MGNREGA Scheme 2026: ಹಸು ಕೊಟ್ಟಿಗೆ ನಿರ್ಮಾಣಕ್ಕೆ ₹57,000 ಸಹಾಯಧನ – ಅರ್ಜಿ ವಿಧಾನ

Spread the love

MGNREGA Scheme 2026:ಕರ್ನಾಟಕ ರಾಜ್ಯದ ರೈತರು ಮತ್ತು ಹೈನುಗಾರರಿಗೆ ಸರ್ಕಾರ ಒಂದು ಸುವರ್ಣಾವಕಾಶವನ್ನು ಒದಗಿಸಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA) ಅಡಿಯಲ್ಲಿ 2026ನೇ ಸಾಲಿನಲ್ಲಿ ಹಸು ಕೊಟ್ಟಿಗೆ ನಿರ್ಮಾಣಕ್ಕಾಗಿ ₹57,000 ವರೆಗಿನ ಸಹಾಯಧನವನ್ನು ನೀಡಲಾಗುತ್ತಿದೆ. ಈ ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿ ಹೈನುಗಾರಿಕೆಯನ್ನು ಉತ್ತೇಜಿಸುವ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಹಳ್ಳಿಗಳಲ್ಲಿ ದನಕರು ಸಾಕೋದು ಅನೇಕರ ಕುಲಕಸುಬು ಆಗಿದೆ. ಹೈನುಗಾರಿಕೆಯನ್ನೇ ನಂಬಿ ಬದುಕೋರು ಬಹಳಷ್ಟು ಮಂದಿ ಇದ್ದಾರೆ. ಆದರೆ ಸರಿಯಾದ ಕೊಟ್ಟಿಗೆ ಇಲ್ಲದೆ ಹಸುಗಳು ರೋಗಗಳಿಗೆ ತುತ್ತಾಗುವುದು, ಹಾಲಿನ ಉತ್ಪಾದನೆ ಕಡಿಮೆಯಾಗುವುದು ಸಾಮಾನ್ಯ. ಇಂಥವರಿಗೆ ಸರ್ಕಾರವು MGNREGA ಯೋಜನೆಯಡಿ ಗ್ರಾಮ ಪಂಚಾಯಿತಿಯ ಮೂಲಕ ಹಸು ಮತ್ತು ಎಮ್ಮೆಗಳಿಗೆ ಕೊಟ್ಟಿಗೆ ನಿರ್ಮಾಣಕ್ಕೆ 57,000 ರೂಪಾಯಿವರೆಗೂ ಸಹಾಯಧನವನ್ನು ನೀಡಲಾಗುತ್ತಿದೆ.

ಈ ಲೇಖನದಲ್ಲಿ ಈ ಯೋಜನೆ ಬೇಕಾಗುವ ದಾಖಲಾತಿಗಳು ಏನು? ಹಣ ಹೇಗೆ ಬಿಡುಗಡೆ ಆಗುತ್ತೆ? ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ ಕೊನೆವರೆಗೂ ತಪ್ಪದೆ ಓದಿ

Table of Contents

ಹಸು ಕೊಟ್ಟಿಗೆ ಯೋಜನೆಯ ಉದ್ದೇಶಗಳು (MGNREGA Scheme 2026 Karnataka Objectives)

MGNREGA Scheme 2026: ಹಸು ಕೊಟ್ಟಿಗೆ ನಿರ್ಮಾಣಕ್ಕೆ ₹57,000 ಸಹಾಯಧನ – ಅರ್ಜಿ ವಿಧಾನ Cattle Shed Scheme FREE

MGNREGA ಹಸು ಕೊಟ್ಟಿಗೆ ಯೋಜನೆ 2026 ಕರ್ನಾಟಕದ ರೈತರಿಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಈ ಯೋಜನೆಯ ಪ್ರಮುಖ ಉದ್ದೇಶಗಳು:

