PM Ujjwala Yojana 2.0 Apply: ಮಹಿಳೆಯರಿಗೆ ಉಚಿತ LPG ಕನೆಕ್ಷನ್ + ಪ್ರತಿ ತಿಂಗಳು ₹300 ಸಬ್ಸಿಡಿ ಸಿಗುತ್ತೆ! ಪಿಎಂ ಉಜ್ವಲ ಯೋಜನೆ 2.0 – ಅರ್ಜಿ ವಿಧಾನ ಸಂಪೂರ್ಣ ಮಾಹಿತಿ

Spread the love

PM Ujjwala Yojana 2.0 Apply Free gas cylinder 2026 : ಎಲ್ಲಾ ಮಹಿಳೆಯರಿಗೆ ಒಂದು ಗುಡ್ ನ್ಯೂಸ್ ಅಂತ ಹೇಳಬಹುದು ಏಕೆಂದರೆ, ರೇಷನ್ ಕಾರ್ಡ್ ಹೊಂದಿದತಹ ಎಲ್ಲಾ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಸ್ಟವ್ ಮತ್ತು ಉಚಿತ ಗ್ಯಾಸ್ ಸಿಲಿಂಡರ್(Stove and free gas cylinder) ನೀಡಲಾಗುತ್ತಿದೆ. ಈ ಸ್ಟವ್(Stove) ಮತ್ತು ಉಚಿತ ಗ್ಯಾಸ್ ಸಿಲಿಂಡರ್(free gas cylinder) ಹೇಗೆ ನಾವು ಪಡೆಯಬೇಕು, ಉಚಿತ ಗ್ಯಾಸ್(free gas) ಸಿಲಿಂಡರ್ ಯಾರಿಗೆ ನೀಡಲಾಗುತ್ತಿದೆ, ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಏನು ಮಾಡಬೇಕು ಅನ್ನುವುದರ ಬಗ್ಗೆ ವಿವರವಾದ ಮಾಹಿತಿಯನ್ನು ಕೆಳಗೆ ತಿಳಿಸಿದ್ದೇವೆ.

ಈ ಲೇಖನದಲ್ಲಿ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಆಸಕ್ತಿ ಮತ್ತು ಅವಶ್ಯಕತೆ ಇರುವತ ಮಹಿಳೆಯರು ಈ ಯೋಜನೆಗೆ ಅರ್ಜಿ ಹಾಕಬಹುದು. ಇದು ಯಾವ ಯೋಜನೆ ಮತ್ತು ಯೋಜನೆಯ ವಿಶೇಷತೆಗಳು ಏನು ಅನ್ನುವುದರ ಮಾಹಿತಿ ಈ ಕೆಳಗೆ ನೀಡಲಾಗಿದೆ.

ಈ ಮೇಲೆ ಹೇಳಿದ ಹಾಗೆ ನೀವು ಉಚಿತವಾಗಿ ಗ್ಯಾಸ್ ಸಿಲಿಂಡರ್ ಮತ್ತು ಒಂದು ಸ್ಟವ್ ಓಲೆಯನ್ನು ಕೇಂದ್ರ ಸರ್ಕಾರದ ಈ ಯೋಜನೆಯ ಮೂಲಕ ಉಚಿತವಾಗಿ ಪಡೆಯಬಹುದು. ಹಾಗೆ ಮುಂದೆ ನೀವು ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಅನ್ನು ಅತಿ ಕಡಿಮೆ ಬೆಲೆಯಲ್ಲಿ ಅಂದರೆ ಕೇವಲ ₹600 ರೂ ಅಲ್ಲಿ ನೀವು ತುಂಬಿಸಬಹುದು. ಅದ್ದರಿಂದ ನೀವು ಕೇಂದ್ರ ಸರ್ಕಾರದ ಈ ಯೋಜನೆಯ ಲಾಭವನ್ನು ಪಡೆಯಲು ಮತ್ತು ಪ್ರತಿ ತಿಂಗಳು ಕಡಿಮೆ ಬೆಲೆಗೆ ಗ್ಯಾಸ್ ಖರೀದಿಸಲು ಈ ಯೋಜನೆಯ ಮಾಹಿತಿ ತಿಳಿದುಕೊಂಡು ಯೋಜನೆಯ ಲಾಭವನ್ನು ಪಡೆಯಿರಿ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 | Pradhan Mantri Ujjwala Yojana Free gas cylinder 2026

