PM Vishwakarma Yojana 2026: ಉಚಿತ ಹೊಲಿಗೆ ಯಂತ್ರ + ₹15,000 ಟೂಲ್‌ಕಿಟ್ + ₹3 ಲಕ್ಷ ಸಾಲ – ಈಗಲೇ ಅರ್ಜಿ ಹಾಕಿ!

Spread the love

PM Vishwakarma Yojana 2026: ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವಂತಹ ಈ ಯೋಜನೆಯು ಈ ಯೋಜನೆಗೆ ಅರ್ಜಿ ಸಲ್ಲಿಸಿದಂತಹ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರ(Free Sewing Machine), ₹15,000 ಹಣವನ್ನು ನೀಡಲಾಗುತ್ತದೆ ಹಾಗೂ 3 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ(PM Vishwakarma loan 3 lakh) ವನ್ನು ಕೂಡ ಸಹ ನೀಡಲಾಗುವುದು ಮತ್ತು ಕೌಶಲ್ಯ ತರಬೇತಿಗಾಗಿ 5 ದಿನಗಳ ತರಬೇತಿ(5 days training for skill training)ಯನ್ನು ಕೂಡ ನೀಡುತ್ತಾರೆ. ಮತ್ತು ಪ್ರತಿದಿನ 500 ರೂಪಾಯಿ ಹಣವನ್ನು ಕೂಲಿ(Daily wage of 500 rupees)ಯಾಗಿ ಕೂಡ ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಈ ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ ತಿಳಿದುಕೊಳ್ಳಿ.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ(PM Vishwakarma Yojane)ಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು ? ಹಾಗೂ ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಕೂಡ. ಎಲ್ಲಾ ಇದೇ ಲೇಖನದಲ್ಲಿ ನೀಡಿರುತ್ತೇವೆ ಸಪೂರ್ಣವಾಗಿ ಓದಿ.

Table of Contents

ಪಿಎಂ ವಿಶ್ವಕರ್ಮ ಯೋಜನೆ! PM Vishwakarma Yojana 2026

PM Vishwakarma Yojana 2026: ಉಚಿತ ಹೊಲಿಗೆ ಯಂತ್ರ + ₹15,000 ಟೂಲ್‌ಕಿಟ್ + ₹3 ಲಕ್ಷ ಸಾಲ – ಈಗಲೇ ಅರ್ಜಿ ಹಾಕಿ!

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ(pradhan mantri vishwakarma yojana)ಯು ಕೇಂದ್ರ ಸರ್ಕಾರ(Central Govt)ವು ಜಾರಿಗೆ ತಂದಿರುತ್ತದೆ. ಈ ಯೋಜನೆ ಮೂಲಕ ಗುಡಿ ಕೈಗಾರಿಕೆಗಳನ್ನು ಮತ್ತು ಸಾಂಪ್ರದಾಯಿಕವಾದ ವ್ಯಕ್ತಿಯನ್ನು ಅವಲಂಬಿಸಿರುವ ಜನರಿಗೆ ಉತ್ತೇಜನವನ್ನು ನೀಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಮತ್ತು ಅವರ ಉದ್ಯೋಗವನ್ನು ಆಧುನಿಕರಣ ಗೊಳಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿರುತ್ತದೆ ಈ ಯೋಜನೆಯ ಮೂಲ ಮುಖ್ಯ ಉದ್ದೇಶವೆಂದರೆ, ಆರ್ಥಿಕ ಸಹಾಯ(Financial assistance) ನೀಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ಬಂದಿದೆ ಎಂದು ಹೇಳಿದರೆ ಕೂಡ ತಪ್ಪಾಗಲಾರದು ಅಂತ ಹೇಳಬಹುದು.

ಪಿಎಂ ವಿಶ್ವಕರ್ಮ ಯೋಜನೆ(pm vishwakarma yojane 2026)ಯು ಕೇಂದ್ರ ಸರ್ಕಾರ ಸಣ್ಣ ಕೈಗಾರಿಕೆ(Central Government Small Industries)ಗಳು ಹಾಗೂ ಗುಡಿ ಕೈಗಾರಿಕೆಗಳ ವೃತ್ತಿಗಳನ್ನು ಮಾಡಿಕೊಂಡು ಬದುಕುತ್ತಿರುವ ಜನರಿಗೆ ನೆರವು ಆಗಲೆಂದು ಈ ಉದ್ದೇಶದಿಂದ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಅಡಿಯಲ್ಲಿ ಅವರು ತಮ್ಮ ಉದ್ಯೋಗವನ್ನು ಇನ್ನಷ್ಟು ಆಧುನಿಕರಣ ಗೊಳಿಸಲು ಹಾಗೂ ಯೋಜನೆಯಲ್ಲಿ ಅತ್ಯಂತ ಕಡಿಮೆ ದರದಲ್ಲಿ 3 ಲಕ್ಷದವರೆಗೆ ಹಣವನ್ನು ಸಾಲವನ್ನಾಗಿ ಪಡೆದುಕೊಳ್ಳುವ ಸೌಲಭ್ಯವನ್ನು ಮಾಡಿಕೊಟ್ಟಿದೆ ಎಂದು ಹೇಳಿದರೆ ತಪ್ಪಾಗಲಾರದು. ಹಾಗಾಗಿ ಅವರು ಕೂಡ ಸಹ ಹಾರ್ದಿಕವಾದವನ್ನು ಪಡೆದು ಆರ್ಥಿಕವಾಗಿ ಬಲಿಷ್ಠರಾಗಲು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ(pradhan mantri vishwakarma yojane)ಯು ಸಹಕಾರಿಯಾಗಲಿದೆ.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದಂತಹ ಫಲಾನುಭವಿಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಅಂದರೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುವುದು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಸಾಲವನ್ನು ನೀಡಲಾಗುತ್ತದೆ. ಹಾಗೂ 15 ಸಾವಿರ ರೂಪಾಯಿ ಹಣವನ್ನು ಉಚಿತ(Free money of 15 thousand rupees)ವಾಗಿ ಕೂಡ ಪಡೆಯಬಹುದಾಗಿರುತ್ತದೆ.

ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿರುವಂತಹ ಫಲಾನುಭವಿಗಳು ತಮ್ಮ ಕೌಶಲ್ಯ ಅಭಿವೃದ್ಧಿಗೆ 5 ದಿನಗಳ ಕಾಲ ತರಬೇತಿ(5 days of training for skill development)ಯನ್ನು ನೀಡಲಾಗುತ್ತದೆ. ಹಾಗೂ ತರಬೇತಿ ಕಾರಣವು ಅವರಿಗೆ ಪ್ರತಿದಿನ 500 ರೂಪಾಯಿ ದಿನಗೂಲಿಯನ್ನು ಕೂಡ ಸಹ ನೀಡಲಾಗುತ್ತದೆ. ಈ ಹಣವನ್ನು ನೇರವಾಗಿ ಫಲಾನುಭವಿಯ ಖಾತೆಗೆ ಹಣ ಜಮಾ ಮಾಡಲಾಗುತ್ತದೆ ಹಾಗೂ ತರಬೇತಿಯನ್ನು ಹಾಜರಾತಿ ಆದಂತಹ ವ್ಯಕ್ತಿಗಳ ತಮ್ಮ ಉದ್ಯೋಗವನ್ನು ಯಾವ ರೀತಿ ಆಧುನಿಕರಣವಾಗಿಗೊಳಿಸಬೇಕು ಹಾಗೂ ಹೆಚ್ಚಿನ ಆದಾಯವನ್ನು ಯಾವ ರೀತಿ ಪಡೆಯಬೇಕು? ಎಂದು ಎಲ್ಲಾ ತರಬೇತಿಯಲ್ಲಿ ನೀಡಲಾಗುತ್ತದೆ.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಉಚಿತವಾಗಿ ₹15000 ರೂಪಾಯಿ ಹಣ ಹೇಗೆ ಪಡೆಯುವುದು?

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ(pm vishwakarma yojana Application) ಸಲ್ಲಿಸಿರುವ ಫಲಾನುಭವಿಗಳಿಗೆ ₹15000 ಹಣವನ್ನು ಉಚಿತವಾಗಿ ನೀಡಲಾಗುತ್ತದೆ ಈ ಹಣವನ್ನು ಹಿಂದಿರುಗಿಸುವ ಅವಶ್ಯಕತೆಯು ಇರುವುದಿಲ್ಲ. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ(vishwakarma yojane)ಗೆ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ 5 ದಿನದ ಕೌಶಲ್ಯ ತರಬೇತಿಯನ್ನು ನೀಡಿ ₹15,000 ಮೌಲ್ಯದ ಡಿಜಿಟಲ್ ವೋಚರ್ ಸಿಗುತ್ತದೆ.

ಹೌದು ನೀವು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದರೆ ಟೋಲ್ ಕಿಟ್ ತೆಗೆದುಕೊಳ್ಳಲು ಉಚಿತವಾಗಿ ₹15,000 ಮೌಲ್ಯದ e-Voucher ಸಿಗುತ್ತೆ. ಆ ಹಣದಲ್ಲಿ ನಿಮ್ಮ ವೃತ್ತಿಗೆ ಬೇಕಾದಂತಹ ಸಾಮಗ್ರಿಗಳನ್ನು ಪಡೆದುಕೊಳ್ಳಬಹುದು. ಹಾಗಾಗಿ ನೀವು ಈ ಯೋಜನೆಯ ಅರ್ಜಿಯನ್ನು ಸಲ್ಲಿಸಿದರೆ ₹15,000 ಮೌಲ್ಯದ ಡಿಜಿಟಲ್ ವೋಚರ್ ಪಡೆದುಕೊಳ್ಳಬಹುದು. ಈ ಯೋಜನೆಗೆ ಕೆಲವು ವರ್ಗದ ಜನರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿಕೊಡಲಾಗಿರುತ್ತದೆ. ಅಂತವರನ್ನು ಕೆಳಗಡೆ ಪಟ್ಟಿಯನ್ನು ಮಾಡಲಾಗಿರುತ್ತದೆ.

