ಗೃಹಲಕ್ಷ್ಮಿ ಯೋಜನೆಯ ಹಣ ಬರ್ತಿಲ್ಲವೇ? 23ನೇ, 24ನೇ, 25ನೇ ಕಂತು ಮಿಸ್ ಆಗಿದೆಯಾ? ಸಂಪೂರ್ಣ ಪರಿಹಾರ ಇಲ್ಲಿದೆ
Gruha Lakshmi Payment Issues Update 2026:ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯ ಸ್ವಾಗತ 🙏ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆ(Gruhalakshmi yojana)ಯ ಹಣ(money)ದ ಸಮಸ್ಯೆಗೆ ಪರಿಹಾರ ಏನು? ಗೃಹಲಕ್ಷ್ಮಿ 23ನೇ, 24ನೇ, 25ನೇ ಕಂತು ಹಣ(Gruhalakshmi 23rd, 24th, 25th installment money) ಬಂದಿಲ್ಲ ಅಂದ್ರೆ ಏನು ಮಾಡಬೇಕು, ಒಂದೇ ಒಂದು ಕಂತು ಕೂಡ ಜಮೆಯಾಗಿಲ್ಲ ಅಥವಾ ಎರಡು ಮೂರು ಕಂತು ಗೃಹಲಕ್ಷ್ಮಿ ಯೋಜನೆ ಹಣ(Gruhalakshmi Yojana money) ಬಂದಿಲ್ಲ ಅಂದ್ರೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಕಂತು ಹಣ(Gruha Lakshmi Yojana installment money) ಬರ್ಬೇಕು ಅಂದ್ರೆ ಏನು ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇವೆ. ದಯವಿಟ್ಟು ಲೇಖನವನ್ನು ಪೂರ್ಣವಾಗಿ ಓದಿ.
Table of Contents
ಗೃಹಲಕ್ಷ್ಮಿ ಯೋಜನೆ ಎಂದರೇನು? Gruha Lakshmi Payment Issues Update 2026

ಗೃಹಲಕ್ಷ್ಮಿ ಯೋಜನೆ ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ(karnataka government five guarantee schemes)ಗಳಲ್ಲಿ ಒಂದು ಪ್ರಮುಖ ಯೋಜನೆ(scheme). ಈ ಯೋಜನೆಯಡಿ ಕುಟುಂಬದ ಮುಖ್ಯಸ್ಥೆಯಾದ ಮಹಿಳೆಗೆ ಪ್ರತಿ ತಿಂಗಳು ₹2,000 ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ಇಲ್ಲಿಯವರೆಗೆ ಅನೇಕ ಕಂತುಗಳು ಬಿಡುಗಡೆಯಾಗಿದ್ದು, ಸಾವಿರಾರು ಮಹಿಳೆಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ ಕೆಲವರಿಗೆ ಒಂದೇ ಒಂದು ಕಂತು ಕೂಡ ಬಂದಿಲ್ಲ. ಇನ್ನೂ ಕೆಲವರಿಗೆ 23ನೇ, 24ನೇ, 25ನೇ ಕಂತು ಹಣ ಮಿಸ್ ಆಗಿದೆ. ಇದೀಗ ಅನೇಕರು ಗೃಹಲಕ್ಷ್ಮಿ 26ನೇ ಕಂತಿನ ಹಣ(Gruhalakshmi 26th installment money)ಕ್ಕಾಗಿ ಕಾಯುತ್ತಿದ್ದಾರೆ.
Back To Home Page: ಇಲ್ಲಿ ಕ್ಲಿಕ್ ಮಾಡಿ
ಗೃಹಲಕ್ಷ್ಮಿ ಹಣ ಬಾರದಿರಲು ಮುಖ್ಯ ಕಾರಣಗಳು? Gruha Lakshmi Scheme Payment Delay – Reasons
ಯಾವುದೇ ಫಲಾನುಭವಿಗೆ ಹಣ ಜಮೆಯಾಗದೇ ಇದ್ದರೆ, ಕೆಳಗಿನ ಕಾರಣಗಳಲ್ಲಿ ಯಾವುದಾದರೂ ಒಂದು ಇರಬಹುದು:
- ಆಧಾರ್ ಕಾರ್ಡ್ ಅಪ್ಡೇಟ್ ಆಗಿಲ್ಲ:ಕುಟುಂಬದ ಮುಖ್ಯಸ್ಥೆಯ ಆಧಾರ್ ಕಾರ್ಡ್‌ನಲ್ಲಿ ಹೆಸರು, ವಿಳಾಸ ಅಥವಾ ಜನ್ಮ ದಿನಾಂಕದಲ್ಲಿ ತಪ್ಪಿದ್ದರೆ ಹಣ ತಡೆಗೊಳ್ಳಬಹುದು.
