ಮೊಬೈಲ್‌ನಲ್ಲೇ ಯಾವುದೇ ವಯಸ್ಸಿನವರಿಗೆ ಜನನ ಪ್ರಮಾಣಪತ್ರ ಅರ್ಜಿ ಹಾಗೂ Download ಮಾಡುವ ಸಂಪೂರ್ಣ ವಿಧಾನ – Step-by-Step Guide

Spread the love

Birth Certificate Online Apply 2026 Karnataka:ಜನನ ಪ್ರಮಾಣಪತ್ರ(Birth Certificate)ವು ಪ್ರತಿಯೊಬ್ಬ ನಾಗರಿಕನ ಮೊಟ್ಟಮೊದಲ ಮತ್ತು ಪ್ರಮುಖ ಕಾನೂನು ದಾಖಲೆಯಾಗಿದೆ. ಶಾಲಾ ಪ್ರವೇಶ, ಪಾಸ್‌ಪೋರ್ಟ್, ವೋಟರ್ ಐಡಿ, ಆಧಾರ್ ಕಾರ್ಡ್, ಮತದಾನದ ಪಟ್ಟಿಯಲ್ಲಿ ಹೆಸರು ಸೇರಿಸುವುದು ಸೇರಿದಂತೆ ಹಲವು ಸರ್ಕಾರಿ ಮತ್ತು ಖಾಸಗಿ ಕೆಲಸಗಳಿಗೆ ಇದು ಅನಿವಾರ್ಯವಾಗಿದೆ. ಹಿಂದೆ ಜನನ ಪ್ರಮಾಣಪತ್ರ ಪಡೆಯಲು ಗ್ರಾಮ ಪಂಚಾಯತ್(Gram Panchayat) ಅಥವಾ ನಗರಸಭೆಗೆ ಅಲೆದಾಡಬೇಕಿತ್ತು. ಆದರೆ ತಂತ್ರಜ್ಞಾನದ ಪ್ರಗತಿ ಮತ್ತು ಡಿಜಿಟಲ್ ಇಂಡಿಯಾ(Digital India) ಅಭಿಯಾನದ ಭಾಗವಾಗಿ, ಕರ್ನಾಟಕ ಸರ್ಕಾರವು ಈ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್‌ಲೈನ್ ಗೊಳಪಡಿಸಿದೆ.

ಈಗ ಆನ್ಲೈನ್ registration(Online registration) ಮಾಡಿ, ಮನೆಯಲ್ಲಿ ಕುಳಿತುಕೊಡು ಜನನ ಪ್ರಮಾಣಪತ್ರ (certificate) ಡೌನ್‌ಲೋಡ್(Birth Certificate Download) ಮಾಡ್ಬಾವುದು.

ವಿಶೇಷವೆಂದರೆ, ಈಗ ಯಾವುದೇ ವಯಸ್ಸಿನವರು (ಹೊಸದಾಗಿ ಜನಿಸಿದ ಶಿಶುವಿನಿಂದ ಹಿಡಿದು 60 ವರ್ಷದವರೆಗೆ) ತಮ್ಮ ಜನನ ಪ್ರಮಾಣಪತ್ರಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ನೀವು ಎಲ್ಲಿ ಜನಿಸಿದ್ದೀರಿ ಮತ್ತು ನಿಮ್ಮ ಪ್ರಸ್ತುತ ವಯಸ್ಸು ಎಷ್ಟೇ ಇದ್ದರೂ, ವಿಳಂಬ ಶುಲ್ಕ ಪಾವತಿಸುವ ಮೂಲಕ ಈ ಸೌಲಭ್ಯ ಪಡೆಯಬಹುದು.

ಈ ಲೇಖನದಲ್ಲಿ, ಜನನ ಪ್ರಮಾಣಪತ್ರ ಕೆ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಬೇಕಾಗುವ ದಾಖಲೆಗಳು ಏನು ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

ಜನನ ಪ್ರಮಾಣಪತ್ರ ಏಕೆ ಮುಖ್ಯ? Why is birth certificate important?