  • ಗ್ರಾಮೀಣ ಉದ್ಯೋಗ ಸೃಷ್ಟಿ: ಕೊಟ್ಟಿಗೆ ನಿರ್ಮಾಣದ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು.
  • ಹೈನುಗಾರಿಕೆ ಉತ್ತೇಜನ: ರೈತರಿಗೆ ಆರ್ಥಿಕ ನೆರವು ನೀಡಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸುವುದು.
  • ಹಾಲು ಉತ್ಪಾದನೆ ಹೆಚ್ಚಳ: ವೈಜ್ಞಾನಿಕ ವಿಧಾನದ ಕೊಟ್ಟಿಗೆ ನಿರ್ಮಾಣದಿಂದ ಹಸುಗಳ ಆರೋಗ್ಯ ಸುಧಾರಿಸಿ ಹಾಲಿನ ಉತ್ಪಾದನೆಯನ್ನು ವೃದ್ಧಿಸುವುದು.
  • ರೈತರ ಆದಾಯ ಹೆಚ್ಚಳ: ಹೆಚ್ಚುವರಿ ಹಾಲು ಉತ್ಪಾದನೆಯಿಂದ ರೈತರ ಆದಾಯವನ್ನು ಹೆಚ್ಚಿಸುವುದು.
  • ಸುಧಾರಿತ ಪಶುಪಾಲನೆ: ಹಸುಗಳಿಗೆ ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣ ಒದಗಿಸಿ ಪಶುಪಾಲನೆಯನ್ನು ಸುಧಾರಿಸುವುದು.
  • ಗ್ರಾಮೀಣ ಆರ್ಥಿಕತೆ ಬಲಪಡಿಸುವಿಕೆ: ಹೈನುಗಾರಿಕೆ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಸದೃಢಗೊಳಿಸುವುದು.
  • ದನಗಳಿಗೆ ರಕ್ಷಣೆ: ಮಳೆ ಬಿಸಿಲಿನಿಂದ ದನಗಳಿಗೆ ರಕ್ಷಣೆ ಸಿಗಲು

MGNREGA ಹಸು ಕೊಟ್ಟಿಗೆ ಯೋಜನೆ 2026 ಕ್ಕೆ ಯಾರು ಅರ್ಜಿ ಸಲ್ಲಿಸಬಹುದು (ಅರ್ಹತಾ ಮಾನದಂಡ)

MGNREGA ಹಸು ಕೊಟ್ಟಿಗೆ ಯೋಜನೆ 2026 ಗೆ ಅರ್ಜಿ ಸಲ್ಲಿಸಲು ರೈತರು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:

  1. ಅರ್ಜಿದಾರರು ಗ್ರಾಮೀಣ ಪ್ರದೇಶದ ಶಾಶ್ವತ ನಿವಾಸಿಯಾಗಿರಬೇಕು.
  2. MGNREGA ಯೋಜನೆಯಡಿ ಜಾಬ್ ಕಾರ್ಡ್ (Job Card) ಹೊಂದಿರಬೇಕು. ಇದು ಅತ್ಯಂತ ಮುಖ್ಯವಾದ ಮಾನದಂಡವಾಗಿದೆ. ಜಾಬ್ ಕಾರ್ಡ್ ಇಲ್ಲದವರು ಮೊದಲು ಜಾಬ್ ಕಾರ್ಡ್ಗೆ ಅರ್ಜಿ ಸಲ್ಲಿಸಬೇಕಗುತ್ತೆ.
  3. ಅರ್ಜಿದಾರರು ಕೊಟ್ಟಿಗೆ ನಿರ್ಮಿಸಲು ಸ್ವಂತ ಜಾಗ ಅಥವಾ ಭೂಮಿಯನ್ನು ಹೊಂದಿರಬೇಕು. ಸ್ವಂತ ಜಮೀನಿನ RTC/Pahani ಹೇಳಬೇಕಾಗುತ್ತೆ.
  4. ಅರ್ಜಿದಾರರು ಕನಿಷ್ಠ 2 ಹಸುಗಳು ಅಥವಾ ಎಮ್ಮೆಗಳನ್ನು ಹೊಂದಿರಬೇಕು. ಇದಕ್ಕೆ ಪಶು ಆಸ್ಪತ್ರೆಯಿಂದ ಲಸಿಕೆ ಪ್ರಮಾಣ ಪತ್ರ ಪಡೆದಿರಬೇಕಗುತ್ತೆ.
  5. ಬಡತನ ರೇಖೆಗಿಂತ ಕೆಳಗಿನ (BPL) ಕುಟುಂಬಗಳಿಗೆ ಆದ್ಯತೆ ನೀಡಲಾಗುತ್ತದೆ. APL ಕಾರ್ಡ್ ಹೊಂದಿರುವವರೂ ಅರ್ಜಿ ಸಲ್ಲಿಸಬಹುದು ಆದರೆ BPL ಗೆ ಆದ್ಯತೆ ಹೆಚ್ಚು.
  6. ಅರ್ಜಿದಾರರು MGNREGA ಅಡಿಯಲ್ಲಿ ಕೊಟ್ಟಿಗೆ ನಿರ್ಮಾಣಕ್ಕೆ ಹಿಂದೆ ಅನುದಾನ ಪಡೆದಿರಬಾರದು. ಈ ಯೋಜನೆಯ ಲಾಭವನ್ನು ಒಬ್ಬ ವ್ಯಕ್ತಿ ಒಮ್ಮೆ ಮಾತ್ರ ಪಡೆಯಬಹುದು.

mgnrega hasu kottige yojane 2026 ಎಷ್ಟು ಸಹಾಯಧನ ಸಿಗುತ್ತೆ ಹೇಗೆ ಸಿಗುತ್ತೆ?