PM Ujjwala Yojana 2.0 Apply: ಮಹಿಳೆಯರಿಗೆ ಉಚಿತ LPG ಕನೆಕ್ಷನ್ + ಪ್ರತಿ ತಿಂಗಳು ₹300 ಸಬ್ಸಿಡಿ ಸಿಗುತ್ತೆ! ಪಿಎಂ ಉಜ್ವಲ ಯೋಜನೆ 2.0 – ಅರ್ಜಿ ವಿಧಾನ ಸಂಪೂರ್ಣ ಮಾಹಿತಿ Free gas cylinder 2026

ನಮ್ಮೆಲ್ಲರಿಗೂ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಪ್ರತಿಯೊಂದು ಕುಟುಂಬದ ಮಹಿಳೆಯರಿಗೂ ಕೂಡ ಗ್ಯಾಸ್ ಸಿಲಿಂಡರ್ ಇಲ್ಲದೆ ಅಡುಗೆಯನ್ನು ಮಾಡಲು ಸಾಧ್ಯವಿಲ್ಲ. ಏಕೆಂದರೆ ಸೌಧೆಗಳನ್ನು ಬಳಸಿ ಅಡುಗೆ ಮಾಡಲು ಸೌದೆಗಳು ಕೂಡ ಈಗ ಸಿಗುವುದಿಲ್ಲ ಮತ್ತು ಇದರಿಂದ ಮಹಿಳೆಯರಿಗೆ ಕೆಲವು ಆರೋಗ್ಯಕರವು ತೊಂದರೆಗಳು ಆಗುತ್ತವೆ ಎಂದು ಹೇಳಲಾಗಿದೆ.

ಅದ್ದರಿಂದ ಪ್ರತಿಯೊಂದು ಕುಟುಂಬದತ ಮಹಿಳೆಯು ಕೂಡ ಗ್ಯಾಸ್ ಸಿಲಿಂಡರ್ ಮೇಲೆ ಅಡುಗೆ ಮಾಡಲು ಬಯಸುತ್ತಾರೆ. ಹೀಗಿರುವಾಗ ಗ್ಯಾಸ್ ಸಿಲಿಂಡರ್ ನ ಬೆಲೆಯು ಕೂಡ ಸಹ ಹೆಚ್ಚಾಗಿದೆ, ಕೆಲವು ಬಡ ಕುಟುಂಬಗಳಿಗೆ ಖರೀದಿ ಮಾಡಲು ಆಗುತಾನೆ ಇಲ್ಲ . ಇದನ್ನು ಗಮನಿಸಿದ ಸರ್ಕಾರವು ಇಂತಹ ಬಡ ಕುಟುಂಬಗಳಿಗೂ ಗ್ಯಾಸ್ ಸಿಲಿಂಡರ್ ಅನ್ನು ತಲುಪುವಂತೆ ಮಾಡಬೇಕು ಅನ್ನುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದೆ ಅಂತ ಹೇಳಬಹುದು.

ನಿಮಗೆ ಗ್ಯಾಸ್ ಸಿಲಿಂಡರ್ ಅವಶ್ಯಕತೆಯು ಇದ್ದರೆ, ನೀವು ಈ ಹಿಂದೆ ಯಾವುದೇ ರೀತಿಯ ಗ್ಯಾಸ್ ಸಿಲಿಂಡರ್ ಯೋಜನೆಯನ್ನು ಪಡೆದಿಲ್ಲ ಅಂದರೆ ಈ ಯೋಜನೆಗೆ ಅರ್ಜಿ ಹಾಕಿ ಅಥವಾ ನಿಮ್ಮ ಸಂಬಂಧಿಕರಿಗೆ ಬೇಕಾದಲ್ಲಿ ಈ ಮಾಹಿತಿಯನ್ನು ಅವರಿಗೆ ಕೂಡ ಶೇರ್ ಮಾಡಿ. ಇದರಿಂದ ಅವರು ಈ ಸರ್ಕಾರದ ಯೋಜನೆಯ ಬಗ್ಗೆ ಮಾಹಿತಿಯು ಕೂಡ ತಿಳಿದುಕೊಂಡು, ಈ ಯೋಜನೆಯ ಲಾಭವನ್ನು ಪಡೆಯಬಹುದು.