₹3 ಲಕ್ಷ ಸಾಲ ಸೌಲಭ್ಯ ಕಡಿಮೆ ಬಡ್ಡಿ ದರದಲ್ಲಿ (Loan Facility up to ₹3 Lakh)

ಈ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ (ಶೇಕಡ 5% ರಷ್ಟು) ₹3 ಲಕ್ಷದವರೆಗೆ ಸಾಲವನ್ನು ನೀಡಲಾಗುತ್ತದೆ. ಈ ಸಾಲವನ್ನು ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ನೀಡಲಾಗುತ್ತದೆ. ಸಾಲವನ್ನು ಎರಡು ಹಂತಗಳಲ್ಲಿ ನೀಡಲಾಗುತ್ತದೆ:

ಮೊದಲ ಹಂತ: ₹1 ಲಕ್ಷ

ಎರಡನೇ ಹಂತ: ₹2 ಲಕ್ಷ (ಮೊದಲ ಸಾಲ ಮರುಪಾವತಿ ಮಾಡಿದ ನಂತರ)

Back To Home Pageಇಲ್ಲಿ ಕ್ಲಿಕ್ ಮಾಡಿ

ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು?

  • ಬೊಂಬೆ ತಯಾರಕರು(Doll/Toy Maker)
  • ಬಡಿಗರು(Carpenter)
  • ಕುಂಬಾರರು(Potter)
  • ಶಿಲ್ಪಿಗಳು(Sculptor)
  • ಟೈಲರಿಂಗ್ ಮಾಡುವವರು(Tailor)
  • ಬುಟ್ಟಿ ಎಣೆಯುವವರು(Basket Weaver)
  • ಹೂಮಾಲೆ ಕಟ್ಟುವವರು(Garland Maker)
  • ದೋಣಿ ತಯಾರಕರು(Boat Maker)
  • ಪಾದರಕ್ಷೆ ಮಾಡುವವರು(Cobbler/Shoe Maker)
  • ಬಟ್ಟೆ ತೊಳೆಯುವವರು(Washerman/Dhobi)
  • ಅಕ್ಕಸಾಲಿಗರು(Goldsmith)
  • ಕಲ್ಲು ಕುಟಿಗರು(Stone Carver)
  • ಮೀನುಗಾರರು(Fisherman)
  • ಕುಲುಮೆ ಮಾಡುವವರು(Furnace/Casting Worker)

ಮೇಲೆ ಪಟ್ಟಿಯಲ್ಲಿ ಮಾಡಿರುವಂತಹ ವರ್ಗದ ಜನರು ಸಾಂಪ್ರದಾಯಿಕ ವೃತ್ತಿಯನ್ನು ಮಾಡುವವರು ಹಾಗೂ ಅಲ್ಲಿ ಕೊಟ್ಟಿರುವಂತಹ ಜನರು ಮಾತ್ರ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಜಿಯನ್ನು ಸಲ್ಲಿಸಲು ಯಾವ ಯಾವ ದಾಖಲೆಗಳು ಬೇಕಾಗುತ್ತವೆ ಎಂಬುದನ್ನು ಈ ಕೆಳಗೆ ತಿಳಿದುಕೊಳ್ಳಿ.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಗೆ ಅರ್ಜಿ ಸಲ್ಲಿಸಬೇಕಾಗುವ ದಾಖಲೆಗಳು!