- Aadhaar eKYC ಆಗಿಲ್ಲ:ಆಧಾರ್ eKYC ಪೂರ್ಣಗೊಂಡಿಲ್ಲದಿದ್ದರೆ ಸರ್ಕಾರದಿಂದ ಹಣ ವರ್ಗಾವಣೆ ಆಗುವುದಿಲ್ಲ.
- ಮೊಬೈಲ್ ನಂಬರ್ ಲಿಂಕ್ ಆಗಿಲ್ಲ:ಆಧಾರ್ ಕಾರ್ಡ್‌ಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು ಅದೇ ಮೊಬೈಲ್ ನಂಬರ್ ಬ್ಯಾಂಕ್ ಖಾತೆಗೂ ಲಿಂಕ್ ಆಗಿರಬೇಕು
- ಪಡಿತರ ಚೀಟಿ ಲಿಂಕ್ ಆಗಿಲ್ಲ:BPL/APL ಪಡಿತರ ಚೀಟಿ ಕುಟುಂಬದ ಮುಖ್ಯಸ್ಥೆಯ ಆಧಾರ್ ಜೊತೆ ಲಿಂಕ್ ಆಗಿರಬೇಕು.
- ಬ್ಯಾಂಕ್ ಖಾತೆ ಆಧಾರ್ ಜೊತೆ ಲಿಂಕ್ ಆಗಿಲ್ಲ:ಆಧಾರ್ ಸೀಡಿಂಗ್ ಮತ್ತು NPCI mapping ಆಗಿರದಿದ್ದರೆ ಹಣ ಜಮೆಯಾಗುವುದಿಲ್ಲ.
- ತಾಂತ್ರಿಕ ದೋಷ:ಕೆಲವೊಮ್ಮೆ ಬ್ಯಾಂಕ್ ಸರ್ವರ್ ಅಥವಾ ಸರ್ಕಾರಿ ಪೋರ್ಟಲ್ ಸಮಸ್ಯೆಯಿಂದ ಹಣ ವಿಳಂಬವಾಗಬಹುದು.
ಗೃಹಲಕ್ಷ್ಮಿ ಯೋಜನೆ ಹಣ ಬರಬೇಕಾದರೆ ಈ ಕೆಲಸ ಮಾಡಿ? Gruhalakshmi 23th, 24th, 25th installment money
ಕೆಳಗಿನ ಕ್ರಮಗಳನ್ನು ಅನುಸರಿಸಿದರೆ ಸಮಸ್ಯೆ ಬಹುತೇಕ ಪರಿಹಾರವಾಗುತ್ತದೆ:
- ಕುಟುಂಬದ ಮುಖ್ಯಸ್ಥೆಯ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿ
- Aadhaar eKYC ಮಾಡಿಸಿ
- ಆಧಾರ್ ಕಾರ್ಡ್‌ಗೆ ಮೊಬೈಲ್ ನಂಬರ್ ಲಿಂಕ್ ಮಾಡಿಸಿ
- ಪಡಿತರ ಚೀಟಿಗೆ eKYC ಮಾಡಿಸಿ
- ಬ್ಯಾಂಕ್ ಶಾಖೆಗೆ ಭೇಟಿ ನೀಡಿ:ಆಧಾರ್ ಸೀಡಿಂಗ್ ಪರಿಶೀಲಿಸಿ
- NPCI mapping ಸ್ಟೇಟಸ್ ಚೆಕ್ ಮಾಡಿಸಿ
- ಮೊಬೈಲ್ ನಂಬರ್ ಲಿಂಕ್ ಮಾಡಿಸಿ ಅಗತ್ಯವಿದ್ದರೆ PAN ಕಾರ್ಡ್ ಅಟಾಚ್ ಮಾಡಿಸಿ
- ಖಾತೆ inactive ಆಗಿದ್ದರೆ ಹಣ ಬರೋದಿಲ್ಲ — ಕನಿಷ್ಠ ಒಂದು ವ್ಯವಹಾರ ಮಾಡಿ ಖಾತೆ active ಇಡಿ.
- ಒಂದುಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇದ್ದರೆ, ಯಾವ ಖಾತೆಗೆ ಆಧಾರ್ ಲಿಂಕ್ ಆಗಿದೆಯೋ ದೃಢಪಡಿಸಿಕೊಳ್ಳಿ.
ಈ ಎಲ್ಲ ಕೆಲಸಗಳನ್ನು ಸರಿಯಾಗಿ ಮಾಡಿದರೆ ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳೂ ಕೂಡ ಜಮೆಯಾಗುವ ಸಾಧ್ಯತೆ ಇದೆ.
ಗೃಹ ಲಕ್ಷ್ಮಿ ಯೋಜನೆ ಎಲ್ಲಾ ಬಾಕಿ ಕಂತು ಹಣ ಒಟ್ಟಿಗೆ ಬರಬೇಕಾದರೆ ಏನು ಮಾಡಬೇಕು? gruhalakshmi scheme installment money
- ಕೆಲವು ಮಹಿಳೆಯರಿಗೆ ಹಳೆಯ ಬ್ಯಾಂಕ್ ಖಾತೆಯಲ್ಲಿ NPCI mapping ಅಥವಾ ಆಧಾರ್ ಸೀಡಿಂಗ್ ಸಮಸ್ಯೆಯಿಂದ ಹಣ ಜಮೆಯಾಗುವುದಿಲ್ಲ.
- ಮೊದಲು ನಿಮ್ಮ ಬ್ಯಾಂಕ್‌ನಲ್ಲಿ Aadhaar linking ಮತ್ತು NPCI mapping ಸ್ಟೇಟಸ್ ಪರಿಶೀಲಿಸಿ.
- ಸಮಸ್ಯೆ ಮುಂದುವರಿದರೆ ಹಳೆಯ ಖಾತೆಯನ್ನು ಬಳಸದಿರಿ.
- ಪೋಸ್ಟ್ ಆಫೀಸ್‌ನಲ್ಲಿ ಹೊಸ ಖಾತೆ ತೆರೆಯಿರಿ
- ನಿಮ್ಮ ಹತ್ತಿರದ ಪೋಸ್ಟ್ ಆಫೀಸ್‌ಗೆ ಭೇಟಿ ನೀಡಿ India Post Payments Bank (IPPB) ನಲ್ಲಿ ಹೊಸ ಖಾತೆ ತೆರೆಯಿರಿ. ಆ ಖಾತೆಗೆ ಆಧಾರ್ ಲಿಂಕ್ ಮಾಡಿಸಿ,NPCI mapping ಸಕ್ರಿಯಗೊಳಿಸಿ, ಗೃಹಲಕ್ಷ್ಮಿ ಯೋಜನೆ(Gruhalakshmi Scheme)ಗೆ ಆ ಖಾತೆ ವಿವರ ಅಪ್ಡೇಟ್ ಮಾಡಿಸಿ
ಈ ಕ್ರಮಗಳನ್ನು ಅನುಸರಿಸಿದರೆ ಬಾಕಿ ಇರುವ ಎಲ್ಲಾ ಕಂತು ಹಣ ಒಂದೇ ಬಾರಿ ಜಮೆಯಾಗುವ ಸಾಧ್ಯತೆ ಇದೆ.
ಗೃಹಲಕ್ಷ್ಮಿ ಯೋಜನೆಯ ಅಧಿಕೃತ ವೆಬ್‌ಸೈಟ್: click here
Conclusion
ಗೃಹಲಕ್ಷ್ಮಿ ಯೋಜನೆ ಹಣ ಬರದೇ ಇದ್ದರೆ ಆತಂಕ ಪಡುವ ಅಗತ್ಯವಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ Aadhaar eKYC, ಬ್ಯಾಂಕ್ ಆಧಾರ್ ಲಿಂಕ್, NPCI mapping ಅಥವಾ ಪಡಿತರ ಚೀಟಿ ಲಿಂಕಿಂಗ್ ಸಮಸ್ಯೆಯೇ ಪ್ರಮುಖ ಕಾರಣವಾಗಿರುತ್ತದೆ.