Birth Certificate Online Apply 2026 Karnataka: ಮೊಬೈಲ್‌ನಲ್ಲೇ ಯಾವುದೇ ವಯಸ್ಸಿನವರಿಗೆ ಜನನ ಪ್ರಮಾಣಪತ್ರ ಅರ್ಜಿ ಹಾಗೂ Download ಮಾಡುವ ಸಂಪೂರ್ಣ ವಿಧಾನ – Step-by-Step Guide

ಈ ದಾಖಲೆಯ ಮಹತ್ವವನ್ನು ಅರ್ಥಮಾಡಿಕೊಳ್ಳದೆ ಅನೇಕ ಜನರು ನಂತರದಲ್ಲಿ ತೊಂದರೆ ಅನುಭವಿಸುತ್ತಾರೆ. ಇದು ಕೇವಲ ವಯಸ್ಸಿನ ಪುರಾವೆ ಮಾತ್ರವಲ್ಲ:

  • ನಾಗರಿಕತ್ವದ ಪುರಾವೆ: ನೀವು ಭಾರತೀಯ ನಾಗರಿಕರು ಎಂಬುದಕ್ಕೆ ಇದು ಪ್ರಬಲ ದಾಖಲೆ.
  • ವಯಸ್ಸಿನ ದೃಢೀಕರಣ: ಶಾಲೆ, ಉದ್ಯೋಗ, ನಿವೃತ್ತಿ ಸಮಯದಲ್ಲಿ ವಯಸ್ಸು ಸಾಬೀತುಪಡಿಸಲು.
  • ತಂದೆ-ತಾಯಿಯ ವಿವರ: ಕಾನೂನು ವಾರಸುದಾರಿಕೆ ಸಾಬೀತುಪಡಿಸಲು ಇದು ಸಹಾಯಕವಾಗಿದೆ.
  • ವಿವಾಹ ನೋಂದಣಿ: ಮದುವೆಯ ಕಾನೂನು ವಯಸ್ಸು ತಲುಪಿದೆಯೇ ಎಂದು ಪರಿಶೀಲಿಸಲು.

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? Birth Certificate Online Apply 2026 Karnataka

  • ಜನನ ಪ್ರಮಾಣಪತ್ರ ಆನ್‌ಲೈನ್ ಅರ್ಜಿ 2026(Birth Certificate Online Application 2026) ದ ವಿಶೇಷತೆಯೆಂದರೆ, ಇದು ಸಾರ್ವತ್ರಿಕವಾಗಿದೆ. ನಿಮ್ಮ ಜನನವನ್ನು ಈ ಹಿಂದೆ ನೋಂದಾಯಿಸದೇ ಇದ್ದಲ್ಲಿ, ಈಗ ನೋಂದಾಯಿಸಬಹುದು.
  • ಹೊಸದಾಗಿ ಜನಿಸಿದ ಮಕ್ಕಳು: ಜನನದ 21 ದಿನಗಳೊಳಗೆ ಅರ್ಜಿ ಸಲ್ಲಿಸಿದರೆ ಉಚಿತ ನೋಂದಣಿ(Free registration). 30 ದಿನಗಳ ನಂತರ ಅರ್ಜಿ ಸಲ್ಲಿಸಿದರೆ ವಿಳಂಬ ಶುಲ್ಕ ವಿಧಿಸಲಾಗುತ್ತದೆ.
  • 1 ವರ್ಷದಿಂದ 18 ವರ್ಷದೊಳಗಿನ ಮಕ್ಕಳು: ತಂದೆ/ತಾಯಿ ಅಥವಾ ಕಾನೂನು ಪಾಲಕರು ಅರ್ಜಿ ಸಲ್ಲಿಸಬಹುದು.
  • 18 ವರ್ಷ ಮೇಲ್ಪಟ್ಟ ವಯಸ್ಕರು: ಸ್ವಯಂ ಘೋಷಣಾ ಪತ್ರದ ಮೂಲಕ ಅರ್ಜಿ ಸಲ್ಲಿಸಬಹುದು. ಸಾಮಾನ್ಯವಾಗಿ ಇದನ್ನು “ವಿಳಂಬಿತ ಜನನ ನೋಂದಣಿ“(Delayed birth registration) ಎಂದು ಕರೆಯಲಾಗುತ್ತದೆ.