  1. ಆಧಾರ್ ಕಾರ್ಡ್: ನೀವೇನಾದರೂ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅರ್ಜಿ ಸಲ್ಲಿಸಲು ಬಯಸುತ್ತೀರಾ ಹಾಗಾದರೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕಗುತ್ತೆ.!
  2. ಜಾತಿ ಮತ್ತು ಆದಾಯ ಪ್ರಮಾಣ ಪತ್ರ: ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕೂಡ ಸಹ ನೀಡಬೇಕಾಗುತ್ತದೆ.
  3. ರೇಷನ್ ಕಾರ್ಡ್: ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ನಿಮಗೆ ರೇಷನ್ ಕಾರ್ಡ್ ಜೆರಾಕ್ಸ್ ಕೂಡ ನೀಡಬೇಕಾಗುತ್ತದೆ ಎಂಬುದು ಮೊದಲು ತಿಳಿದುಕೊಳ್ಳಿ. ರೇಷನ್ ಕಾರ್ಡ್ ಒಂದು ಕಡ್ಡಾಯ ದಾಖಲೆ ಸಹ ಆಗಿರುತ್ತದೆ.
  4. ಮೊಬೈಲ್ ನಂಬರ್: ಅರ್ಜಿದಾರರು ಚಾಲ್ತಿಯಲ್ಲಿರುವ ಯಾವುದಾದರೂ ಒಂದು ಮೊಬೈಲ್ ನಂಬರ್ ಅನ್ನು ನೀಡಬೇಕಾಗುತ್ತದೆ. ಹಾಗೂ ಮಾಹಿತಿಯನ್ನು ಎಸ್ಎಂಎಸ್ ಮೂಲಕ ಎಲ್ಲಾ ಪಡೆಯಬಹುದಾಗಿರುತ್ತದೆ.
  5. ಬ್ಯಾಂಕ್ ಖಾತೆ: ಅರ್ಜಿದಾರ ಈ ಯೋಜನೆಗೆ ಅರ್ಜಿ ಏನಾದರೂ ಸಲ್ಲಿಸಿದರೆ ಬ್ಯಾಂಕ್ ಖಾತೆಯನ್ನು ನೀಡಬೇಕು. ₹15,000 ಹಣ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಹಾಗಾಗಿ ಬ್ಯಾಂಕ್ ಖಾತೆಯೂ ಕೂಡ ಕಡ್ಡಾಯವಾಗಿ ನೀಡಬೇಕಾಗುತ್ತದೆ ಬ್ಯಾಂಕ್ ಕೂಡ ಚಾಲ್ತಿಯಲ್ಲಿ ಇರಬೇಕಾಗುತ್ತೆ.
  6. ವೃತ್ತಿ ಪರವಾನಗಿ ಪ್ರಮಾಣ ಪತ್ರ: ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ತಾನು ಮಾಡುತ್ತಿರುವ ವೃತ್ತಿಯ ಬಗ್ಗೆ ಪರವಾನಿ ಪತ್ರವನ್ನು ಹೊಂದಿರಬೇಕಾಗಿರುತ್ತದೆ. ಅದನ್ನು ಕೂಡ ಇಲ್ಲಿ ನೀಡುವುದು ಕಡ್ಡಾಯವಾಗಿರುತ್ತದೆ. ಇದನ್ನು ನೀವು ಗ್ರಾಮ ಪಂಚಾಯತಿಯಿಂದ ಭೇಟಿ ನೀಡಿಕೊಡು ಪಡೆದುಕೊಳ್ಳಬಹುದಾಗಿರುತ್ತದೆ.

ಪಿಎಂ ವಿಶ್ವಕರ್ಮ ಯೋಜನೆಯ ಸೌಲಭ್ಯಗಳೇನು?

ನೀವೇನಾದರೂ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿದರೆ ಕೆಳಗೆ ನೀಡಿರುವ ಲಾಭಗಳನ್ನು ಪಡೆದುಕೊಳ್ಳುತ್ತೀರ ಎಂದು ಹೇಳಿದರೆ ಸಹ ತಪ್ಪಾಗಲಾರದು.

ಕೌಶಲ್ಯ ಅಭಿವೃದ್ಧಿ ಆಗುವುದು: ನೀವೇನಾದರೂ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿದತ ವ್ಯಕ್ತಿಗಳಾಗಿದ್ದರೆ, ಅಥವಾ ಫಲಾನುಭವಿ ಆಗಿದ್ದರೆ ಪಿಎಂ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ 5 ದಿನಗಳ ಕಾಲ ನಿಮ್ಮ ಕೌಶಲ್ಯವನ್ನು ಅಭಿವೃದ್ಧಿಗೊಳಿಸಲು ತರಬೇತಿಯನ್ನು ನೀಡಲಾಗುತ್ತದೆ ಹಾಗೂ ಉದ್ಯೋಗವನ್ನು ಇನ್ನಷ್ಟು ಆಧುನಿಕರಣ ಗೊಳಿಸಲು ಯಾವ ರೀತಿ ಕೆಲಸವನ್ನು ಮಾಡಬೇಕೆಂದು ಕೂಡ ತಿಳಿಸಲಾಗುತ್ತದೆ. ಹೆಚ್ಚಿನ ಮಟ್ಟದಲ್ಲಿ ಯಾವ ರೀತಿ ಅಭಿವೃದ್ಧಿಪಡಿಸಬೇಕು ಎಂಬುದರ ಬಗ್ಗೆ ಐದು ದಿನಗಳ ಕಾಲ ಅಥವಾ 7 ದಿನಗಳ ಕಾಲ ತರಬೇತಿಯನ್ನು ನೀಡಲಾಗುತ್ತದೆ. ಇದು ಈ ಯೋಜನೆಯ ಪ್ರಮುಖ ಮುಖ ಅಂಶವಾಗಿದೆ.

ಉಚಿತ ಹೊಲಿಗೆ ಯಂತ್ರ: ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿ ಫಲಾನುಭವಿ ಆದರೆ ಉಚಿತ ಹೊಲಿಗೆ ಯಂತ್ರ(Free Sewing Machine 2026)ವನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಅದು ಯಾವ ರೀತಿ ಅಂತ ಅಂದರೆ? ಫಲಾನುಭವಿಗಳಿಗೆ ಟೋಲ್ ಕಿಟ್(Toll kit) ಖರೀದಿಸಲು ₹15,000 ಹಣವನ್ನು ನೀಡಲಾಗುತ್ತದೆ. ಆ ಹಣದಲ್ಲಿ ನೀವು ಹೊಲಿಗೆ ಯಂತ್ರವನ್ನು ಕೊಂಡುಕೊಳ್ಳಬಹುದಾಗಿರುತ್ತದೆ. ಈ ಉದ್ಯೋಗಕ್ಕೆ ಸಂಬಂಧಿಸಿದ ಯಾವುದೇ ರೀತಿ ಸಲಕರಣೆಗಳು ಅಥವಾ ಯಂತ್ರಗಳನ್ನು ಖರೀದಿಯನ್ನು ಮಾಡಬಹುದಾಗಿರುತ್ತದೆ.