Free gas cylinder 2026 Karnataka | ಉಚಿತ ಗ್ಯಾಸ್ ಸಿಲಿಂಡರ್ ಜೊತೆ ಗ್ಯಾಸ್ ಕಿಟ್

ನೀವು ಸರ್ಕಾರವು ನೀಡುವ ಉಚಿತ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಲು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ್ ಯೋಜನೆ(Pradhan Mantri Ujjwala Yojana)ಗೆ ನೀವು ಅರ್ಜಿ ಹಾಕಿ, ನೊಂದಣಿಯನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡರೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಪಡೆಯುವುದಲ್ಲದೇ.

ಈ ಯೋಜನೆಯ ಮೂಲಕ ನೀವು ಪ್ರತಿಬಾರಿಯು ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್ ತುಂಬಿಸಬಹುದು ಹಾಗೂ ಯೋಜನೆಯ ಮೂಲಕ ಗ್ಯಾಸ್ ಸಿಲಿಂಡರ್ ತುಂಬಿಸಿದ್ದಾಗ ಸಬ್ಸಿಡಿ ಹಣ(Subsidy money)ವನ್ನು ಕೂಡ ಸಹ ನೀವು ಪಡೆಯಬಹುದು. ಅದ್ದರಿಂದ ಇಶ್ಟೆಲ್ಲಾ ಲಾಭವನ್ನು ಪಡೆಯಲು ತಪ್ಪದೆ ಈ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಗೆ ಅರ್ಜಿಯನ್ನು ಹಾಕಿ.

Table of Contents

ಪ್ರಧಾನ ಮಂತ್ರಿ ಉಜ್ವಲ್ ಯೋಜನೆ 2.0 | PM Ujjwala Yojana 2.0 Apply

ಪ್ರಧಾನ ಮಂತ್ರಿ ಉಜ್ವಲ್ ಯೋಜನೆ(Pradhan Mantri Ujjwala Yojana 2.0)ಯನ್ನು 2016 ರಲ್ಲಿ ಕೇಂದ್ರ ಸರ್ಕಾರವು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಾರಿಗೆ ತಂದಿದೆ. ಈ ಯೋಜನೆಯ ಮೂಲಕವು ದೇಶದಲ್ಲಿನ ಎಲ್ಲಾ ಬಡ ಕುಟುಂಬಗಳಿಗೆ ಗ್ಯಾಸ್ ಸಿಲಿಂಡರ್ ಖರೀದಿಯನ್ನು ಮಾಡಲು ಸಹಕಾರವಾಗಲಿ ಅನ್ನುವ ಉದ್ದೇಶದಿಂದ ಜಾರಿಗೆ ತರಲಾಗಿದೆ.

ಬಡ ಕುಟುಂಬದ ಮಹಿಳೆಯರು ಕಟ್ಟಿಗೆಯ ಒಲೆಯ ಮೇಲೆ ಅಡುಗೆ ಮಾಡುವುದರಿಂದ ಬರುವ ಹೊಗೆಯನ್ನು ಸೇವಿಸುವುದರಿಂದ ಮಹಿಳೆಯರಿಗೆ ತುಂಬಾ ಆರೋಗ್ಯ ಹಾಳಾಗುತ್ತದೆ, ಅದನ್ನು ತಡೆಗಟ್ಟಬೇಕು ಅನ್ನುವ ನಿಟ್ಟಿನಲ್ಲಿ ಈ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯ ಮೂಲಕ ಅಂತಹ ಬಡ ಕುಟುಂಬದ ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್ ಖರೀದಿಯನ್ನು ಮಾಡಲು ಸಹಕರಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಮೂಲಕ ಇಲ್ಲಿಯವರೆಗೆ ಸುಮಾರು 10 ಮಿಲಿಯನ್ ಅಷ್ಟು ಜನರು ದೇಶದಲ್ಲಿ ಗ್ಯಾಸ್ ಸಿಲಿಂಡರ್ ಹಾಗೂ ಸ್ಟವ್ ಪಡೆದಿದ್ದಾರೆ ಮತ್ತು ಗ್ಯಾಸ್ ಸಬ್ಸಿಡಿ ಹಣವನ್ನು ಕೂಡ ಸಹ ಪಡೆಯುತ್ತಿದ್ದಾರೆ.