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು (Documents Required)

ಅರ್ಜಿ ಪ್ರಾರಂಭಿಸುವ ಮೊದಲು ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಡಿ. ಇವುಗಳ ಸ್ಕ್ಯಾನ್ ಮಾಡಿದ ಪ್ರತಿಗಳು (PDF ಅಥವಾ JPEG) ಅಗತ್ಯವಿದೆ.

ಜನನದ ಪುರಾವೆ: ಆಸ್ಪತ್ರೆಯಿಂದ ನೀಡಲಾದ ಜನನ ಪ್ರಮಾಣಪತ್ರ (Discharge Summary). ಜನನ ನಡೆದ ಮನೆಯ ಸ್ಥಳೀಯ ದಾಖಲೆ.

ವಿಳಾಸ ಪುರಾವೆ:

  • ಆಧಾರ್ ಕಾರ್ಡ್ (ತಂದೆ/ತಾಯಿ ಅಥವಾ ಅರ್ಜಿದಾರರದ್ದು).
  • ರೇಷನ್ ಕಾರ್ಡ್.
  • ವೋಟರ್ ಐಡಿ.
  • ವಿದ್ಯುತ್ ಬಿಲ್ / ನೀರಿನ ಬಿಲ್.

ಗುರುತಿನ ಪುರಾವೆ:

  • ಅರ್ಜಿದಾರರ (ವಯಸ್ಕರಾಗಿದ್ದರೆ) ಅಥವಾ ಪೋಷಕರ ಆಧಾರ್ ಕಾರ್ಡ್.
  • ವಯಸ್ಸಿನ ಪುರಾವೆ (ವಿಳಂಬಿತ ನೋಂದಣಿಗೆ):
  • ಶಾಲಾ ದಾಖಲಾತಿ ಪ್ರಮಾಣಪತ್ರ (Transfer Certificate).
  • ಮತದಾರರ ಗುರುತಿನ ಚೀಟಿ.
  • ಶಾಲೆಯ ಮಾರ್ಕ್‌ಶೀಟ್ (SSLC).

ಘೋಷಣಾ ಪತ್ರ (Affidavit):

ವಿಳಂಬಿತ ನೋಂದಣಿ ಸಂದರ್ಭದಲ್ಲಿ, ನೋಟರಿಯಿಂದ ದೃಢೀಕರಿಸಲ್ಪಟ್ಟ ಪ್ರಮಾಣ ಪತ್ರ ಅಗತ್ಯವಿದೆ. ಇದರಲ್ಲಿ ಜನನದ ಸರಿಯಾದ ದಿನಾಂಕ, ಸ್ಥಳ ಮತ್ತು ಕಾರಣಗಳನ್ನು ನಮೂದಿಸಬೇಕು.

ಜನನ ಪ್ರಮಾಣಪತ್ರಕ್ಕಾಗಿ ಆನ್‌ಲೈನ್ ಅರ್ಜಿ ಸಲ್ಲಿಸುವ ವಿಧಾನ (Online Apply Step-by-Step Process)

ಕರ್ನಾಟಕ ಸರ್ಕಾರವು ಈ ಸೇವೆಯನ್ನು ಸುಲಭಗೊಳಿಸಲು ಎರಡು ಪ್ರಮುಖ ಪೋರ್ಟಲ್‌ಗಳನ್ನು ನಿರ್ವಹಿಸುತ್ತಿದೆ. ನೀವು ಯಾವ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿದ್ದೀರಿ ಎಂಬುದರ ಮೇಲೆ ಪೋರ್ಟಲ್ ಆಯ್ಕೆಯಾಗುತ್ತದೆ (ಗ್ರಾಮ ಪಂಚಾಯತ್, ಪುರಸಭೆ, ಅಥವಾ ಬಿಬಿಎಂಪಿ). ಸಾಮಾನ್ಯ ಪ್ರಕ್ರಿಯೆ ಈ ಕೆಳಗಿನಂತಿದೆ:

ಹಂತ 1: ಅಧಿಕೃತ ವೆಬ್‌ಸೈಟ್ ಭೇಟಿ

ಕರ್ನಾಟಕ ಸರ್ಕಾರದ ರಾಜ್ಯ ಪೋರ್ಟಲ್: https://sevasindhu.karnataka.gov.in/Sevasindhu/English (ಸೇವಾ ಸಿಂಧು ವಿಭಾಗ)
ಅಥವಾ ಬಿಬಿಎಂಪಿ ಪ್ರದೇಶಕ್ಕಾಗಿ: https://bbmp.gov.in ನೇರ ಲಿಂಕ್: ಸೇವಾ ಸಿಂಧು ಪೋರ್ಟಲ್‌ನ “ಜನನ ಮತ್ತು ಮರಣ ನೋಂದಣಿ” ವಿಭಾಗಕ್ಕೆ ಹೋಗಿ.

ಹಂತ 2: ನೋಂದಣಿ / ಲಾಗಿನ್

ನೀವು ಈಗಾಗಲೇ ನೋಂದಾಯಿಸಿದ್ದರೆ, ನಿಮ್ಮ ಗ್ರಾಮ/ನಗರ ಪಂಚಾಯತ್ ಅನುಸಾರ ಲಾಗಿನ್ ಆಗಿ. ಹೊಸ ಬಳಕೆದಾರರಾಗಿದ್ದರೆ, ನಿಮ್ಮ ಮೊಬೈಲ್ ನಂಬರ್ ಬಳಸಿ ನೋಂದಾಯಿಸಿ. OTP ಮೂಲಕ ಪರಿಶೀಲನೆ ಮಾಡಿ.

ಹಂತ 3: ಅರ್ಜಿ ನಮೂನೆ ಆಯ್ಕೆ

ಹೊಸ ಜನನ ನೋಂದಣಿ” ಅಥವಾ “ವಿಳಂಬಿತ ಜನನ ನೋಂದಣಿ” ಆಯ್ಕೆ ಮಾಡಿ.
ವಿಳಂಬಿತ ನೋಂದಣಿ ಆಯ್ಕೆ ಮಾಡಿದರೆ, ಅದಕ್ಕೆ ಸಂಬಂಧಿಸಿದ ಚೆಕ್‌ಬಾಕ್ಸ್ ಗುರುತಿಸಿ.

ಹಂತ 4: ವಿವರಗಳನ್ನು ಭರ್ತಿ ಮಾಡಿ

  • ಮಗುವಿನ/ವ್ಯಕ್ತಿಯ ಪೂರ್ಣ ಹೆಸರು (ಜನನದ ಸಮಯದ ಹೆಸರು ಮತ್ತು ಪ್ರಸ್ತುತ ಹೆಸರು).
  • ಜನನ ದಿನಾಂಕ ಮತ್ತು ಸಮಯ (ನಿಖರವಾಗಿ ನಮೂದಿಸಿ).
  • ಜನನ ಸ್ಥಳ (ಆಸ್ಪತ್ರೆ/ಮನೆ/ಇತರೆ) ಮತ್ತು ವಿಳಾಸ.
  • ತಂದೆಯ ಪೂರ್ಣ ಹೆಸರು ಮತ್ತು ರಾಷ್ಟ್ರೀಯತೆ.
  • ತಾಯಿಯ ಪೂರ್ಣ ಹೆಸರು ಮತ್ತು ರಾಷ್ಟ್ರೀಯತೆ.
  • ತಂದೆ-ತಾಯಿಯ ಆಧಾರ್ ಸಂಖ್ಯೆ (ಕಡ್ಡಾಯವಲ್ಲ, ಆದರೆ ಶಿಫಾರಸು ಮಾಡಲಾಗಿದೆ).
  • ಅರ್ಜಿದಾರರ ಸಂಪರ್ಕ ಮಾಹಿತಿ.