MGNREGA ಹಸು ಕೊಟ್ಟಿಗೆ ಯೋಜನೆ 2026(hasu kottige yojane 2026) ಅಡಿಯಲ್ಲಿ ರೈತರಿಗೆ ಸಿಗುವ ಸಹಾಯಧನ ಎಷ್ಟು(How much subsidy do farmers get?), ಹೇಗೆ ಸಿಗುತ್ತೆ ಎಂಬ ಮಾಹಿತಿ ಕೆಳಗೆ ತಿಳಿಸಲಾಗಿದೆ

  • ₹57,000 ವರೆಗಿನ ಆರ್ಥಿಕ ಸಹಾಯ (ಇದು ಕೊಟ್ಟಿಗೆಯ ಗಾತ್ರ ಮತ್ತು ಮಾದರಿಯನ್ನು ಅವಲಂಬಿಸಿರುತ್ತದೆ).
  • ಕೊಟ್ಟಿಗೆ ನಿರ್ಮಾಣದ ಶೇಕಡಾ 90 ರಷ್ಟು ಕಾರ್ಮಿಕ ವೆಚ್ಚ ಮತ್ತು ಶೇಕಡಾ 10 ರಷ್ಟು ಮೆಟೀರಿಯಲ್ ವೆಚ್ಚವನ್ನು MGNREGA ಭರಿಸುತ್ತದೆ.
  • ಒಂದು ಕೊಟ್ಟಿಗೆ ನಿರ್ಮಾಣಕ್ಕೆ 90-95 ದಿನಗಳ ಕಾರ್ಮಿಕ ದಿನಗಳನ್ನು ಲೆಕ್ಕಹಾಕಲಾಗುತ್ತದೆ. ಪ್ರತಿ ಕಾರ್ಮಿಕ ದಿನಕ್ಕೆ ಸದ್ಯಕ್ಕೆ ₹350-400 ರಂತೆ ಅನುದಾನ ನೀಡಲಾಗುತ್ತದೆ.
  • ಅನುದಾನದ() ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ (ಜಾಬ್ ಕಾರ್ಡ್ ಲಿಂಕ್ ಆದ ಖಾತೆಗೆ) DBT ಮೂಲಕ ಜಮಾ ಮಾಡಲಾಗುತ್ತದೆ.
  • ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿಲ್ಲ. ಸಂಪೂರ್ಣ ಉಚಿತ ಸೇವೆ.

MGNREGA Cow Shed Subsidy 2026 ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು? (Required Documents)

MGNREGA ಹಸು ಕೊಟ್ಟಿಗೆ ಯೋಜನೆ 2026 ಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಕಡ್ಡಾಯ:

  • MGNREGA ಜಾಬ್ ಕಾರ್ಡ್ (ಜಾಬ್ ಕಾರ್ಡ್ ನಂಬರ್)
  • ಆಧಾರ್ ಕಾರ್ಡ್ (Aadhaar Card) – ಜಾಬ್ ಕಾರ್ಡ್ ಗೆ ಲಿಂಕ್ ಆಗಿರಬೇಕು
  • ರೇಷನ್ ಕಾರ್ಡ್ (Ration Card – BPL/APL)
  • ಭೂಮಿಯ ದಾಖಲೆಗಳು: ಇತ್ತೀಚಿನ RTC/Pahani (ಸ್ವಂತ ಜಮೀನಿನ ಪ್ರತಿ), ಮ್ಯುಟೇಷನ್
  • ಬ್ಯಾಂಕ್ ಖಾತೆ ವಿವರಗಳು: ಪಾಸ್ಬುಕ್ ನಕಲು, IFSC ಕೋಡ್ (ಆಧಾರ್ ಲಿಂಕ್ ಆಗಿರಬೇಕು)
  • ಜಾತಿ ಪ್ರಮಾಣ ಪತ್ರ (SC/ST ಅರ್ಜಿದಾರರಿಗೆ ಕಡ್ಡಾಯ)
  • ಆದಾಯ ಪ್ರಮಾಣ ಪತ್ರ (Income Certificate – BPL ಪ್ರಮಾಣ ಪತ್ರ)
  • ಹಸುಗಳ ಮಾಹಿತಿ: ಪಶು ಆಸ್ಪತ್ರೆಯಿಂದ ಪಡೆದ ಲಸಿಕೆ ಪ್ರಮಾಣ ಪತ್ರ, ಹಸುಗಳ ನೋಂದಣಿ ಪ್ರಮಾಣ ಪತ್ರ
  • ಪಾಸ್ಪೋರ್ಟ್ ಸೈಜ್ ಫೋಟೋ (2-3)
  • ಮೊಬೈಲ್ ನಂಬರ್

