ಸ್ವಯಂಚಾಲಿತ ಮ್ಯುಟೇಶನ್ ಮೂಲಕ ಖಾತೆ ಬದಲಾವಣೆ | ಇನ್ನು ಕಚೇರಿಗೆ ಹೋಗಬೇಕಿಲ್ಲ, ಮನೆಯಲ್ಲೇ ಕುಳಿತು ಖಾತೆ ಬದಲಾವಣೆ ಮಾಡಿಸಿ – ಸಚಿವ ಕೃಷ್ಣಬೈರೇಗೌಡ ಘೋಷಣೆ

Spread the love

Automatic Mutation Karnataka 2026: ಕರ್ನಾಟಕ ಸರ್ಕಾರವು ಕಂದಾಯ ಇಲಾಖೆ(Revenue Department)ಯಲ್ಲಿ ತಂದಿರುವ ಸ್ವಯಂಚಾಲಿತ ಮ್ಯುಟೇಶನ್(Automatic Mutation) ವ್ಯವಸ್ಥೆಯು ಭೂ ದಾಖಲೆ(Land record)ಗಳ ನಿರ್ವಹಣೆಯಲ್ಲಿ ಒಂದು ಮೈಲಿಗಲ್ಲು. ಈ ಹಿಂದೆ ತಿಂಗಳುಗಟ್ಟಲೆ ಕಚೇರಿಗಳಿಗೆ ಅಲೆಯಬೇಕಾಗಿದ್ದ ಪ್ರಕ್ರಿಯೆಯನ್ನು ಈಗ ಸಂಪೂರ್ಣ ಡಿಜಿಟಲೀಕರಣಗೊಳಿಸಿ, ಮಾನವ ಹಸ್ತಕ್ಷೇಪವಿಲ್ಲದೆ ಸ್ವಯಂಚಾಲಿತವಾಗಿ ನಡೆಯುವಂತೆ ಮಾಡಲಾಗಿದೆ.

ಇದು ಡಿಜಿಟಲ್ ಇಂಡಿಯಾ(Digital India) ಮತ್ತು ರೈತಸ್ನೇಹಿ ಆಡಳಿತ(Farmer-friendly administration)ಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ಕಂದಾಯ ಸಚಿವ ಕೃಷ್ಣಭೈರೇಗೌಡ(revenue Minister Krishna Byre Gowda) ಅವರು ಸ್ವಯಂಚಾಲಿತ ಮ್ಯುಟೇಷನ್ (Automatic Mutation) ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿದ್ದು, ಇದು ಜನಸಾಮಾನ್ಯರಿಗೆ ದೊಡ್ಡ ಮಟ್ಟದ ರಿಲೀಫ್ ನೀಡಲಿದೆ.

ಸ್ವಯಂಚಾಲಿತ ಮ್ಯುಟೇಶನ್ ಎಂದರೇನು? What Is Automatic Mutation

Automatic Mutation Karnataka 2026: ಸ್ವಯಂಚಾಲಿತ ಮ್ಯುಟೇಶನ್ ಮೂಲಕ ಖಾತೆ ಬದಲಾವಣೆ | ಇನ್ನು ಕಚೇರಿಗೆ ಹೋಗಬೇಕಿಲ್ಲ, ಮನೆಯಲ್ಲೇ ಕುಳಿತು ಖಾತೆ ಬದಲಾವಣೆ ಮಾಡಿಸಿ – ಸಚಿವ ಕೃಷ್ಣ ಬೈರೇಗೌಡ ಘೋಷಣೆ Free