ಗೃಹಲಕ್ಷ್ಮಿ ಹಣ 23ನೇ, 24ನೇ, 25ನೇ ಕಂತು ಮಿಸ್ ಆಗಿದ್ದರೂ ಕೂಡ ಸರಿಯಾದ ದಾಖಲೆಗಳನ್ನು ಅಪ್ಡೇಟ್ ಮಾಡಿ, ಬ್ಯಾಂಕ್‌ನಲ್ಲಿ ಪರಿಶೀಲನೆ ಮಾಡಿಸಿದರೆ ಬಾಕಿ ಹಣ ಜಮೆಯಾಗುವ ಸಾಧ್ಯತೆ ಇದೆ.
ಆಧಾರ್ ಕಾರ್ಡ್ ಅಪ್ಡೇಟ್, eKYC ಪೂರ್ಣಗೊಳಿಸುವುದು, ಬ್ಯಾಂಕ್ ಖಾತೆ active ಇಡುವುದು ಮತ್ತು ಸರಿಯಾದ ಖಾತೆಗೆ ಆಧಾರ್ ಲಿಂಕ್ ಮಾಡಿಸುವುದು ಅತ್ಯಂತ ಮುಖ್ಯ.
ಎಲ್ಲಾ ಪ್ರಕ್ರಿಯೆಗಳು ಸರಿಯಾಗಿ ಇದ್ದರೆ ಗೃಹಲಕ್ಷ್ಮಿ ಯೋಜನೆಯ ಹಣ ಖಂಡಿತವಾಗಿ ನಿಮ್ಮ ಖಾತೆಗೆ ಜಮೆಯಾಗುತ್ತದೆ.
ಈ ಮಾಹಿತಿ ಉಪಯೋಗವಾದರೆ ಇತರ ಮಹಿಳೆಯರಿಗೂ ಹಂಚಿಕೊಳ್ಳಿ 🙏
ಇದೇ ರೀತಿ ಸರ್ಕಾರಿ ಯೋಜನೆಗಳು ಮತ್ತು ಸಂಸ್ಥೆಯಲ್ಲಿ ಖಾಲಿ ಇರುವ ಉದ್ಯೋಗಗಳ ಕುರಿತು ಮಾಹಿತಿ ಬೇಕಾದರೆ ನಮ್ಮ ವೆಬ್ ಸೈಟಿಗೆ ಭೇಟಿ ನೀಡಿ ಮತ್ತು ಮಾಹಿತಿಯನ್ನು ಬೇಗ ಪಡೆಯಲು
ಪ್ರತಿದಿನ ಟ್ರೆಂಡಿಂಗ್ ನ್ಯೂಸ್ ಹಾಗೂ ಕೃಷಿ ಚಟುವಟಿಕೆಗಳ ಬಗ್ಗೆ ಹಾಗೂ ಕೃಷಿ ಮಾರುಕಟ್ಟೆಯ ದರದ ಬಗ್ಗೆ ಮಾಹಿತಿಯನ್ನು ಬೇಗ ತಿಳಿಯಬೇಕೆಂದರೆ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ ಇದರಿಂದ ನಿಮಗೆ ಪ್ರತಿಯೊಂದು ಮಾಹಿತಿ ಬೇಗ ತಲುಪುತ್ತೆ ಹಾಗಾಗಿ ಪ್ರತಿಯೊಬ್ಬರೂ ಜಾಯಿನ್ ಆಗಲು ಪ್ರಯತ್ನ ಮಾಡಿ ಸಪೋರ್ಟ್ ಮಾಡಿ
ಇದೇ ರೀತಿ ಸರ್ಕಾರಿ ಯೋಜನೆಗಳು ಮತ್ತು ಸಂಸ್ಥೆಯಲ್ಲಿ ಖಾಲಿ ಇರುವ ಉದ್ಯೋಗಗಳ ಕುರಿತು ಮಾಹಿತಿ ಬೇಕಾದರೆ ನಮ್ಮ ವೆಬ್ ಸೈಟಿಗೆ ಭೇಟಿ ನೀಡಿ ಮತ್ತು ಮಾಹಿತಿಯನ್ನು ಬೇಗ ಪಡೆಯಲು
ಗಮನಿಸಿ: ಕರ್ನಾಟಕ ಫ್ಲ್ಯಾಶ್‌ನಲ್ಲಿ ಪ್ರಕಟವಾಗುವ ಎಲ್ಲಾ ಮಾಹಿತಿ ಸಂಪೂರ್ಣವಾಗಿ ನಿಖರ ಮತ್ತು ಅಧಿಕೃತವಾಗಿರುತ್ತದೆ. ಯಾವುದೇ ಅನಧಿಕೃತ ಅಥವಾ ತಪ್ಪು ಮಾಹಿತಿಯನ್ನು ಪ್ರಕಟಿಸುವುದಿಲ್ಲ.