MGNREGA ಹಸು ಕೊಟ್ಟಿಗೆ ಯೋಜನೆ 2026: ಅರ್ಜಿ ಸಲ್ಲಿಸುವ ವಿಧಾನ (How to Apply)

MGNREGA ಹಸು ಕೊಟ್ಟಿಗೆ ಯೋಜನೆ 2026 ಗೆ ಅರ್ಜಿ(Apply for MGNREGA Cow Shed Scheme 2026) ಸಲ್ಲಿಸಲು ಎರಡು ವಿಧಾನದಲ್ಲಿ ಅರ್ಜಿ ಸಲ್ಲಿಸುವುದು.

ವಿಧಾನ 1: MGNREGA ಹಸು ಕೊಟ್ಟಿಗೆ ಸಹಾಯಧನ 2026 ಗೆ ಅರ್ಜಿ ಆಫ್ಲೈನ್ ಮೂಲಕ (Offline Method)

  1. ಗ್ರಾಮ ಪಂಚಾಯತ್ ಕಚೇರಿಗೆ ಭೇಟಿ: ನಿಮ್ಮ ಹತ್ತಿರದ ಗ್ರಾಮ ಪಂಚಾಯತ್ ಕಚೇರಿ ಅಥವಾ MGNREGA ಸಹಾಯಕ ಕಚೇರಿಗೆ ಭೇಟಿ ನೀಡಿ.
  2. ನಂತರ MGNREGA ಯೋಜನೆಯಡಿ ವೈಯಕ್ತಿಕ ಕೊಟ್ಟಿಗೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಲು ಬರುವ ಫಾರ್ಮ್ (ಸಾಮಾನ್ಯವಾಗಿ ಫಾರ್ಮ್ 6 – ಕಾಮಗಾರಿಗಾಗಿ ಅರ್ಜಿ) ಪಡೆದುಕೊಳ್ಳಿ.
  3. ನಂತರ ಫಾರ್ಮ್ ಅನ್ನು ಸಂಪೂರ್ಣವಾಗಿ ಭರ್ತಿ ಮಾಡಿ. ನಿಮ್ಮ ಹೆಸರು, ಜಾಬ್ ಕಾರ್ಡ್ ಸಂಖ್ಯೆ, ಭೂಮಿಯ ವಿವರ, ಹಸುಗಳ ಸಂಖ್ಯೆ, ಕೊಟ್ಟಿಗೆ ನಿರ್ಮಿಸಬೇಕಾದ ಜಾಗದ ವಿವರವನ್ನು ನಮೂದಿಸಿ.
  4. ನಂತರ ಎಲ್ಲಾ ಅಗತ್ಯ ದಾಖಲೆಗಳ ಫೋಟೋಕಾಪಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ.
  5. ನಂತರ ಭರ್ತಿ ಮಾಡಿದ ಅರ್ಜಿಯನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಅಥವಾ MGNREGA ಫೀಲ್ಡ್ ಅಸಿಸ್ಟೆಂಟ್ಗೆ ಸಲ್ಲಿಸಿ.
  6. ಅರ್ಜಿ ಸಲ್ಲಿಸಿದ್ದಕ್ಕೆ ರಶೀದಿ (Acknowledgement) ಪಡೆಯಲು ಮರೆಯಬೇಡಿ. ರಶೀದಿಯ ಮೇಲೆ ನಿಮ್ಮ ಅರ್ಜಿ ಸಂಖ್ಯೆ ಇರುತ್ತದೆ.