ಹಂತ 5: ದಾಖಲೆಗಳನ್ನು ಅಪ್‌ಲೋಡ್ ಮಾಡಿ

ಮೇಲೆ ಪಟ್ಟಿ ಮಾಡಲಾದ ಎಲ್ಲಾ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
ಪ್ರತಿ ಫೈಲ್ ಗಾತ್ರ ಮತ್ತು ಫಾರ್ಮ್ಯಾಟ್ (ಸಾಮಾನ್ಯವಾಗಿ 1 MB ವರೆಗೆ PDF) ಸರಿಯಾಗಿದೆಯೇ ಎಂದು ಪರಿಶೀಲಿಸಿ.

ಹಂತ 6: ಶುಲ್ಕ ಪಾವತಿ

ಆನ್‌ಲೈನ್ ಮೂಲಕ (ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ನೆಟ್ ಬ್ಯಾಂಕಿಂಗ್/UPI) ಶುಲ್ಕ ಪಾವತಿಸಿ.

  • ಸಾಮಾನ್ಯ ನೋಂದಣಿ (21 ದಿನದೊಳಗೆ): ಉಚಿತ (ಶುಲ್ಕ ರಹಿತ).
  • ವಿಳಂಬಿತ ನೋಂದಣಿ (1 ವರ್ಷದವರೆಗೆ): ರೂ. 10 ರಿಂದ ರೂ. 25 (ಸ್ಥಳೀಯ ಸಂಸ್ಥೆಗೆ ಅನುಗುಣವಾಗಿ ಬದಲಾಗುತ್ತದೆ).
  • ವಿಳಂಬಿತ ನೋಂದಣಿ (1 ವರ್ಷ ಮೀರಿ): ರೂ. 50 ರಿಂದ ರೂ. 100 ( ಕೋರ್ಟ್ ಆರ್ಡರ್ ನೋಂದಣಿ ಶುಲ್ಕ + ದಂಡ).

ಹಂತ 7: ಅರ್ಜಿ ಸಲ್ಲಿಕೆ

“Submit” ಬಟನ್ ಒತ್ತಿದ ನಂತರ, ನಿಮಗೆ ಒಂದು ಅರ್ಜಿ ಸಂಖ್ಯೆ (Acknowledgement Number) ಸಿಗುತ್ತದೆ. ಈ ಸಂಖ್ಯೆಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.

Birth certificate application status check online ಅರ್ಜಿಸಿ ಅರ್ಜಿ ಸ್ಥಿತಿ ಪರಿಶೀಲನೆ?

ಜನನ ಪ್ರಮಾಣ ಪತ್ರಕ್ಕೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ನಂತರ ಸ್ಟೇಟಸ್ ಚೆಕ್ ಮಾಡುವುದು ಬಹಳ ಮುಖ್ಯ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಂಖ್ಯೆ (Acknowledgement Number) ಹಾಕಿ ನಿಮ್ಮ ಅರ್ಜಿಯ ಸ್ಥಿತಿಯನ್ನು (Application Status) ಕ್ಲಿಕ್ ಮಾಡಿದ ಮೇಲೆ ಅಪ್ರೋಲ್ ಅಥವ ಪೆಂಡಿಂಗ್ ಅಂತ ಕಾಣುತ್ತೆ.

ಜನನ ಪ್ರಮಾಣ ಪತ್ರ ಪರಿಶೀಲನೆ ಮತ್ತು ಜನನ ಪ್ರಮಾಣಪತ್ರ ಡೌನ್‌ಲೋಡ್ ಮಾಡುವ ವಿಧಾನ.?

