು.

ತಿಂಗಳುಗಟ್ಟಲೆ ಸಬ್ಸಿಡಿ ಹಣಕ್ಕಾಗಿ ಕಾಯುವ ಪರಿಸ್ಥಿತಿ ಬೇಡ. ಸ್ವತಃ ನೀವೇ FRUITS ಪೋರ್ಟಲ್‌ಗೆ ಭೇಟಿ ನೀಡಿ ಅಥವಾ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ (RSK) ಅಥವಾ ಕೃಷಿ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ನಿಮ್ಮ FID ಅನ್ನು ಅಪ್ಡೇಟ್ ಮಾಡಿಸಿಕೊಳ್ಳಿ.

ಈ ಲೇಖನವನ್ನು ನಿಮ್ಮ ಸ್ನೇಹಿತರು, ನೆರೆಹೊರೆಯ ರೈತರು ಮತ್ತು ಕೃಷಿ ಕುಟುಂಬಗಳೊಂದಿಗೆ ಹಂಚಿಕೊಳ್ಳಿ. ಇದರಿಂದ ಅವರೂ ಈ ಮಹತ್ವದ ಮಾಹಿತಿ ಪಡೆದು ತಮ್ಮ ಸಬ್ಸಿಡಿ ಹಣವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ಗಮನಿಸಿ: ಕರ್ನಾಟಕ ಫ್ಲ್ಯಾಶ್‌ನಲ್ಲಿ ಪ್ರಕಟವಾಗುವ ಎಲ್ಲಾ ಮಾಹಿತಿ ಸಂಪೂರ್ಣವಾಗಿ ನಿಖರ ಮತ್ತು ಅಧಿಕೃತವಾಗಿರುತ್ತದೆ. ಯಾವುದೇ ಅನಧಿಕೃತ ಅಥವಾ ತಪ್ಪು ಮಾಹಿತಿಯನ್ನು ಪ್ರಕಟಿಸುವುದಿಲ್ಲ.

FID Update Karnataka FAQ

FID ಅಂದರೆ ಏನು?

FID (Farmer ID) ಎಂದರೆ ರೈತರಿಗಾಗಿ ನೀಡುವ ವಿಶಿಷ್ಟ ಗುರುತು ಸಂಖ್ಯೆ. ಕರ್ನಾಟಕದಲ್ಲಿ ಇದು FRUITS ಮೂಲಕ ನೀಡಲಾಗುತ್ತದೆ.

FID Update ಮಾಡುವುದು ಕಡ್ಡಾಯವೇ?

ಹೌದು. ಈಗ ಬಹುತೇಕ ಎಲ್ಲಾ ಕೃಷಿ ಸಬ್ಸಿಡಿ ಹಾಗೂ DBT ಪಾವತಿಗಳಿಗೆ FID ಕಡ್ಡಾಯವಾಗಿದೆ.

FID ಮತ್ತು e-KYC ಎರಡೂ ಬೇಕೇ?

ಹೌದು. FID ಇದ್ದರೂ e-KYC ಮತ್ತು Bank-Aadhaar ಲಿಂಕಿಂಗ್ ಪೂರ್ಣಗೊಳಿಸದಿದ್ದರೆ DBT ಪಾವತಿಗಳು ತಡವಾಗಬಹುದು.

ನನ್ನ FID ಸ್ಟೇಟಸ್ ಹೇಗೆ ಚೆಕ್ ಮಾಡುವುದು?

FRUITS ಪೋರ್ಟಲ್ ಅಥವಾ ಸಂಬಂಧಿತ ಕೃಷಿ ಕಚೇರಿಯಲ್ಲಿ ನಿಮ್ಮ Aadhaar/FID ಮೂಲಕ ಸ್ಟೇಟಸ್ ಪರಿಶೀಲಿಸಬಹುದು.

ನನ್ನ FID ಸ್ಟೇಟಸ್ ಹೇಗೆ ಚೆಕ್ ಮಾಡುವುದು?

FRUITS ಪೋರ್ಟಲ್ ಅಥವಾ ಸಂಬಂಧಿತ ಕೃಷಿ ಕಚೇರಿಯಲ್ಲಿ ನಿಮ್ಮ Aadhaar/FID ಮೂಲಕ ಸ್ಟೇಟಸ್ ಪರಿಶೀಲಿಸಬಹುದು.

Leave a Comment