ಸಾಲ ಸೌಲಭ್ಯ ಕೂಡ ದೊರಕುತ್ತದೆ: ನೀವೇನಾದರೂ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅರ್ಜಿ ಸಲ್ಲಿಸಿದರೆ ಶೇಕಡ 5% ಬಡ್ಡಿ ದರದಲ್ಲಿ 3 ಲಕ್ಷಗಳವರೆಗೆ ರಾಷ್ಟ್ರೀಯ ಬ್ಯಾಂಕುಗಳ ಮೂಲಕವು ಸಾಲವನ್ನು ನೀಡಲಾಗುವುದು ಎಂದು ಕೂಡ ತಿಳಿಸಲಾಗಿದೆ.

ಉಚಿತ ಹೊಲಿಗೆ ಯಂತ್ರ 2026(Free Sewing Machine 2026) ಸಿಗುವುದು ಹೇಗೆ?

ಬಹಳಷ್ಟು ಜನರು “ಉಚಿತ ಹೊಲಿಗೆ ಯಂತ್ರ” ಸುದ್ದಿ ಸುಳ್ಳು ಎಂದು ಭಾವಿಸುತ್ತಾರೆ. ಆದರೆ Pradhan Mantri Vishwakarma Yojana ಅಡಿಯಲ್ಲಿ ಇದು ನಿಜವಾದ ಸೌಲಭ್ಯ — ಆದರೆ ಸರಿಯಾದ ವಿಧಾನದಲ್ಲಿ ಅರ್ಜಿ ಹಾಕಿದವರಿಗೆ ಮಾತ್ರ ಲಭ್ಯ

ಈ ಯೋಜನೆಯಲ್ಲಿ ಟೈಲರ್ (Tailor/Darzi) ಎಂಬ ಅಧಿಕೃತ ಕೆಟಗರಿ ಇದೆ. ಸಂಪ್ರದಾಯಿಕ ಹೊಲಿಗೆ ವೃತ್ತಿಯಲ್ಲಿ ತೊಡಗಿರುವವರು ಈ ವಿಭಾಗದಲ್ಲಿ ಅರ್ಜಿ ಸಲ್ಲಿಸಬಹುದು.

ಯಂತ್ರ ಸಿಗುವ ಪ್ರಕ್ರಿಯೆ ಹೇಗೆ?

  • ಟೈಲರ್ ಕೆಟಗರಿಯಲ್ಲಿ ಅರ್ಜಿ ಸಲ್ಲಿಸಬೇಕು
  • PM Vishwakarma ಯೋಜನೆಯ ಅಡಿಯಲ್ಲಿ Tailor/Darzi ಆಯ್ಕೆ ಮಾಡಬೇಕು.
  • ದಾಖಲೆ ಪರಿಶೀಲನೆ ಮತ್ತು ಆಯ್ಕೆ
  • ಅರ್ಜಿದಾರರ ವೃತ್ತಿ ಪರಿಶೀಲನೆ (Skill Verification) ನಡೆಸಲಾಗುತ್ತದೆ.
  • ತರಬೇತಿ ಪೂರ್ಣಗೊಳಿಸಬೇಕು
  • ಕಿರು ಅವಧಿಯ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ದಿನಕ್ಕೆ ₹500 ಸ್ಟೈಪೆಂಡ್ ಸಿಗುತ್ತದೆ.
  • ₹15,000 ಮೌಲ್ಯದ e-Voucher ನೀಡಲಾಗುತ್ತದೆ
  • ಆಯ್ಕೆಯಾದವರಿಗೆ ಸರ್ಕಾರದಿಂದ ₹15,000 ಮೌಲ್ಯದ ಡಿಜಿಟಲ್ ವೋಚರ್ ಸಿಗುತ್ತದೆ.
  • ವೋಚರ್ ಮೂಲಕ ಯಂತ್ರ ಖರೀದಿ
  • e-Voucher ಬಳಸಿ ಅಧಿಕೃತ ಪೂರೈಕೆದಾರರ ಬಳಿ ಹೊಲಿಗೆ ಯಂತ್ರವನ್ನು ಖರೀದಿಸಬಹುದು.

ಮುಖ್ಯ ಮಾಹಿತಿ:

₹15,000 ಹಣವನ್ನು ನಗದು ರೂಪದಲ್ಲಿ ಕೈಗೆ ಕೊಡುವುದಿಲ್ಲ,ಇದು e-Voucher ರೂಪದಲ್ಲಿ ಮಾತ್ರ ನೀಡಲಾಗುತ್ತದೆ.

ವೋಚರ್ ಅನ್ನು ಕೇವಲ ಟೂಲ್‌ಕಿಟ್ ಅಥವಾ ಹೊಲಿಗೆ ಯಂತ್ರ ಖರೀದಿಗೆ ಬಳಸಬಹುದು.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು!