ಪ್ರಧಾನ ಮಂತ್ರಿ ಉಜ್ವಲ್ ಯೋಜನೆ 2.0 ಗೆ ಅರ್ಜಿ ಹಾಕಲು ಅರ್ಹತೆಗಳು? Government Free Gas Scheme

ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯನ್ನು ದೇಶದಲ್ಲಿನ ಬಡ ಕುಟುಂಬದ ಮಹಿಳೆಯರಿಗೆ ಸಹಾಯವು ಮಾಡುವ ಉದ್ದೇಶದಿಂದ ಜಾರಿಗೆ ತರಲಾಗಿದ್ದು, ಈ ಯೋಜನೆಗೆ ಅರ್ಜಿ ಹಾಕಿ ಯೋಜನೆಯ ಲಾಭವನ್ನು ಪಡೆಯಲು ಸರ್ಕಾರವು ಕೆಲವೊಂದು ಅರ್ಹತೆಗಳನ್ನು ನಿಗದಿಪಡಿಸಿದೆ. ಆ ಅರ್ಹತೆಗಳು ಯಾವುವು ಅನ್ನುವ ವಿಷಯದ ಬಗ್ಗೆ ಮಾಹಿತಿಯು ಕೆಳಗೆ ನೀಡಲಾಗಿದೆ. ಅದನ್ನು ನೋಡಿಕೊಂಡು ಈ ಎಲ್ಲಾ ಅರ್ಹತೆಗಳು ಇರುವ ಮತ್ತು ಆಸಕ್ತಿ ಇರುವ ಜನರು ಅರ್ಜಿಯು ಹಾಕಬಹುದು.

  • ಕೇಂದ್ರ ಸರ್ಕಾರ ಮಹಿಳೆಯರಿಗೆ ಮಾತ್ರವೆ ಈ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಗೆ ಅರ್ಜಿ ಹಾಕಲು ಅವಕಾಶವನ್ನು ನೀಡಲಾಗಿದೆ.
  • ಪ್ರಧಾನ ಮಂತ್ರಿ ಉಜ್ವಲ್ ಯೋಜನೆಗೆ ಅರ್ಜಿ ಹಾಕಲು ಬಯಸುವ ಮಹಿಳೆಯ ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟ ಇರಬೇಕಗುತ್ತೆ
  • sc/st, obc , ಅಲ್ಪಸಂಖ್ಯಾತರು ಒಟ್ಟಿನಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬದ ಜನರು ಈ ಯೋಜನೆಗೆ ಅರ್ಜಿಯನ್ನು ಹಾಕಬಹುದು.
  • ಗುಡ್ಡ ಮತ್ತು ಕಾಡುಗಳಲ್ಲಿ ಮತ್ತು ದ್ವೀಪಗಳಲ್ಲಿ ವಾಸಿಸುವ ಕುಟುಂಬದ ಮಹಿಳೆಯರು ಅರ್ಜಿಯನ್ನು ಹಾಕಲು ಕೂಡ ಅವಕಾಶವು ನೀಡಲಾಗಿದೆ.
  • ಈ ಯೋಜನೆಗೆ ಅರ್ಜಿ ಹಾಕಲು ಬಯಸುವ ಮಹಿಳೆಯ ರೇಷನ್ ಕಾರ್ಡ್ ಹೊಂದಿರಬೇಕಗುತ್ತೆ .