ಸ್ವಯಂಚಾಲಿತ ಮ್ಯುಟೇಶನ್ ಎಂದರೆ, ಮೊದಲು ಆಸ್ತಿ ನೋಂದಣಿಯಾದ ನಂತರ ಖಾತೆಯನ್ನು ಬದಲಾವಣೆ ಮಾಡಿಸಲು ಕಂದಾಯ ನಿರೀಕ್ಷಕರು (RI) ಅಥವಾ ಗ್ರಾಮ ಆಡಳಿತಾಧಿಕಾರಿ(VA)ಗಳ ಕಚೇರಿಗೆ ತುಂಬಾ ಅಲೆಯಬೇಕಿತ್ತು. ಆದರೆ ಈಗ ತಮ್ಮ ಮೊಬೈಲ್ ಮೂಲಕವೇ ಆನ್ಲೈನಲ್ಲಿ ಅರ್ಜಿ ಸಲ್ಲಿಸಬಹುದು ಹಾಗೂ ಜಮೀನು ಅಥವಾ ಆಸ್ತಿಯ ಮಾಲೀಕತ್ವ ಬದಲಾದಾಗ (ಮಾರಾಟ, ಉಡುಗೊರೆ, ವಿಭಜನೆ, ವಾರಸುದಾರಿಕೆ), ಆ ಬದಲಾವಣೆಯನ್ನು ಕಂದಾಯ ದಾಖಲೆಗಳಲ್ಲಿ (RTC/ಪಹಣಿ) ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಸ್ವಯಂಚಾಲಿತವಾಗಿ ನಮೂದಿಸುವ ವ್ಯವಸ್ಥೆಯನ್ನು. “ಆಟೋಮ್ಯಾಟಿಕ್ ಮ್ಯುಟೇಶನ್” ಅಥವಾ “ಸ್ವಯಂ ಚಾಲಿತ ಖಾತೆ ಬದಲಾವಣೆ” ಎಂದೂ ಕರೆಯಲಾಗುತ್ತದೆ.

ಮಂಡ್ಯದಲ್ಲಿ ಯಶಸ್ವಿ ಪ್ರಯೋಗ: ಈ ಸೇವೆಯನ್ನು ಕಳೆದ 1 ತಿಂಗಳಿನಿಂದ ಮಂಡ್ಯ ಜಿಲ್ಲೆಯಲ್ಲಿ ಪ್ರಾಯೋಗಿಕ ಜಾರಿಗೊಳಿಸಲಾಗಿತ್ತು. ಅಲ್ಲಿ ಸ್ವಯಂ ಚಾಲಿತ ಖಾತೆ ಬದಲಾವಣೆ ಯಶಸ್ವಿ ಆದ ನಂತರ, ಈಗ ರಾಜ್ಯಾದ್ಯಂತ ಶೇ. 98ರಷ್ಟು ಖಾತೆ ಬದಲಾವಣೆಗಳನ್ನು ಸ್ವಯಂಚಾಲಿತಗೊಳಿಸಲು ನಿರ್ಧರಿಸಲಾಗಿದೆ.

ಬೃಹತ್ ಸಾಧನೆ: 2024 ಏಪ್ರಿಲ್ 01 ರಿಂದ 2026 ಫೆಬ್ರವರಿ 20 ರವರೆಗಿನ ಅವಧಿಯಲ್ಲಿ ಈಗಾಗಲೇ 35,11,987 ಖಾತೆ ಬದಲಾವಣೆಗಳನ್ನು ಯಶಸ್ವಿಯಾಗಿ ಮಾಡಲಾಗಿದೆ ಅಂತ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ತಿಳಿಸಿದ್ದಾರೆ.

ಈ ಹಿಂದೆ ಖಾತೆ ಬದಲಾವಣೆ ಮ್ಯುಟೇಶನ್ ಪ್ರತಿಕ್ರಿಯೆ ಹೇಗೆ? Mutation Old Method

7 ದಿನಗಳ ಹಾಗೂ 15 ದಿನಗಳ ಮ್ಯುಟೇಶನ್ ನೋಟೀಸು ಅವಧಿಯು ಮುಕ್ತಾಯವಾದ ನಂತರ ಸಂಬಂಧಪಟ್ಟ ರಾಜಸ್ಥ ನಿರೀಕ್ಷಕರು ಸ್ವಂತ ಡಿಜಿಟಲ್ ಸಹಿ(Digital signature) ಮೂಲಕ ಅನುಮೋದನೆ ನೀಡುವ ಅವಶ್ಯಕತೆ ಇತ್ತು. ಇದರಿಂದಾಗಿ ಮುಟೇಶನ್(Mutation) ಅನುಮೋದನೆಗೆ ತುಂಬಾ ಸಮಯ ತಗಲುತ್ತಿತ್ತು.