ಅರ್ಜಿ ಸಲ್ಲಿಸಿದ ನಂತರ, ಸಂಬಂಧಪಟ್ಡ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಥವಾ ನಗರಸಭೆಯ ಆರೋಗ್ಯ ನಿರೀಕ್ಷಕರು ದಾಖಲೆಗಳನ್ನು ಪರಿಶೀಲಿಸುತ್ತಾರೆ. ಎಲ್ಲವೂ ಸರಿಯಾಗಿದ್ದಲ್ಲಿ, ಅವರು ಅರ್ಜಿಗೆ ಅನುಮೋದನೆ ನೀಡುತ್ತಾರೆ. ಅನುಮೋದನೆಯ ನಂತರ, ನೀವು ಡಿಜಿಟಲ್ ಆಗಿ ಸಹಿ ಮಾಡಿದ (Digital Signed) ಜನನ ಪ್ರಮಾಣಪತ್ರವನ್ನು ಪೋರ್ಟಲ್‌ನಿಂದ ನೇರವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಪ್ರಮುಖ ಸೂಚನೆ: ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿದ ಪ್ರತಿಯು QR ಕೋಡ್ ಹೊಂದಿರುತ್ತದೆ. ಇದು ನಕಲಿ ದಾಖಲೆಗಳನ್ನು ತಡೆಗಟ್ಟಲು ಸಹಾಯಕವಾಗಿದೆ. ಈ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಯಾರಾದರೂ ಪ್ರಮಾಣಪತ್ರದ ಅಧಿಕೃತತೆಯನ್ನು ಪರಿಶೀಲಿಸಬಹುದು.

ಆನ್‌ಲೈನ್ ಅರ್ಜಿಯ ಪ್ರಯೋಜನಗಳು

  • ಸಮಯ ಉಳಿತಾಯ: ಲೈನಿನಲ್ಲಿ ನಿಲ್ಲುವ ಅಗತ್ಯವಿಲ್ಲ.
  • ಪಾರದರ್ಶಕತೆ: ಅರ್ಜಿ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ನೋಡಬಹುದು.
  • ಡಿಜಿಟಲ್ ಪ್ರತಿ: ವರ್ಜಿನಲ್ ಪ್ರತಿ ಕಳೆದುಹೋದರೂ, ಡಿಜಿಟಲ್ ಪ್ರತಿಯನ್ನು ಮತ್ತೆ ಡೌನ್‌ಲೋಡ್ ಮಾಡಿಕೊಳ್ಳಬಹುದು.
  • ಸುಲಭ ಪ್ರವೇಶ: ಗ್ರಾಮೀಣ ಭಾಗದ ಜನರೂ ಸಹ ಸಿ.ಎಸ್.ಸಿ (CSC) ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದು.

Back To Home Pageಇಲ್ಲಿ ಕ್ಲಿಕ್ ಮಾಡಿ

Conclusion

ಜನನ ಪ್ರಮಾಣಪತ್ರವು ಪ್ರತಿಯೊಬ್ಬ ನಾಗರಿಕನ ಅತ್ಯಂತ ಪ್ರಮುಖ ಕಾನೂನು ದಾಖಲೆ. ಶಾಲಾ ಪ್ರವೇಶದಿಂದ ಹಿಡಿದು ಪಾಸ್‌ಪೋರ್ಟ್, ಆಧಾರ್, ಉದ್ಯೋಗ ಹಾಗೂ ಇತರೆ ಎಲ್ಲಾ ಸರ್ಕಾರಿ ಸೇವೆಗಳವರೆಗೆ ಇದು ಅನಿವಾರ್ಯವಾಗುತ್ತದೆ.

ಈಗ Government of Karnataka ಡಿಜಿಟಲ್ ಸೇವೆಗಳ ಮೂಲಕ ಜನನ ಪ್ರಮಾಣಪತ್ರ ಅರ್ಜಿ ಪ್ರಕ್ರಿಯೆಯನ್ನು ತುಂಬಾ ಸುಲಭಗೊಳಿಸಿದೆ. Seva Sindhu ಪೋರ್ಟಲ್ ಮೂಲಕ ಯಾವುದೇ ವಯಸ್ಸಿನವರು ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಶುಲ್ಕ ಪಾವತಿಸಿ ಡಿಜಿಟಲ್ ಸಹಿ ಮಾಡಿದ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಬಹುದು.