PM ಉಜ್ವಲ ಯೋಜನೆ 2.0ಗೆ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು? Ujjwala Yojana 2.0 Required Documents List

  1. ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ : ಪ್ರಧಾನ ಮಂತ್ರಿ ಉಜ್ವಲ್ ಯೋಜನೆಗೆ ನೋಂದಣಿ ಮಾಡಲು ನಿಮ್ಮ ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ ಬೇಕು .
  2. ಆಧಾರ್ ಕಾರ್ಡ್ : ಈ ಯೋಜನೆಗೆ ಅರ್ಜಿ ಹಾಕಲು ಮಹಿಳೆಯ ಆಧಾರ್ ಕಾರ್ಡ್ ನಂಬರ್ ಬೇಕಾಗುತ್ತದೆ. ಆಧಾರ್ ಕಾರ್ಡ್ ಗೆ ಫೋನ್ ನಂಬರ್ ಕಡ್ಡಾಯವಾಗಿ ಲಿಂಕ್ ಮಾಡಿರಬೇಕಗುತ್ತೆ.
  3. ರೇಷನ್ ಕಾರ್ಡ್ : ಪ್ರಧಾನ ಮಂತ್ರಿ ಉಜ್ವಲ್ ಯೋಜನೆಗೆ ಅರ್ಜಿ ಹಾಕಲು ರೇಷನ್ ಕಾರ್ಡ್ ಅನ್ನು ಹೊಂದಿರಬೇಕಗುತ್ತೆ
  4. ಜಾತಿ ಮತ್ತು ಆದಾಯ ಪ್ರಮಾಣ : ಈ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಮೂಲಕ ನೀಡುವ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಸಬ್ಸಿಡಿ ಹಣವನ್ನು ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ನೀಡಲಾಗುತ್ತಿದ್ದು ಅರ್ಜಿ ಹಾಕಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ.
  5. ಬ್ಯಾಂಕ್ ಪಾಸ್ ಬುಕ್ : ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಹಾಕಿದ ನಂತರ ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಅನ್ನು ತುಂಬಿಸಿದಾಗ ಸರ್ಕಾರದಿಂದ ನೀಡುವ ಸಬ್ಸಿಡಿ ಹಣವನ್ನು ತೆಗೆದುಕೊಳ್ಳಲು ಅರ್ಜಿ ಹಾಕಿದ ಮಹಿಳೆಯ ಬ್ಯಾಂಕ್ ಖಾತೆಯನ್ನು ನೀಡಬೇಕು. ಇದೆ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣ ಜಮಾವು ಆಗುತ್ತದೆ.

ಪ್ರಧಾನ ಮಂತ್ರಿ ಉಜ್ವಲ್ ಯೋಜನೆಗೆ ಹೇಗೆ ಅರ್ಜಿ ಹಾಕುವುದು? How to Apply PMUY 2.0 in Kannada

ಪ್ರಧಾನಮಂತ್ರಿ ಉಜ್ವಲ್ ಯೋಜನೆಗೆ ಮಹಿಳೆಯರಿಗೆ ಅರ್ಜಿ ಹಾಕಲು ಅವಕಾಶವು ನೀಡಲಾಗಿದ್ದು, ಅರ್ಜಿ ಹಾಕಲು ಬಯಸುವ ಮಹಿಳೆಯರು ಈ ಮೇಲೆ ನೀಡಿದ ಅರ್ಹತೆಗಳನ್ನು ಮತ್ತು ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಲೇಬೇಕಗುತ್ತೆ ಆಗ ಮಾತ್ರವೆ ನೀವು ಅರ್ಜಿ ಹಾಕಬಹುದು. ಈ ಎಲ್ಲಾ ಅರ್ಹತೆಗಳನ್ನು ಮತ್ತು ದಾಖಲೆಗಳನ್ನು ನೀವು ಒಂದಿದ್ದರೆ, ಈ ಕೆಳಗೆ ನೀಡಿದ ಉಜ್ವಲ ಯೋಜನೆಗೆ ಅರ್ಜಿ ಹಾಕುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಡು ನಿಮ್ಮ ಅರ್ಜಿಯನ್ನು ಹಾಕಿ.

ಉಜ್ವಲ್ ಯೋಜನೆಗೆ ಅರ್ಜಿ ಹಾಕಲು ಇಲ್ಲಿ ಒತ್ತಿ.