ಕಂದಾಯ ನಿರೀಕ್ಷಕರು(RI) ಕೂಡ ಕಛೇರಿಗೆ ಬಂದು ಅನುಮೋದನೆ ನೀಡಬೇಕಾಗಿತ್ತು, ಇದರಿಂದ ಮ್ಯುಟೇಶನ್ ಪ್ರತಿಕ್ರಿಯೆಗೆ ಹೆಚ್ಚು ಸಮಯ ತಗಲುತ್ತಿತ್ತು ಮತ್ತು ಸಾರ್ವಜನಿಕರು ಅನಗತ್ಯವಾಗಿ ಕಚೇರಿಗಳಿಗೆ ಅಲೆಯಬೇಕಾಗಿತ್ತು.

ಈಗ ಖಾತೆ ಬದಲಾವಣೆ ಮ್ಯುಟೇಶನ್ ಪ್ರತಿಕ್ರಿಯೆ ಹೇಗೆ? Mutation New Method

ಖಾತೆ ಬದಲಾವಣೆ ಮ್ಯುಟೇಶನ್ ನೋಟೀಸು ಅವಧಿಯೊಳಗೆ ಕಂದಾಯ ನಿರೀಕ್ಷಕರು (ಸರ್ಕಾರಿ ಆಕ್ಷೇಪ) ಅಥವಾ ಸಾರ್ವಜನಿಕರು ಯಾವುದೇ ತಕರಾರು ನೀಡಿದ್ದಲ್ಲಿ, ಸದರಿ ಮ್ಯುಟೇಶನ್ ನ್ನು ಪೂರ್ಣಗೊಳಿಸದೆ, ಆ‌ರ್.ಸಿ.ಸಿ.ಎಂ.ಎಸ್ ತಂತ್ರಾಂಶದ ತಹಶೀಲ್ದಾರರ ನ್ಯಾಯಾಲಯಕ್ಕೆ ಸದರಿ ಪ್ರಕರಣವನ್ನು ವರ್ಗಾಯಿಸಲಾಗುತ್ತದೆ.

ತಹಶೀಲ್ದಾರರ ನಿರ್ಧಾರದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.ಆದ್ರೆ ಯಾವುದು ತಕರಾರು ಬರದಿದ್ದರೆ 8ನೇ ದಿನದಂದು ಸ್ವಯಂ ಸ್ವಯಂಚಾಲಿತವಾಗಿ ಖಾತೆ ವರ್ಗಾವಣೆಯಾಗುತ್ತದೆ

ಈಗ ಯಾವೆಲ್ಲ ಸೇವೆಗಳು ಸ್ವಯಂಚಾಲಿತ(ಆಟೋಮ್ಯಾಟಿಕ್)

  • ಭೂಸ್ವಾಧೀನ ಪ್ರಕ್ರಿಯೆ – ಸರ್ಕಾರಿ ಸ್ವಾಧೀನದ ದಾಖಲಾತಿ
  • ನ್ಯಾಯಾಲಯದ ಆದೇಶಗಳು – ತಡೆಯಾಜ್ಞೆ ಮತ್ತು ಇತರೆ ನ್ಯಾಯಾಲಯದ ಆದೇಶಗಳ ನಮೂದು
  • ಹಕ್ಕು-ಬಾಧ್ಯತೆ ದಾಖಲಾತಿ – RTC ನಲ್ಲಿ ಹಕ್ಕುಗಳ ನಮೂದು
  • ಋಣ ಮುಕ್ತಗೊಳಿಸುವಿಕೆ – ಬ್ಯಾಂಕ್ ಸಾಲ ಮುಕ್ತಗೊಂಡ ನಂತರದ ನಮೂದು
  • ಭೂ ಪರಿವರ್ತನೆ – ಕೃಷಿಯೇತರ ಬಳಕೆಗೆ ಪರಿವರ್ತನೆ
  • ಪೋಡಿ/ವಾರಸುದಾರಿಕೆ – ಮೃತರ ಹೆಸರು ತೆಗೆದು ವಾರಸುದಾರರ ಹೆಸರು ನಮೂದು
  • ಸಾಗುವಳಿ ಚೀಟಿ – ಬೆಳೆ ವಿವರಗಳ ನಮೂದು ಮತ್ತು ಪಹಣಿ ವರ್ಗಾವಣೆ

ಯಾವೆಲ್ಲ ಸೇವೆಗಳು ಸ್ವಯಂಚಾಲಿತ ಮ್ಯುಟೇಶನ್ ಅನ್ವಯವಾಗುವುದಿಲ್ಲ?