  • ಅರ್ಜಿ ಸಲ್ಲಿಸಲು ಬಯಸುವಂತಹ ವ್ಯಕ್ತಿಯು ನಮ್ಮ ಭಾರತೀಯ ನಾಗರಿಕನಾಗಿರಬೇಕು.
  • ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ವ್ಯಕ್ತಿಯು 18 ವರ್ಷ ಮೇಲ್ಪಟ್ಟಿರಬೇಕು ಹಾಗೂ 59 ವರ್ಷ ಮೀರಬಾರದು ಎಂದು ಕೂಡ ತಿಳಿಸಲಾಗಿದೆ.
  • ಅರ್ಜಿ ಸಲ್ಲಿಸಲು ಬಯಸುವಂತಹ ವ್ಯಕ್ತಿಯು ಮೇಲೆ ತಿಳಿಸಿರುವ ಹಾಗೆ ಸಾಂಪ್ರದಾಯಿಕ ವೃತ್ತಿಯನ್ನು ಮಾಡುತ್ತಿರಬೇಕಗುತ್ತೆ .
  • ಅರ್ಜಿ ಸಲ್ಲಿಸುವ ವ್ಯಕ್ತಿಗಳು ಮೇಲೆ ಪಟ್ಟಿ ಮಾಡಿರುವ ಹಾಗೆ ಯಾವ ಸಮುದಾಯದವರು ಎಂಬುದನ್ನು ಪರಿಶೀಲಿಸಿಕೊಳ್ಳಿ, ಅಂದಾಗ ಅರ್ಜಿ ಸಲ್ಲಿಸಲು ಅರ್ಹರಿಲ್ಲ ಅಥವಾ ಇದೀರಾ ಎಂಬುವುದನ್ನು ಖಚಿತಪಡಿಸಿಕೊಳ್ಳಿ.
  • ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಯ ಕುಟುಂಬದಲ್ಲಿ ಸರ್ಕಾರಿ ನೌಕರರಿದ್ದರೆ, ಅರ್ಜಿಯನ್ನು ಸಲ್ಲಿಸಲು ಅವಕಾಶವಿರುವುದಿಲ್ಲ.

ಈ ಮೇಲೆ ಪಟ್ಟಿ ಮಾಡಲಾಗಿರುವ ಅರ್ಹತೆಗಳು ನಿಮ್ಮಲ್ಲಿದ್ದರೆ ಹಾಗೂ ಈ ಅರ್ಹತೆಗಳನ್ನು ನೀವು ಹೊಂದಿದ್ದರೆ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ನೀವು ಸುಲಭವಾಗಿ ಅರ್ಜಿಯನ್ನು ತುಂಬಾ ಸುಲಭವಾಗಿ ಸಲ್ಲಿಸಬಹುದು.

ಪಿಎಂ ವಿಶ್ವಕರ್ಮ ಯೋಜನೆ 2026: ಹಂತ ಹಂತವಾಗಿ ಅರ್ಜಿ ಸಲ್ಲಿಸುವ ವಿಧಾನ

ನೀವು ಎರಡು ರೀತಿಯಲ್ಲಿ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಬಹುದು:

ವಿಧಾನ 1: ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು (ಪೋರ್ಟಲ್ ಮೂಲಕ)