ವಿಧಾನ 2: ಆನ್ಲೈನ್ ಮೂಲಕ MGNREGA ಯೋಜನೆ ಗೆ ಅರ್ಜಿ ಸಲ್ಲಿಸುವುದು ಹೇಗೆ?(Online Method)

ನಿಮ್ಮ ಹತ್ತಿರದ ಗ್ರಾಮ ಪಂಚಾಯತ್ ಕಚೇರಿ(Gram Panchayat Office) ಅಥವಾ MGNREGA ಸಹಾಯಕ ಕಚೇರಿಗೆ ಭೇಟಿ ಆಗಿಲ್ಲ ಅಂದರೆ ನಿಮ್ಮ ಮೊಬೈಲ್ ಮೂಲಕ ಮನೆಯಲ್ಲಿ ಕುಳಿತು ಅರ್ಜಿ ಸಲ್ಲಿಸಬಹುದು

  • ಮೊದಲು MGNREGA ಹೆಚ್ಎಂ ಸಾಫ್ಟ್ ಪೋರ್ಟಲ್ (MGNREGA HM Soft Portal) –https://mnregaweb4.nic.in/netnrega/ ಗೆ ಭೇಟಿ ನೀಡಿ.
  • ನಂತರ ‘Citizen Login‘ ಅಥವಾ ‘Apply Online’ ವಿಭಾಗಕ್ಕೆ ಹೋಗಿ. ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತ್ ಆಯ್ಕೆ ಮಾಡಿಕೊಳ್ಳಿ.
  • ನಂತರ ನಿಮ್ಮ MGNREGA ಜಾಬ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ. ಜಾಬ್ ಕಾರ್ಡ್(Job card) ಗೆ ಸಂಬಂಧಿಸಿದ ವಿವರಗಳು ತೆರೆಯ ಮೇಲೆ ಕಾಣಿಸುತ್ತವೆ.
  • ನಂತರ ‘ಕಾಮಗಾರಿಗಾಗಿ ಅರ್ಜಿ‘ (Work Application) ವಿಭಾಗದಲ್ಲಿ ‘ವೈಯಕ್ತಿಕ ಕೊಟ್ಟಿಗೆ ನಿರ್ಮಾಣ‘ (Individual Cattle Shed) ಆಯ್ಕೆ ಮಾಡಿ.
  • ನಂತರ ಕೊಟ್ಟಿಗೆ ನಿರ್ಮಿಸಬೇಕಾದ ಸ್ಥಳ, ಗಾತ್ರ, ಹಸುಗಳ ಸಂಖ್ಯೆ ಮುಂತಾದ ಮಾಹಿತಿಯನ್ನು ಭರ್ತಿ ಮಾಡಿ.
  • ಕೇಳುವ ಅಗತ್ಯ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್ಲೋಡ್ ಮಾಡಿ.
  • ನಂತರ ‘Submit’ ಬಟನ್ ಒತ್ತಿ. ಅರ್ಜಿ ಸಂಖ್ಯೆಯನ್ನು ಒಂದು ಬುಕ್ನಲ್ಲಿ ಬರದು ಇಟ್ಟುಕೊಳ್ಳಿ.

MGNREGA Scheme 2026 Karnataka ಅರ್ಜಿ ಸಲ್ಲಿಸಿದ ನಂತರದ ಪ್ರಕ್ರಿಯೆ ಹೇಗೆ?(After Application)

ಅರ್ಜಿ ಸಲ್ಲಿಸಿದ ನಂತರ ನಿಮ್ಮ ಕಾಮಗಾರಿ ಮಂಜೂರಾಗಲು ಕೆಲವು ಹಂತಗಳನ್ನು ದಾಟಬೇಕಾಗುತ್ತದೆ:

  • ನಿಮ್ಮ ಅರ್ಜಿಯನ್ನು ಗ್ರಾಮ ಪಂಚಾಯತ್(Gram sabha) ನಡೆಸುವ ಗ್ರಾಮ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಗ್ರಾಮ ಸಭೆಯ ಅನುಮೋದನೆ ಅಗತ್ಯ.
  • ಸ್ಥಳೀಯ MGNREGA ಅಧಿಕಾರಿಗಳು ಮತ್ತು ತಾಂತ್ರಿಕ ಸಿಬ್ಬಂದಿ ನಿಮ್ಮ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಹಸುಗಳ ಸಂಖ್ಯೆ, ಜಾಗದ ಲಭ್ಯತೆ, ಭೂಮಿಯ ದಾಖಲೆಗಳನ್ನು ಪರಿಶೀಲಿಸುತ್ತಾರೆ.
  • ಪರಿಶೀಲನೆ ಬಳಿಕ ನಿಮ್ಮ ಅರ್ಜಿ ಮಂಜೂರಾದರೆ, ನಿಮಗೆ ಕಾಮಗಾರಿ ಆದೇಶ ನೀಡಲಾಗುತ್ತದೆ. ಇದರಲ್ಲಿ ಕೊಟ್ಟಿಗೆ ನಿರ್ಮಾಣದ ಮಾದರಿ ಮತ್ತು ಅಂದಾಜು ವೆಚ್ಚವನ್ನು ನಮೂದಿಸಲಾಗಿರುತ್ತದೆ.
  • ಕಾಮಗಾರಿ ಆದೇಶ ಬಂದ ನಂತರ MGNREGA ನಿಗದಿಪಡಿಸಿದ ಮಾದರಿಯಲ್ಲಿ ಕೊಟ್ಟಿಗೆ ನಿರ್ಮಿಸಬೇಕು. ನಿರ್ಮಾಣದ ಸಮಯದಲ್ಲಿ ಫೋಟೋಗಳು, ಬಿಲ್ಲುಗಳನ್ನು ಸಂಗ್ರಹಿಸಿಡುವುದು ಉತ್ತಮ.
  • ಕೊಟ್ಟಿಗೆ ನಿರ್ಮಾಣದ ಪ್ರತಿ ಹಂತದಲ್ಲೂ ಅಧಿಕಾರಿಗಳು ಪರಿಶೀಲಿಸಬಹುದು. ಸಾಮಾನ್ಯವಾಗಿ 50% ಮತ್ತು 100% ಕಾಮಗಾರಿ ಪೂರ್ಣಗೊಂಡಾಗ ಪರಿಶೀಲನೆ ನಡೆಯುತ್ತದೆ.
  • ಕೊಟ್ಟಿಗೆ ನಿರ್ಮಾಣ(Barn construction) ಸಂಪೂರ್ಣವಾಗಿ ಮುಗಿದ ನಂತರ ಅಧಿಕಾರಿಗಳು ಅಂತಿಮ ಪರಿಶೀಲನೆ ನಡೆಸುತ್ತಾರೆ. ಮಾದರಿಯಂತೆ ನಿರ್ಮಾಣವಾಗಿದೆಯೇ, ಗುಣಮಟ್ಟ ಹೇಗಿದೆ ಎಂದು ಪರಿಶೀಲಿಸುತ್ತಾರೆ.
  • ಅಂತಿಮ ಪರಿಶೀಲನೆಯ ನಂತರ ಅನುದಾನ(grant)ದ ಸಂಪೂರ್ಣ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ (ಜಾಬ್ ಕಾರ್ಡ್ ಲಿಂಕ್ ಆದ ಖಾತೆಗೆ) ನೇರವಾಗಿ ಜಮಾ ಮಾಡಲಾಗುತ್ತದೆ.

MGNREGA Hasu Kottige Yojane 2026 ಫಲಾನುಭವಿ ಪಟ್ಟಿ ಪರಿಶೀಲನೆ (MGNREGA Cow Shed Subsidy 2026 Beneficiary List check)

ನಿಮ್ಮ ಹೆಸರು ಆಯ್ಕೆಯಾಗಿದೆಯೇ ಮತ್ತು ಕಾಮಗಾರಿ ಮಂಜೂರಾಗಿದೆಯೇ ಎಂದು ಎರಡು ವಿಧಾನದಲ್ಲಿ ತಿಳಿಯಬಹುದು ಹೇಗೆ ಅಂತ ಈ ಕೆಳಗೆ ತಿಳಿಸಲಾಗಿದೆ

ಫಲಾನುಭವಿ ಪಟ್ಟಿ ಪರಿಶೀಲನೆ ಆನ್ಲೈನ್ ಮೂಲಕ:

  • ಮೊದಲು MGNREGA ಅಧಿಕೃತ ವೆಬ್ಸೈಟ್ (https://mnregaweb4.nic.in/netnrega/) ಗೆ ಭೇಟಿ ನೀಡಿ.
  • ನಂತರ ‘Reports‘ ವಿಭಾಗಕ್ಕೆ ಹೋಗಿ. ನಿಮ್ಮ ರಾಜ್ಯ (ಕರ್ನಾಟಕ), ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತ್ ಆಯ್ಕೆ ಮಾಡಿ.
  • ನಂತರ ‘Labour Budget‘ ಅಥವಾ ‘Scheme details‘ ಅಡಿಯಲ್ಲಿ ‘ಇಂದಿನ ಕಾಮಗಾರಿಗಳು’ (Today’s Works) ಅಥವಾ ‘ಕಾಮಗಾರಿ ಸಾರಾಂಶ’ (Work Summary) ನೋಡಬಹುದು.
  • ನಿಮ್ಮ ಜಾಬ್ ಕಾರ್ಡ್ ಸಂಖ್ಯೆ ನಮೂದಿಸಿಯೂ ನೇರವಾಗಿ ಸ್ಟೇಟಸ್ ಪರಿಶೀಲಿಸಬಹುದು.