  1. ಸರ್ಕಾರಿ ಜಮೀನುಗಳು
  2. ನ್ಯಾಯಾಲಯದ ತಡೆಯಾಜ್ಞೆ ಇರುವ ಪ್ರಕರಣಗಳು
  3. ವಿವಾದಿತ ಭೂಮಿಗಳು
  4. ಅಸ್ಪಷ್ಟ ಗಡಿ ಗುರುತುಗಳು
  5. ನಿಷೇಧಿತ/ಗ್ರಾಂಟ್ ಜಮೀನುಗಳು

ಇಂತಹ ಪ್ರಕರಣಗಳು ತಹಸೀಲ್ದಾರ್ ಅವರ ಪರಿಶೀಲನೆಗೆ ಒಳಪಡುತ್ತವೆ.

ಆಧಾರ್ ಜೋಡಣೆ – ಆಸ್ತಿ ಸುರಕ್ಷತೆಗೆ ಅಗತ್ಯ ಏಕೆ ಕಡ್ಡಾಯ? ಕೃಷ್ಣಭೈರೇಗೌಡ

ಕಂದಾಯ ಸಚಿವ ಕೃಷ್ಣಭೈರೇಗೌಡ(revenue Minister Krishna Byre Gowda) ಅವರು ಸಾರ್ವಜನಿಕರಿಗೆ ಮಹತ್ವದ ಮನವಿ ಮಾಡಿದ್ದಾರೆ:

ನಿಮ್ಮ ಪಹಣಿಯ (RTC) ಜೊತೆಗೆ ಆಧಾರ್ ಕಾರ್ಡ್ ಅನ್ನು ಜೋಡಣೆ ಮಾಡುವುದು ಕಡ್ಡಾಯ(Compulsory)ವಾಗಿದೆ. ಇದರಿಂದ ನಿಮ್ಮ ಆಸ್ತಿಯಲ್ಲಿ ಯಾವುದೇ ಬದಲಾವಣೆ ಅಥವಾ ವ್ಯವಹಾರ ನಡೆದರೆ ತಕ್ಷಣ ನಿಮ್ಮ ಮೊಬೈಲ್ ಗೆ SMS ಸಂದೇಶ ಬರುತ್ತದೆ.

ಸ್ವಯಂಚಾಲಿತ ಮ್ಯುಟೇಶನ್ ಗೆ ಹೇಗೆ ಅರ್ಜಿ ಸಲ್ಲಿಸುವುದು? (How to Apply for Automatic Mutation in Karnataka Step-by-Step Guide)

  • ಮೊಬೈಲ್/ಕಂಪ್ಯೂಟರ್ ಮೂಲಕ ಸರ್ಕಾರದ ಅಧಿಕೃತ https://landrecords.karnataka.gov.in ಗೆ ಭೇಟಿ ನೀಡಿ ಲಾಗಿನ್ ಮಾಡಿ
  • ನಂತರ ನಿಮ್ಮ ಆಧಾರ್ ಸಂಖ್ಯೆ ಅಥವಾ ಮೊಬೈಲ್ ನಂಬರ್ ಬಳಸಿOTP ಮೂಲಕ ದೃಢೀಕರಿಸಿ ಸೇವೆ ಆಯ್ಕೆಮಾಡಿ
  • ಸ್ವಯಂಚಾಲಿತ ಮ್ಯುಟೇಶನ್” ಅಥವಾ “ಖಾತೆ ಬದಲಾವಣೆ” ಆಯ್ಕೆಮಾಡಿ
  • ನಿಮ್ಮ ಜಮೀನಿನ ವಿವರಗಳನ್ನು ನಮೂದಿಸಿ, ಸರ್ವೆ ನಂಬರ್,ಗ್ರಾಮ/ಹೋಬಳಿ,ಜಿಲ್ಲೆ,ವಿಲ್ಲೇಜ್ ಕೋಡ್, ದಾಖಲೆಗಳನ್ನು ಅಪ್ಲೋಡ್ ಮಾಡಿ
  • ನೋಂದಣಿ ಪ್ರತಿ (ಸೇಲ್ ಡೀಡ್) , ಆಧಾರ್ ಕಾರ್ಡ್ , ಇತರೆ ಅಗತ್ಯ ದಾಖಲೆಗಳು ಸಲ್ಲಿಸಿ
  • ಅರ್ಜಿಯನ್ನು ಸಲ್ಲಿಸಿ ನಂತರ ನಿಮ್ಮ ಮೊಬೈಲ್ ಗೆ ಅರ್ಜಿ ಸಲ್ಲಿದ ಸಿಕೃತಿ SMS ಬರುತ್ತದೆ