ಮೇಲೆ ಕೊಟ್ಟಿರುವ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಧಿಕೃತ ವೆಬ್ಸೈಟ್ ನ ಮೇಲೆ ಕ್ಲಿಕ್ ಮಾಡಿಕೊಡು, ಅಲ್ಲಿ ನಿಮಗೆ ಬೇಕಾಗುವ ಏಜೆನ್ಸಿಯ ಆಯ್ಕೆ ಮಾಡಿಕೊಂಡು, ನಂತರ ಅಲ್ಲಿ ಕೇಳಲಾಗುವ ನಿಮ್ಮ ಎಲ್ಲಾ ದಾಖಲೆಗಳನ್ನು ಹಾಕಿ ಅರ್ಜಿಯನ್ನು ಸಲ್ಲಿಸಿ.

ನೀವು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ತಿಳಿಯುತ್ತಿಲ್ಲ ಅಂದರೆ ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (CSC) ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು

ಉಚಿತವಾಗಿ ಏನು ಸಿಗುತ್ತದೆ? Free LPG Connection for BPL Women

  • LPG ಕನೆಕ್ಷನ್
  • ಒಂದು ಗ್ಯಾಸ್ ಸಿಲಿಂಡರ್
  • ಒಂದು ಸ್ಟವ್

ಅತೀ ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್ ತುಂಬಿಸುವುದು ಹೇಗೆ? PM Ujjwala ₹300 Subsidy Details

ನೀವು ಉಜ್ವಲ್ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡ ನಂತರ ನಿಮ್ಮ ಆಧಾರ್ ನಂಬರ್ ಗೆ ಲಿಂಕ್ ಇರುವ ಮೊಬೈಲ್ ನಂಬರ್ ಅನ್ನು ನಿಮ್ಮ ಗ್ಯಾಸ್ ತುಂಬಿಸುವ ಏಜೆನ್ಸಿ ಅವರಿಗೆ ನೀಡಬೇಕು. ಅವರು ನಿಮ್ಮ ಆಧಾರ್ ಲಿಂಕ್ ಇರುವ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣವನ್ನು ಜಮ ಮಾಡುತ್ತಾರೆ. ಪ್ರಸ್ತುತ ಒಂದು ಗ್ಯಾಸ್ ಸಿಲಿಂಡರ್ ಬೆಲೆ 900 ರೂ, ಇದಕ್ಕೆ ಸರ್ಕಾರ ನೀಡುವ ಸಬ್ಸಿಡಿ ಹಣ 300 ರೂ , ಇದರಿಂದ ನೀವು ಕೇವಲ 600 ರೂ ಗೆ ಗ್ಯಾಸ್ ಸಿಲಿಂಡರ್ ತುಂಬಿಸಿದ ಹಾಗೆ ಆಗುತ್ತದೆ.

Back To Home Pageಇಲ್ಲಿ ಕ್ಲಿಕ್ ಮಾಡಿ

Conclusion

ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಕೇವಲ ಒಂದು ಸರ್ಕಾರಿ ಯೋಜನೆಯಾಗಿ ಉಳಿದಿಲ್ಲ; ಇದು ಬಡ ಎಲ್ಲಾ ಮಹಿಳೆಯರ ಬದುಕಿನಲ್ಲಿ ಬೆಳಕು ತುಂಬಿದ ಕ್ರಾಂತಿಯಾಗಿದೆ. ಮಣ್ಣಿನ ಒಲೆಯ ಹೊಗೆಯಿಂದ ಬಳಲುತ್ತಿದ್ದ ಮಹಿಳೆಯರಿಗೆ ಸ್ವಚ್ಛ ಇಂಧನವನ್ನೂ, ಸುರಕ್ಷಿತ ಅಡುಗೆ ಮನೆಯನ್ನೂ ಒದಗಿಸುವ ಮೂಲಕ ಅವರ ಆರೋಗ್ಯ ಮತ್ತು ಸಮಯವನ್ನು ಕೆಲಸವನ್ನು ಈ ಯೋಜನೆ ಮಾಡಿದೆ. ಕರ್ನಾಟಕದ ಪ್ರತಿಯೊಬ್ಬ ಅರ್ಹ ಮಹಿಳೆಯೂ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು ಎಂಬುದು ನಮ್ಮ ಆಶಯ.