FAQ – ಗೃಹಲಕ್ಷ್ಮಿ ಯೋಜನೆಯ ಹಣ ಬರ್ತಿಲ್ಲವೇ? Gruha Lakshmi Scheme Payment Delay – Reasons & Fix
ಗೃಹಲಕ್ಷ್ಮಿ ಯೋಜನೆಯ ಹಣ ಯಾಕೆ ಬರ್ತಿಲ್ಲ?
Aadhaar eKYC ಆಗಿರದಿರುವುದು, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರದಿರುವುದು, ಪಡಿತರ ಚೀಟಿ eKYC ಮಾಡಿಸದಿರುವುದು ಅಥವಾ NPCI mapping ಸಮಸ್ಯೆ ಮುಖ್ಯ ಕಾರಣಗಳು.
23ನೇ, 24ನೇ, 25ನೇ ಕಂತು ಹಣ ಬಂದಿಲ್ಲ ಅಂದ್ರೆ ಏನು ಮಾಡಬೇಕು?
ಮೊದಲು ಬ್ಯಾಂಕ್‌ನಲ್ಲಿ Aadhaar linking ಮತ್ತು NPCI mapping ಸ್ಟೇಟಸ್ ಚೆಕ್ ಮಾಡಿಸಿ. ನಂತರ eKYC ಪೂರ್ಣಗೊಳಿಸಿ. ಸಮಸ್ಯೆ ಮುಂದುವರಿದರೆ ಗ್ರಾಮ ಒನ್ ಕೇಂದ್ರ ಅಥವಾ ಸಂಬಂಧಿತ ಕಚೇರಿಯಲ್ಲಿ ಪರಿಶೀಲಿಸಿ.
ಒಂದೇ ಒಂದು ಕಂತು ಕೂಡ ಬಂದಿಲ್ಲ ಅಂದ್ರೆ ಕಾರಣ ಏನು?
ಅರ್ಜಿ ಅನುಮೋದನೆ ಆಗಿರದಿರುವುದು, ದಾಖಲೆ mismatch, ಅಥವಾ ಬ್ಯಾಂಕ್ ಖಾತೆ inactive ಆಗಿರುವುದು ಕಾರಣವಾಗಿರಬಹುದು.
ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ ಒಟ್ಟಿಗೆ ಬರುತ್ತದೆಯಾ?
ಹೌದು. ಎಲ್ಲಾ ದಾಖಲೆಗಳು ಸರಿಯಾಗಿದ್ದರೆ ಮತ್ತು ಬ್ಯಾಂಕ್ ಲಿಂಕಿಂಗ್ ಸಮಸ್ಯೆ ಸರಿಯಾದರೆ ಬಾಕಿ ಇರುವ ಕಂತುಗಳು ಒಂದೇ ಬಾರಿ ಜಮೆಯಾಗಬಹುದು.
ಗೃಹಲಕ್ಷ್ಮಿ ಯೋಜನೆಗೆ Aadhaar link ಕಡ್ಡಾಯವೇ?
ಹೌದು. Aadhaar–Bank Account linking ಹಾಗೂ eKYC ಕಡ್ಡಾಯ. ಇಲ್ಲದಿದ್ದರೆ ಹಣ ವರ್ಗಾವಣೆ ಆಗುವುದಿಲ್ಲ.
Nithya is a Government Schemes and Education and News writer at Karnatakaflash.com with 3+ years of experience covering Karnataka and Central government welfare programs, SSP scholarship, ration card, and education updates. She verifies all information from official government sources to provide accurate, clear, and trusted updates for citizens.