ವಿಳಂಬಿತ ನೋಂದಣಿಗೂ ಸಹ ಈಗ ಸ್ಪಷ್ಟ ವಿಧಾನ ಇದೆ. ಸರಿಯಾದ ದಾಖಲೆಗಳು ಮತ್ತು ಮಾಹಿತಿ ಇದ್ದರೆ ಪ್ರಕ್ರಿಯೆ ತುಂಬಾ ಸರಳವಾಗಿದೆ. ಆದ್ದರಿಂದ, ಇನ್ನೂ ನಿಮ್ಮ ಅಥವಾ ನಿಮ್ಮ ಮಕ್ಕಳ ಜನನ ನೋಂದಣಿ ಆಗಿಲ್ಲವಾದರೆ, ತಕ್ಷಣವೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಭವಿಷ್ಯದ ಕಾನೂನು ಸಮಸ್ಯೆಗಳನ್ನು ತಪ್ಪಿಸಿ.

ಗಮನಿಸಿ: ಕರ್ನಾಟಕ ಫ್ಲ್ಯಾಶ್‌ನಲ್ಲಿ ಪ್ರಕಟವಾಗುವ ಎಲ್ಲಾ ಮಾಹಿತಿ ಸಂಪೂರ್ಣವಾಗಿ ನಿಖರ ಮತ್ತು ಅಧಿಕೃತವಾಗಿರುತ್ತದೆ. ಯಾವುದೇ ಅನಧಿಕೃತ ಅಥವಾ ತಪ್ಪು ಮಾಹಿತಿಯನ್ನು ಪ್ರಕಟಿಸುವುದಿಲ್ಲ.

FAQ – Birth certificate application

ಜನನದ 1 ವರ್ಷ ನಂತರವೂ ಅರ್ಜಿ ಸಲ್ಲಿಸಬಹುದೇ?

ಹೌದು. 1 ವರ್ಷಕ್ಕಿಂತ ಹೆಚ್ಚು ವಿಳಂಬವಾದರೂ “ವಿಳಂಬಿತ ಜನನ ನೋಂದಣಿ” ಮೂಲಕ ಅರ್ಜಿ ಸಲ್ಲಿಸಬಹುದು. ಇದಕ್ಕೆ ಅಫಿಡವಿಟ್ ಮತ್ತು ಹೆಚ್ಚುವರಿ ದಾಖಲೆಗಳು ಅಗತ್ಯವಿರಬಹುದು.

ಜನನ ಪ್ರಮಾಣಪತ್ರವನ್ನು ಡೌನ್‌ಲೋಡ್ ಹೇಗೆ ಮಾಡಬೇಕು?

ಅರ್ಜಿ ಅನುಮೋದನೆಯಾದ ನಂತರ, ಪೋರ್ಟಲ್‌ನಲ್ಲಿ ಲಾಗಿನ್ ಮಾಡಿ “Application Status” ವಿಭಾಗದಿಂದ ಡಿಜಿಟಲ್ ಸಹಿ ಮಾಡಿದ ಪ್ರಮಾಣಪತ್ರವನ್ನು PDF ರೂಪದಲ್ಲಿ ಡೌನ್‌ಲೋಡ್ ಮಾಡಬಹುದು.

ಜನನ ಪ್ರಮಾಣಪತ್ರವನ್ನು BBMP ಪ್ರದೇಶದಲ್ಲಿ ಅರ್ಜಿ ಹೇಗೆ ಸಲ್ಲಿಸಬೇಕು?

ಬೆಂಗಳೂರು ನಗರ ಪ್ರದೇಶದವರು Bruhat Bengaluru Mahanagara Palike ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

Leave a Comment