ಫಲಾನುಭವಿ ಪಟ್ಟಿ ಪರಿಶೀಲನೆ ಆಫ್ಲೈನ್ ಮೂಲಕ:

  • ನಿಮ್ಮ ಗ್ರಾಮ ಪಂಚಾಯತ್ ಕಚೇರಿಯಲ್ಲಿರುವ ಸೂಚನಾ ಫಲಕ (Notice Board) ನೋಡಿ. ಅಲ್ಲಿ ಮಂಜೂರಾದ ಫಲಾನುಭವಿಗಳ ಪಟ್ಟಿಯನ್ನು ಹಾಕಲಾಗುತ್ತದೆ.
  • MGNREGA ಸಹಾಯಕ ಅಧಿಕಾರಿ ಅಥವಾ PDO ಅವರನ್ನು ನೇರವಾಗಿ ಸಂಪರ್ಕಿಸಿ ಕೇಳಿ ಮಾಹಿತಿ ಪಡೆಯಬಹುದು.

ಜಿಪಿಎಸ್ ಫೋಟೋ ಬಹಳ ಮುಖ್ಯ?

ಯೋಜನೆ ಪ್ರಕಾರ 3 ಹಂತಗಳಲ್ಲಿ ಜಿಪಿಎಸ್ ಫೋಟೋ ತೆಗೆಯುವುದು ಕಡ್ಡಾಯ:

  1. ಕೊಟ್ಟಿಗೆ ನಿರ್ಮಾಣಕ್ಕೂ ಮುನ್ನ ಖಾಲಿ ಜಗದ ಫೋಟೋ
  2. ಕೊಟ್ಟಿಗೆ ಅರ್ಥ ನಿರ್ಮಾಣ ಹಂತದ ನಂತರ ಫೋಟೋ
  3. ಸಂಪೂರ್ಣ ನಿರ್ಮಾಣ ನಂತರ ಫೋಟೋ

3 ಹಂತಗಳಲ್ಲಿ ಜಿಪಿಎಸ್ ಫೋಟೋ ತೆಗೆದು ಅಪ್ಲೋಡ್ ಮಾಡಿದ ಬಳಿಕ ನಿಮಗೆ ಸಹಾಯಧನ ಹಣ ಬಿಡುಗಡೆ ಆಗುತ್ತೆ ಫೋಟೋ ಅಪ್ಲೋಡ್ ಆಗಿಲ್ಲ ಅಂದರೆ ಪಾವತಿ ವಿಳಂಬವಾಗುವುದು

Back To Home Pageಇಲ್ಲಿ ಕ್ಲಿಕ್ ಮಾಡಿ

Conclusion – MGNREGA Scheme 2026 (ಹಸು ಕೊಟ್ಟಿಗೆ ₹57,000 ಸಹಾಯಧನ)

MGNREGA ಹಸು ಕೊಟ್ಟಿಗೆ ಯೋಜನೆ 2026 ಕರ್ನಾಟಕದ ರೈತರಿಗೆ, ವಿಶೇಷವಾಗಿ ಹೈನುಗಾರಿಕೆಯನ್ನೇ ಅವಲಂಬಿಸಿರುವವರಿಗೆ ಒಂದು ದೊಡ್ಡ ವರದಾನ. ₹57,000 ವರೆಗಿನ ಅನುದಾನದಿಂದ ಉತ್ತಮ ಮಾದರಿಯ ಕೊಟ್ಟಿಗೆ ನಿರ್ಮಿಸಿಕೊಂಡು ಹಸುಗಳ ಆರೋಗ್ಯ ಕಾಪಾಡಬಹುದು, ಹಾಲಿನ ಉತ್ಪಾದನೆ ಹೆಚ್ಚಿಸಬಹುದು. ಅರ್ಹ ರೈತರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಗ್ರಾಮ ಪಂಚಾಯತ್ ಕಚೇರಿ, ರೈತ ಸಂಪರ್ಕ ಕೇಂದ್ರ ಅಥವಾ ಪಶುಪಾಲನಾ ಇಲಾಖೆಯನ್ನು ಸಂಪರ್ಕಿಸಿ. ಅರ್ಜಿ ಸಲ್ಲಿಸಲು ನೇರವಾಗಿ ಸರ್ಕಾರಿ ಕಚೇರಿಗಳಲ್ಲಿಯೇ ಅರ್ಜಿ ಸಲ್ಲಿಸಿ