ಗ್ಯಾಸ್ ಸಂಪರ್ಕ ಪಡೆಯುವುದರಿಂದ ಕೇವಲ ಅಡುಗೆ ಸುಲಭವಾಗುವುದಲ್ಲ; ಹೊಗೆಯಿಂದಾಗುವ ಕಣ್ಣು ಉರಿ, ಉಸಿರಾಟದ ಸಮಸ್ಯೆ ಮತ್ತಿತರ ಕಾಯಿಲೆಗಳಿಂದ ಮುಕ್ತಿ ಸಿಗುತ್ತದೆ. ಸಮಯ ಉಳಿತಾಯವಾಗಿ, ಆ ಉಳಿದ ಸಮಯವನ್ನು ಮಹಿಳೆಯರು ತಮ್ಮ ಮಕ್ಕಳಿಗಾಗಿ ಅಥವಾ ಸಣ್ಣಪುಟ್ಟ ಕೆಲಸಕಾಗಿ ಬಳಸಿಕೊಳ್ಳಬಹುದು. ಇದರಿಂದ ಕುಟುಂಬದ ಆರ್ಥಿಕ ಸ್ಥಿತಿಯೂ ಸುಧಾರಿಸಲು ಸಾಧ್ಯ.

ಸರ್ಕಾರವು ಸಬ್ಸಿಡಿ ಹಣವನ್ನು ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಮಾಡಿರುವುದು ಪಾರದರ್ಶಕತೆಯನ್ನು ಹೆಚ್ಚಿಸಿದ್ದು, ಮಧ್ಯವರ್ತಿಗಳ ಸಮಸ್ಯೆಗೆ ಕಡಿವಾಣ ಹಾಕಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಅನ್ನು ಉದ್ದೇಶಪೂರ್ವಕವಾಗಿ ವಿನ್ಯಾಸಗೊಳಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವುದು ಪ್ರತಿಯೊಬ್ಬ ಅರ್ಹ ಮಹಿಳೆಯ ಕರ್ತವ್ಯವೂ ಹೌದು, ಹಕ್ಕೂ ಹೌದು.

ಗಮನಿಸಿ: ಕರ್ನಾಟಕ ಫ್ಲ್ಯಾಶ್‌ನಲ್ಲಿ ಪ್ರಕಟವಾಗುವ ಎಲ್ಲಾ ಮಾಹಿತಿ ಸಂಪೂರ್ಣವಾಗಿ ನಿಖರ ಮತ್ತು ಅಧಿಕೃತವಾಗಿರುತ್ತದೆ. ಯಾವುದೇ ಅನಧಿಕೃತ ಅಥವಾ ತಪ್ಪು ಮಾಹಿತಿಯನ್ನು ಪ್ರಕಟಿಸುವುದಿಲ್ಲ.

FAQ- Free Gas Cylinder 2026 Karnataka kannada

ಉಚಿತ ಗ್ಯಾಸ್ ಸಿಲಿಂಡರ್ ಯಾವ ಯೋಜನೆಯಡಿ ಸಿಗುತ್ತದೆ?

ಉಚಿತ LPG ಕನೆಕ್ಷನ್ Pradhan Mantri Ujjwala 2.0 Yojana (PMUY2.0) ಯೋಜನೆಯಡಿ ನೀಡಲಾಗುತ್ತದೆ.

ಯಾರು ಅರ್ಜಿ ಹಾಕಬಹುದು?

18 ವರ್ಷ ಮೇಲ್ಪಟ್ಟ, ರೇಷನ್ ಕಾರ್ಡ್ ಹೊಂದಿರುವ, ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಹಿಳೆಯರು ಅರ್ಜಿ ಹಾಕಬಹುದು. ಹಿಂದೆ LPG ಕನೆಕ್ಷನ್ ಇರಬಾರದು.

ಅರ್ಜಿ ಹೇಗೆ ಹಾಕುವುದು?

ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅಥವಾ ಹತ್ತಿರದ LPG ಏಜೆನ್ಸಿಗೆ ಹೋಗಿ ಅರ್ಜಿ ಹಾಕಬಹುದು: https://www.pmuy.gov.in

ಉಚಿತವಾಗಿ ಏನು ಸಿಗುತ್ತದೆ?

LPG ಕನೆಕ್ಷನ್
ಒಂದು ಗ್ಯಾಸ್ ಸಿಲಿಂಡರ್
ಒಂದು ಸ್ಟವ್

Leave a Comment