  1. ಅಧಿಕೃತ ವೆಬ್ಸೈಟ್ ಭೇಟಿ: ಮೊದಲು ಪಿಎಂ ವಿಶ್ವಕರ್ಮ ಯೋಜನೆಯ ಅಧಿಕೃತ ವೆಬ್ಸೈಟ್ ಆದ pmvishwakarma.gov.in ಗೆ ಭೇಟಿ ನೀಡಿ.
  2. ನಂತರ ನೋಂದಣಿ (ರಿಜಿಸ್ಟ್ರೇಶನ್): ವೆಬ್ಸೈಟ್ ನ ಮುಖಪುಟದಲ್ಲಿ “Apply Online” ಅಥವಾ “ನೋಂದಣಿ” ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಿ. ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಮತ್ತು OTP ಮೂಲಕ ಪರಿಶೀಲನೆ ಮಾಡಿಕೊಳ್ಳಿ.
  3. ಆಧಾರ್ ವಿವರ ನಮೂದು: ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ. OTP ಮೂಲಕ ಆಧಾರ್ ಅನ್ನು ಪರಿಶೀಲಿಸಿ.
  4. ಅರ್ಜಿ ನಮೂನೆ ಭರ್ತಿ: ನಿಮ್ಮ ವೈಯಕ್ತಿಕ ಮಾಹಿತಿ, ವೃತ್ತಿ ಮಾಹಿತಿ, ವಿಳಾಸ ಇತ್ಯಾದಿಗಳನ್ನು ನಿಖರವಾಗಿ ನಮೂದಿಸಿ. ನೀವು ಯಾವ ವೃತ್ತಿಗೆ ಅರ್ಜಿ ಸಲ್ಲಿಸುತ್ತಿದ್ದೀರಿ ಎಂಬುದನ್ನು ಸ್ಪಷ್ಟವಾಗಿ ಆಯ್ಕೆ ಮಾಡಿ.
  5. ದಾಖಲೆಗಳನ್ನು ಅಪ್ಲೋಡ್ ಮಾಡಿ: ಮೇಲೆ ಪಟ್ಟಿ ಮಾಡಲಾದ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ನಿಗದಿಪಡಿಸಿದ ಫಾರ್ಮ್ಯಾಟ್ನಲ್ಲಿ ಅಪ್ಲೋಡ್ ಮಾಡಿ.
  6. ಅರ್ಜಿ ಸಲ್ಲಿಸಿ (ಸಬ್ಮಿಟ್): ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ, “ಸಬ್ಮಿಟ್” ಬಟನ್ ಕ್ಲಿಕ್ ಮಾಡಿ.
  7. ಅರ್ಜಿ ಸಂಖ್ಯೆ ಪಡೆಯಿರಿ: ಅರ್ಜಿ ಸಲ್ಲಿಸಿದ ನಂತರ ನಿಮಗೆ ಒಂದು ಅರ್ಜಿ ಸಂಖ್ಯೆ (ಅಪ್ಲಿಕೇಶನ್ ನಂಬರ್) ಸಿಗುತ್ತದೆ. ಅದನ್ನು ಭದ್ರವಾಗಿ ಇಟ್ಟುಕೊಳ್ಳಿ. ಈ ಸಂಖ್ಯೆ ಬಳಸಿ ನಿಮ್ಮ ಅರ್ಜಿಯ ಸ್ಥಿತಿಯನ್ನು ಆನ್ಲೈನ್ನಲ್ಲಿ ಟ್ರ್ಯಾಕ್ ಮಾಡಬಹುದು.

ವಿಧಾನ 2: ಸಿಎಸ್ಸಿ (CSC) ಕೇಂದ್ರದ ಮೂಲಕ ಅರ್ಜಿ ಸಲ್ಲಿಸುವುದು

  • ನಿಮಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ತೊಂದರೆಯಾಗುತ್ತಿದ್ದರೆ, ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (CSC) ಅಥವಾ ಗ್ರಾಮ ಒನ್ / ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಿ.
  • ನಿಮ್ಮ ಹತ್ತಿರದ ಸಿಎಸ್ಸಿ (CSC) ಕೇಂದ್ರ ಅಲ್ಲಿಗೆ ಭೇಟಿ ನೀಡಿ, ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಿ.
  • ಸಿಎಸ್ಸಿ ಆಪರೇಟರ್ ನಿಮ್ಮ ಅರ್ಜಿಯನ್ನು ಆನ್ಲೈನ್ನಲ್ಲಿ ಭರ್ತಿ ಮಾಡಿ, ಬಯೋಮೆಟ್ರಿಕ್ (ಫಿಂಗರ್ ಪ್ರಿಂಟ್) ಮೂಲಕ ದೃಢೀಕರಣ ಮಾಡುತ್ತಾರೆ.
  • ಇದಕ್ಕಾಗಿ ಕೇವಲ ₹100 ರಿಂದ ₹200 ಶುಲ್ಕ ಮಾತ್ರ ಪಾವತಿಸಬೇಕಾಗುತ್ತದೆ. (ಸರ್ಕಾರಿ ಸೇವೆಗೆ ಹೆಚ್ಚಿನ ಶುಲ್ಕ ಕೊಡಬೇಡಿ)

ಪಿಎಂ ವಿಶ್ವಕರ್ಮ ಯೋಜನೆ 2026 ಕ್ಕೆ ಅರ್ಜಿ ಸಲ್ಲಿಸಲು ನೇರ ಲಿಂಕ್: ಪಿಎಂ ವಿಶ್ವಕರ್ಮ ಯೋಜನೆ ಅಧಿಕೃತ ಪೋರ್ಟಲ್

ಈ ಲಿಂಕ್ ಕ್ಲಿಕ್ ಮಾಡುವುದರ ಮೂಲಕ ನೇರವಾಗಿ ಅಧಿಕೃತ ವೆಬ್ಸೈಟ್ ತಲುಪಬಹುದು ಮತ್ತು ಅರ್ಜಿ ಸಲ್ಲಿಸಬಹುದು.

Conclusion

ಪಿಎಂ ವಿಶ್ವಕರ್ಮ ಯೋಜನೆ 2026 ಸಾಂಪ್ರದಾಯಿಕ ವೃತ್ತಿಗಾರರು ಮತ್ತು ಸಣ್ಣ ಕೈಗಾರಿಕೆ ನಡೆಸುವವರಿಗೆ ದೊಡ್ಡ ಅವಕಾಶವಾಗಿದೆ. ₹15,000 ಟೂಲ್‌ಕಿಟ್ ವೋಚರ್, ಉಚಿತ ಹೊಲಿಗೆ ಯಂತ್ರಕ್ಕೆ ಸಮಾನವಾದ ಸಹಾಯ, 5% ಕಡಿಮೆ ಬಡ್ಡಿದರದಲ್ಲಿ ₹3 ಲಕ್ಷ ಸಾಲ ಹಾಗೂ ₹500 ದಿನಗೂಲಿ ತರಬೇತಿ ಭತ್ಯೆ — ಇವುಗಳ ಮೂಲಕ ಫಲಾನುಭವಿಗಳು ತಮ್ಮ ಉದ್ಯೋಗವನ್ನು ಆಧುನಿಕಗೊಳಿಸಿ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು.