Back To Home Pageಇಲ್ಲಿ ಕ್ಲಿಕ್ ಮಾಡಿ

Conclusion

ಕರ್ನಾಟಕದಲ್ಲಿ ಭೂ ದಾಖಲೆ ವ್ಯವಸ್ಥೆಗೆ Automatic Mutation Karnataka 2026 ಒಂದು ದೊಡ್ಡ ಪರಿವರ್ತನೆ ಆಗಿದೆ. Government of Karnataka ಪರಿಚಯಿಸಿದ ಈ ಸ್ವಯಂಚಾಲಿತ ಮ್ಯುಟೇಶನ್ ವ್ಯವಸ್ಥೆಯಿಂದ ಖಾತೆ ಬದಲಾವಣೆ ಪ್ರಕ್ರಿಯೆ ಈಗ ಅತೀ ವೇಗವಾಗಿ, ಪಾರದರ್ಶಕವಾಗಿ ಮತ್ತು ಸಂಪೂರ್ಣ ಡಿಜಿಟಲ್ ಆಗಿ ನಡೆಯುತ್ತಿದೆ.

ಸಚಿವ ಕೃಷ್ಣಭೈರೇಗೌಡ (Krishna Byre Gowda) ಘೋಷಿಸಿದಂತೆ, ತಕರಾರು ಇಲ್ಲದಿದ್ದರೆ 8ನೇ ದಿನವೇ Auto Khata Transfer ಆಗುವುದು ಸಾರ್ವಜನಿಕರಿಗೆ ದೊಡ್ಡ ರಿಲೀಫ್ ಆಗಿದೆ. ಕಚೇರಿ ಅಲೆದಾಟ, ವಿಳಂಬ, ಅನಗತ್ಯ ತೊಂದರೆ ಎಲ್ಲಾ ಇವುಗಳಿಗೆ ಈಗ Full Stop ಆಗಿದೆ .

ಆಧಾರ್ ಲಿಂಕ್ ಮೂಲಕ SMS ಅಲರ್ಟ್ ಸೌಲಭ್ಯ ಕೂಡ ಆಸ್ತಿ ಸುರಕ್ಷತೆಗೆ ಸಹಾಯ ಮಾಡುತ್ತದೆ. ಒಟ್ಟಿನಲ್ಲಿ, ಈ ವ್ಯವಸ್ಥೆ ರೈತರು ಮತ್ತು ಆಸ್ತಿ ಮಾಲೀಕರಿಗೆ ಸಮಯ ಉಳಿಸುವ, ಸುಲಭ ಹಾಗೂ ವಿಶ್ವಾಸಾರ್ಹ ಡಿಜಿಟಲ್ ಪರಿಹಾರವಾಗಿದೆ.

ಇನ್ನು ಖಾತೆ ಬದಲಾವಣೆಗಾಗಿ ಕಚೇರಿಗೆ ಹೋಗುವ ಅಗತ್ಯವಿಲ್ಲಮನೆಯಲ್ಲೇ ಕುಳಿತು Online ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಬಹುದು.