ಗಮನಿಸಿ: ಕರ್ನಾಟಕ ಫ್ಲ್ಯಾಶ್‌ನಲ್ಲಿ ಪ್ರಕಟವಾಗುವ ಎಲ್ಲಾ ಮಾಹಿತಿ ಸಂಪೂರ್ಣವಾಗಿ ನಿಖರ ಮತ್ತು ಅಧಿಕೃತವಾಗಿರುತ್ತದೆ. ಯಾವುದೇ ಅನಧಿಕೃತ ಅಥವಾ ತಪ್ಪು ಮಾಹಿತಿಯನ್ನು ಪ್ರಕಟಿಸುವುದಿಲ್ಲ.

FAQ- MGNREGA Scheme 2026 (ಹಸು ಕೊಟ್ಟಿಗೆ ₹57,000 ಸಹಾಯಧನ)

MGNREGA ಯೋಜನೆಯಡಿ ಹಸು ಕೊಟ್ಟಿಗೆ ನಿರ್ಮಾಣಕ್ಕೆ ಎಷ್ಟು ಸಹಾಯಧನ ಸಿಗುತ್ತದೆ?

👉 ಸುಮಾರು ₹57,000 ವರೆಗೆ ಸಹಾಯಧನ ಸರ್ಕಾರದಿಂದ ನೀಡಲಾಗುತ್ತದೆ (ಜಿಲ್ಲೆ/ರಾಜ್ಯ ಮಾರ್ಗಸೂಚಿಯಂತೆ ಬದಲಾವಣೆ ಇರಬಹುದು).

ಯಾರು ಈ ಯೋಜನೆಗೆ ಅರ್ಜಿ ಹಾಕಬಹುದು?

ಗ್ರಾಮೀಣ ಪ್ರದೇಶದ ಜಾಬ್ ಕಾರ್ಡ್ ಹೊಂದಿರುವ ರೈತರು ಅರ್ಜಿ ಸಲ್ಲಿಸಬಹುದು. BPL ಕುಟುಂಬಗಳಿಗೆ ಆದ್ಯತೆ ಇರಬಹುದು.

MGNREGA ಯೋಜನೆ ಅರ್ಜಿ ಹೇಗೆ ಹಾಕಬೇಕು?

ಗ್ರಾಮ ಪಂಚಾಯಿತಿ ಕಚೇರಿ ಮೂಲಕ ಅಥವಾ ಸಂಬಂಧಿತ MGNREGA ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಹಣ ಯಾವಾಗ ಬಿಡುಗಡೆ ಆಗುತ್ತದೆ?

ಕೆಲಸದ ಪ್ರಗತಿ ಪರಿಶೀಲನೆಯ ನಂತರ, ಫೋಟೋ ಮತ್ತು ದಾಖಲೆಗಳ ಪರಿಶೀಲನೆ ಪೂರ್ಣಗೊಂಡ ಬಳಿಕ ಹಂತ ಹಂತವಾಗಿ ಹಣ ಜಮಾ ಆಗುತ್ತದೆ.

ನಗರ ಪ್ರದೇಶದವರು ಅರ್ಜಿ ಹಾಕಬಹುದೇ?

ಇಲ್ಲ. ಈ ಯೋಜನೆ ಗ್ರಾಮೀಣ ಪ್ರದೇಶದವರಿಗೆ ಮಾತ್ರ ಅನ್ವಯಿಸುತ್ತದೆ.

ಹಸು ಇರದೇ ಇದ್ದರೂ ಕೊಟ್ಟಿಗೆ ನಿರ್ಮಾಣಕ್ಕೆ ಅರ್ಜಿ ಹಾಕಬಹುದೇ?

ಸಾಮಾನ್ಯವಾಗಿ ಹಸು ಸಾಕಾಣಿಕೆ ಮಾಡುವ ರೈತರಿಗೆ ಮಾತ್ರ ಈ ಸಹಾಯಧನ ಅನ್ವಯಿಸುತ್ತದೆ.

Leave a Comment