ಗಮನಿಸಿ: ಕರ್ನಾಟಕ ಫ್ಲ್ಯಾಶ್‌ನಲ್ಲಿ ಪ್ರಕಟವಾಗುವ ಎಲ್ಲಾ ಮಾಹಿತಿ ಸಂಪೂರ್ಣವಾಗಿ ನಿಖರ ಮತ್ತು ಅಧಿಕೃತವಾಗಿರುತ್ತದೆ. ಯಾವುದೇ ಅನಧಿಕೃತ ಅಥವಾ ತಪ್ಪು ಮಾಹಿತಿಯನ್ನು ಪ್ರಕಟಿಸುವುದಿಲ್ಲ.

FAQ – ಪಿಎಂ ವಿಶ್ವಕರ್ಮ ಯೋಜನೆ ಕರ್ನಾಟಕ

ಪಿಎಂ ವಿಶ್ವಕರ್ಮ ಯೋಜನೆ 2026 ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

ಪಿಎಂ ವಿಶ್ವಕರ್ಮ ಯೋಜನೆಯು ನಿರಂತರ ಪ್ರಕ್ರಿಯೆಯಾಗಿದ್ದು, 2026 ರ ಅಂತ್ಯದವರೆಗೆ ಅರ್ಜಿ ಸಲ್ಲಿಸಬಹುದು. ಆದರೆ ಪ್ರತಿ ಹಂತದ ನೋಂದಣಿಗೆ ಪ್ರತ್ಯೇಕ ಕೊನೆಯ ದಿನಾಂಕಗಳಿರಬಹುದು. ತಕ್ಷಣವೇ ಅರ್ಜಿ ಸಲ್ಲಿಸುವುದು ಉತ್ತಮ.

₹15,000 ಹಣ ನಿಜವಾಗಿಯೂ ಬರುತ್ತಾ?

ಹೌದು, ₹15,000 ಹಣ ನಿಜವಾಗಿಯೂ ನಿಮ್ಮ ಖಾತೆಗೆ ಬರುತ್ತದೆ. ಆದರೆ ಇದು ಯೋಜನೆಯಡಿ ಅರ್ಜಿ ಸಲ್ಲಿಸಿದ ತಕ್ಷಣ ಬರುವುದಿಲ್ಲ. ನಿಮ್ಮ ಅರ್ಜಿ ಆಯ್ಕೆಯಾದ ನಂತರ, 5 ದಿನಗಳ ಕೌಶಲ್ಯ ತರಬೇತಿಯಲ್ಲಿ ಭಾಗವಹಿಸಿದ ಬಳಿಕ ಈ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.

 ₹3 ಲಕ್ಷ ಸಾಲ ಪಡೆಯಲು ಜಾಮೀನು ಬೇಕೇ?

ಇಲ್ಲ, ಈ ಯೋಜನೆಯಡಿ ನೀಡುವ ಸಾಲವು ಸಂಪೂರ್ಣವಾಗಿ ಜಾಮೀನು ರಹಿತ (Collateral Free) ಆಗಿದೆ. ನೀವು ಯಾವುದೇ ಆಸ್ತಿಯನ್ನು ಭದ್ರತೆಯಾಗಿ ಇಡಬೇಕಾಗಿಲ್ಲ.

ತರಬೇತಿ ಸಮಯದಲ್ಲಿ ₹500 ದಿನಗೂಲಿ ಹೇಗೆ ಸಿಗುತ್ತದೆ?

ತರಬೇತಿಗೆ ಹಾಜರಾದ ಪ್ರತಿದಿನವೂ ನಿಮ್ಮ ಹಾಜರಾತಿಯನ್ನು ದಾಖಲಿಸಲಾಗುತ್ತದೆ. ತರಬೇತಿ ಪೂರ್ಣಗೊಂಡ ನಂತರ, ಈ ದಿನಗೂಲಿಯನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ನನ್ನ ಅರ್ಜಿಯ ಸ್ಥಿತಿ ಏನು ಎಂದು ಹೇಗೆ ತಿಳಿಯುವುದು?

ಅಧಿಕೃತ ವೆಬ್ಸೈಟ್ pmvishwakarma.gov.in ಗೆ ಭೇಟಿ ನೀಡಿ, “Track Application” ಆಯ್ಕೆ ಮಾಡಿ. ನಿಮ್ಮ ಅರ್ಜಿ ಸಂಖ್ಯೆ ನಮೂದಿಸಿ, ಅರ್ಜಿಯ ಸ್ಥಿತಿಯನ್ನು ನೋಡಬಹುದು.

Leave a Comment