ಪ್ರತಿದಿನ ಟ್ರೆಂಡಿಂಗ್ ನ್ಯೂಸ್ ಹಾಗೂ ಕೃಷಿ ಚಟುವಟಿಕೆಗಳ ಬಗ್ಗೆ ಹಾಗೂ ಕೃಷಿ ಮಾರುಕಟ್ಟೆಯ ದರದ ಬಗ್ಗೆ ಮಾಹಿತಿಯನ್ನು ಬೇಗ ತಿಳಿಯಬೇಕೆಂದರೆ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ ಇದರಿಂದ ನಿಮಗೆ ಪ್ರತಿಯೊಂದು ಮಾಹಿತಿ ಬೇಗ ತಲುಪುತ್ತೆ ಹಾಗಾಗಿ ಪ್ರತಿಯೊಬ್ಬರೂ ಜಾಯಿನ್ ಆಗಲು ಪ್ರಯತ್ನ ಮಾಡಿ ಸಪೋರ್ಟ್ ಮಾಡಿ

ಗಮನಿಸಿ: ಕರ್ನಾಟಕ ಫ್ಲ್ಯಾಶ್‌ನಲ್ಲಿ ಪ್ರಕಟವಾಗುವ ಎಲ್ಲಾ ಮಾಹಿತಿ ಸಂಪೂರ್ಣವಾಗಿ ನಿಖರ ಮತ್ತು ಅಧಿಕೃತವಾಗಿರುತ್ತದೆ. ಯಾವುದೇ ಅನಧಿಕೃತ ಅಥವಾ ತಪ್ಪು ಮಾಹಿತಿಯನ್ನು ಪ್ರಕಟಿಸುವುದಿಲ್ಲ.

FAQ – Automatic Mutation Karnataka 2026

Automatic Mutation ಅಂದರೆ ಏನು?

ಆಸ್ತಿ ನೋಂದಣಿ ಆದ ನಂತರ, ನೋಟಿಸ್ ಅವಧಿಯಲ್ಲಿ ತಕರಾರು ಇಲ್ಲದಿದ್ದರೆ 8ನೇ ದಿನ ಸ್ವಯಂವಾಗಿ RTC/ಪಹಣಿಯಲ್ಲಿ ಹೆಸರು ಬದಲಾವಣೆ ಆಗುವ ಡಿಜಿಟಲ್ ವ್ಯವಸ್ಥೆಯನ್ನು Automatic Mutation ಎನ್ನುತ್ತಾರೆ.

Automatic Mutation ಅನ್ನು ಯಾರು ಜಾರಿಗೆ ತಂದಿದ್ದಾರೆ?

ಈ ವ್ಯವಸ್ಥೆಯನ್ನು Government of Karnataka ಕಂದಾಯ ಇಲಾಖೆ ಜಾರಿಗೆ ತಂದಿದ್ದು, ಸಚಿವ Krishna Byre Gowda ಚಾಲನೆ ನೀಡಿದ್ದಾರೆ.

ಖಾತೆ ಬದಲಾವಣೆ ಎಷ್ಟು ದಿನಗಳಲ್ಲಿ ಪೂರ್ಣಗೊಳ್ಳುತ್ತದೆ?

7–15 ದಿನಗಳ ನೋಟಿಸ್ ಅವಧಿಯಲ್ಲಿ ಯಾವುದೇ ತಕರಾರು ಇಲ್ಲದಿದ್ದರೆ 8ನೇ ದಿನ Auto Approval ಆಗಿ ಖಾತೆ ಬದಲಾವಣೆ ಆಗುತ್ತದೆ.

Aadhaar ಲಿಂಕ್ ಯಾಕೆ ಕಡ್ಡಾಯ?

RTC ಜೊತೆ Aadhaar ಜೋಡಿಸಿದರೆ ಆಸ್ತಿ ವ್ಯವಹಾರ ನಡೆದಾಗ ತಕ್ಷಣ SMS ಅಲರ್ಟ್ ಬರುತ್ತದೆ. ಇದರಿಂದ ಆಸ್ತಿ ಸುರಕ್ಷತೆ ಹೆಚ್ಚುತ್ತದೆ.

Leave a Comment